Categories: ಉಡುಪಿ

ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ, ಶಿಸ್ತು ಕ್ರಮದ ಎಚ್ಚರಿಕೆ: ಶಾಸಕ ರಘುಪತಿ ಭಟ್

ಉಡುಪಿ:  ಜಿಲ್ಲೆಯಲ್ಲಿ ಇಂದು ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ ನಡೆದಿದ್ದು, ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಮನೆಗೆ ಮರಳಿದ್ದಾರೆ.

ಈ ಸಂಬಂಧಿಸಿದಂತೆ ಮಾತನಾಡಿದ ಶಾಸಕ ರಘುಪತಿ ಭಟ್ ವಿದ್ಯಾರ್ಥಿನಿಯರ ಮೇಲೆ ಶಿಸ್ತು ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಇದೊಂದು ಷಡ್ಯಂತ್ರ ಎನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು.

ಆದರೂ ಇಂದು ಬೆಳಗ್ಗೆ ಬಂದು ಹಾಲ್ ​ಟಿಕೆಟ್​ ಪಡೆದುಕೊಂಡು, ನಂತರ ಹೈಡ್ರಾಮಾ ಮಾಡಿದ್ದಾರೆ ಎಂದರು. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ. ಇವರೇನು ಹುಡುಗಾಟಿಕೆ ಮಾಡುತ್ತಿದ್ದಾರಾ? ತರಗತಿಗಳಿಗೆ ಹಾಜರಾಗಿಲ್ಲ. ಇವರೇನು ಪರೀಕ್ಷೆ ಬರೆಯುತ್ತಾರೆ?. ಹಿಜಾಬ್ ಧರಿಸಲು ಬಿಟ್ಟರೂ ಪರೀಕ್ಷೆ ಬರೆಯುವುದಿಲ್ಲ. ನಮ್ಮ ಕಾಲೇಜಿನ ವಾತಾವರಣ ಕೆಡಿಸುವುದೇ ಇವರ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

Sneha Gowda

Recent Posts

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…

4 mins ago

ಚಾರ್ಜ್​ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಭಸ್ಮ

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.

19 mins ago

ದನದ ಮಾಂಸ ರಫ್ತಿನಲ್ಲಿ ಬಿಜೆಪಿ 2ನೇ ಸ್ಥಾನ: ಸಂತೋಷ್‌ ಲಾಡ್‌

ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…

30 mins ago

ಚಾಮರಾಜನಗರ: ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…

42 mins ago

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.

56 mins ago

ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರು

ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರುಗಳು ಹಿರೇಮಠದ ದಂಪತಿಗೆ ಸಾಂತ್ವನ ಹೇಳಿದರು.

1 hour ago