Categories: ಉಡುಪಿ

ಶಾಂತಿನಿಕೇತನ ಯುವ ವೃಂದ: ಹಡಿಲು ಭೂಮಿಯಲ್ಲಿ ಸುಗ್ಗಿ ಕೃಷಿ

ಹೆಬ್ರಿ : ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹೀಗೆ ಎಲ್ಲಾ ರಂಗದಲ್ಲೂ ವಿಶೇಷವಾಗಿ ಗುರುತಿಸಿಕೊಂಡಿರುವ ಶಾಂತಿನಿಕೇತನ ಯುವ ವೃಂದ ಉಡುಪಿ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರ ಸಲಹೆಯಂತೆ 2020 ರಿಂದಲೂ ಹಡಿಲು ಭೂಮಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.

ಕುಚ್ಚೂರಿನ ಜಾರ್ಮಕ್ಕಿ ಸತೀಶ್ ಶೆಟ್ಟಿ ಅವರು ಉಚಿತವಾಗಿ ನೀಡಿದ ಸುಮಾರು 3 ಎಕ್ರೆ ಪ್ರದೇಶದಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆರ್ಥಿಕ ನೆರವಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಕಳೆದ ಜುಲೈನಲ್ಲಿ ಖಾತೆ (ಮುಂಗಾರು ಬೆಳೆ) ಕೃಷಿ ಅತಿಯಾದ ಮಳೆಯ ಕಾರಣ ನಷ್ಟ ಅನುಭಸಿದರೂ ಛಲ ಬಿಡದ ಸಂಘದ ಸದಸ್ಯರು ಸುಗ್ಗಿ ಕೃಷಿಯಲ್ಲಿ ತೊಡಗಿದ್ದಾರೆ.

ಸಂಘದ ಹಡಿಲು ಭೂಮಿ ಕೃಷಿಯಲ್ಲಿ ಬೆಳೆದ ಭತ್ತದಲ್ಲಿ ತಮ್ಮದೇ ಬ್ರ್ಯಾಂಡ್ ನಲ್ಲಿ ಶಾಂತಿನಿಕೇತನ ಕಜೆ ಅಕ್ಕಿ ಹೊರತರಲಾಗಿತ್ತು.

ಸಂಘದ ಅಧ್ಯಕ್ಷರಾದ ರಾಜೇಶ್, ಸದಸ್ಯರಾದ ಜಯಕರ, ರವೀಶ್ ಶೆಟ್ಟಿ, ನರೇಂದ್ರ, ಪ್ರಸನ್ನ, ರಾಜೇಶ್ರೀ, ವಿನೋದಾ, ಚಂದ್ರಾವತಿ, ಕಲಾವತಿ, ಶಾರದಾ, ವನಜಾ, ಮೀನಾಕ್ಷಿ ಮತ್ತಿತರರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Gayathri SG

Recent Posts

ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಗಳ ಬಂಡಾಯ ಶಮನ: ವಿಜಯೇಂದ್ರ ಮಾತಕತೆ ಸಕ್ಸಸ್

ಈಶಾನ್ಯ ಪದವೀಧರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ…

5 mins ago

ಥಾಯ್ಲೆಂಡ್ ಓಪನ್ 2024: ಸಾತ್ವಿಕ್-ಚಿರಾಗ್ ಜೋಡಿಗೆ ಭರ್ಜರಿ ಗೆಲುವು

ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

17 mins ago

ಕೇರಳದ ಕೆಲವು ರಾಜ್ಯಗಳಿಗೆ ಮೇ 20 ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೇರಳದ ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್…

55 mins ago

ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡವು ಭಾನುವಾರ…

58 mins ago

5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ

ಮೇ 18 ರಿಂದ ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ…

1 hour ago

ರಾಹುಲ್, ಅಖಿಲೇಶ್ ಯಾದವ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ

 ಪಕ್ಷದ ಕಾರ್ಯಕರ್ತರ ಗದ್ದಲ, ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್…

1 hour ago