Categories: ಉಡುಪಿ

ಕಾರ್ಕಳ: ಅಪ್ರಾಪ್ತ ಯುವಕನಿಂದ ನಕಲಿ ಮತದಾನ, ಕಾಂಗ್ರೆಸ್‌ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ

ಕಾರ್ಕಳ: ಅಪ್ರಾಪ್ತ ಯುವಕನೊಬ್ಬ ನಕಲಿ ಮತದಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆ ಬುಧವಾರ ರಾತ್ರಿ ನಡೆದಿದೆ.

ಈ ಬಗ್ಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿಗಳು ಸಂಚರಿಸಬೆಕಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಪೋಲೀಸರ ಜೊತೆ ವಾಗ್ವಾದ ನಡೆಸಿದರು

ಮುಂಜಾನೆ ಮತಯಂತ್ರ ಕೈಕೊಟ್ಟ ಕಾರಣ ಒಂದು ಘಂಟೆ ತಡವಾಗಿ ಮತದಾನ ಅರಂಭವಾಗಿತ್ತು.

ಒಟ್ಟು ಮತದಾನ ವಿವರ:
ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ209 ಬೂತ್ ಗಳಿದ್ದು ಅದರಲ್ಲಿ ಪುರುಷ 91435 ಮತದಾರರಿದ್ದು , 99142 ಮಹಿಳಾ ಮತದಾರರಿದ್ದು ಒಟ್ಟು 190577 ಮತದಾರರಿದ್ದಾರೆ. ಅದರಲ್ಲಿ 81068 ಮಹಿಳಾ ಮತದಾರರು 73870 ಪುರುಷ ಮತದಾರರು ಮತ ಚಲಾಯಿಸಿದ್ದಾರೆ . ಒಟ್ಟು 154938 ಮತಗಳು ಚಲಾವಣೆಯಾಗಿವೆ. ಶೇಕಡಾ 81.30% ಮತದಾನವಾಗಿದೆ.

Sneha Gowda

Recent Posts

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಟಗರು ಪುಟ್ಟಿ’ ಮಾನ್ವಿತಾ ಕಾಮತ್

ಸ್ಯಾಂಡಲ್​ವುಡ್​​ ನಟಿ ಮಾನ್ವಿತಾ ಕಾಮತ್ ವಿವಾಹ ಇಂದು (ಮೇ 1) ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್…

4 mins ago

ಮೇ 3ರಂದು ವಿದೇಶದಿಂದ ಪ್ರಜ್ವಲ್ ರೇವಣ್ಣ ವಾಪಾಸ್

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಸ್‌ಐಟಿ ತನಿಖೆ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ, ಲೋಕಸಭಾ ಚುನಾವಣೆ ಮುಗಿದ ಬಳಿಕ…

18 mins ago

ಪ್ರಜ್ವಲ್‌ ಜೊತೆ ಈಶ್ವರಪ್ಪ ಪುತ್ರನಿಗೂ ಅಂಟಿಕೊಂಡ ಅಶ್ಲೀಲ ಸಿಡಿ ಭೀತಿ !

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.…

34 mins ago

ತೊಟ್ಟಂ: ಸ್ಟೀಫನ್ ರೊಡ್ರಿಗಸ್ ಅವರಿಗೆ ಗುರುದೀಕ್ಷೆ ಪ್ರದಾನ

ಉಡುಪಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಗುರುವಾಗಿ ಸ್ಟೀಫನ್ ರೊಡ್ರಿಗಸ್ ಅವರಿಗೆ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತೊಟ್ಟಂ ಸಂತ…

47 mins ago

ರಂಗಭಾಸ್ಕರ ಪ್ರಶಸ್ತಿಗೆ ಚಲನಚಿತ್ರ, ಕಿರುತೆರೆ ನಟ ನವೀನ್ ಡಿ ಪಡೀಲ್ ಆಯ್ಕೆ

ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರೀ ಪ್ರತಿಭಾನ್ವಿತ ರಂಗನಟ…

56 mins ago

ಕನ್ನಡ ಸಾಹಿತ್ಯ ಪರಿಷತ್ ನಿಂದ ಶ್ರೀನಿವಾಸ್ ಪ್ರಸಾದ್ ರವರ ಶ್ರದ್ಧಾಂಜಲಿ ಸಭೆ

ಶ್ರೀನಿವಾಸ್ ಪ್ರಸಾದ್ ಎಂದರೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್…

1 hour ago