Categories: ಉಡುಪಿ

ಮಲ್ಪೆ ಬಂದರಿನಲ್ಲಿ 60 ಕೆ.ಜಿ. ತೂಕದ ಮಡಲು ಮೀನು

ಮಲ್ಪೆ: ಮಲ್ಪೆ ಬಂದರಿನಲ್ಲಿ 60 ಕೆ.ಜಿ. ತೂಕದ ಮಡಲು ಮೀನು ಬಲೆಗೆ ಸಿಕ್ಕಿದೆ.ಈ ಮೀನು ಗಂಟೆಗೆ 110 ಕಿ.ಮೀ.ನಂತೆ ಜಗತ್ತಿನಾದ್ಯಂತ ಇತರ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ

ಸನ್ಮಯ ಬೋಟಿನ ಬಲೆಗೆ ಬಿದ್ದ ಈ ಮೀನನ್ನು ನೋಡಲು ಮಲ್ಪೆ ಬಂದರಿನಲ್ಲಿ ಜನ ಜಮಾಯಿಸಿದ್ದರು.

ಇದು ಬಂಗುಡೆ, ಬೂತಾಯಿ, ಅಕ್ಟೋಪಸ್‌ ಇನ್ನಿತರ ಮೀನಗಳನ್ನು ತಿನ್ನುತ್ತದೆ. ಇದರಲ್ಲಿ ಮರ್ಲಿನ್‌ ಎಂಬ ಜಾತಿಯ ಮೀನೂ ಇದೆ. ಇದರ ಮಾಂಸ ರುಚಿಕರವಾಗಿರುತ್ತದೆ ಎಂದು ಕಡಲಜೀವಿ ಶಾಸ್ತ್ರದ ಸಂಶೋಧಕ ಕಾರವಾರದ ಡಾ| ಶಿವಕುಮಾರ್‌ ಹರಗಿ ತಿಳಿಸಿದ್ದಾರೆ.

ಮಡಲು ಮೀನು
ಕೆ.ಜಿ.ಗೆ 120 ರೂಪಾಯಿಯಂತೆ ಮಾರಾಟವಾಗಿದೆ, ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಬಂದಿದ್ದರೂ ಈ ಮೀನು 60 ಕೆ.ಜಿ. ಇರುವುದು ಬಲು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್‌ ಹೇಳಿದ್ದಾರೆ. ವೈಜ್ಞಾನಿಕವಾಗಿ ಸೈಲ್‌ ಮೀನು ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ಮಡಲಿನ ಆಕೃತಿ (ತೆಂಗಿನ ಸೋಗೆ) ಇರುವುದರಿಂದ ಮಡಲು ಮೀನು ಎಂದು ಕರೆಯುತ್ತಾರೆ.

Swathi MG

Recent Posts

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

20 mins ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

24 mins ago

‘ಸೀತಾರಾಮ’ ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು…

38 mins ago

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು…

46 mins ago

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

1 hour ago

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

1 hour ago