Categories: ಉಡುಪಿ

ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ

ಉಡುಪಿ : ನಾಡಿನಾದ್ಯಂತ ದೀಪಾವಳಿ ಹಬ್ಬದ ಖರೀದಿ ಭರಾಟೆ ಮುಂದುವರಿದಿದೆ. ಗುರುವಾರ ತೈಲ ಅಭ್ಯಂಗ, ಎಣ್ಣೆ ಶಾಸ್ತ್ರ, ಗದ್ದೆಗಳಿಗೆ ದೀಪ ಹಚ್ಚುವ ಕಾರ್ಯಕ್ರಮ ನಡೆಯಿತು. ಮೂಲ್ಕಿ ಶಾಂಭವಿ ನದಿಯಿಂದ ಉತ್ತರ ಭಾಗದವರು ಬಲೀಂದ್ರನನ್ನು ಕರೆದು ಪೂಜೆ ಸಲ್ಲಿಸಿದರು.

ಶ್ರೀಕೃಷ್ಣಮಠವೂ ಸಹಿತ ಕರಾವಳಿ ಭಾಗದ ದೇವಸ್ಥಾನಗಳಲ್ಲಿ ಗುರುವಾರ ರಾತ್ರಿ ಬಲೀಂದ್ರ ಪೂಜೆ ನಡೆಯಿತು. ಗ್ರಾಮೀಣ ಭಾಗದಲ್ಲಿ ಭತ್ತದ ಫ‌ಸಲಿಗೆ ಧಾನ್ಯ ಲಕ್ಷ್ಮೀ ಪೂಜೆ ನಡೆಯಿತು. ಶುಕ್ರವಾರ ಗೋಪೂಜೆ, ವಾಹನಪೂಜೆ ನಡೆಯಲಿದೆ. ದರ ಏರಿಕೆಯ ನಡುವೆ ಹೊಸ ಬಟ್ಟೆ, ಪಟಾಕಿಗಳನ್ನು ಖರೀದಿಸಿ ಜನರು ಸಂಭ್ರಮಿಸಿದರು.

ನಗರಾದ್ಯಂತ ಟ್ರಾಫಿಕ್‌ ಜಾಂ:

ನಗರದ ವಿವಿಧ ಅಂಗಡಿ- ಮಳಿಗೆಗಳಲ್ಲಿ ವಿವಿಧ ಆಫ‌ರ್‌ಗಳು ಜನರನ್ನು ಕೈಬೀಸಿ ಕರೆಯುತ್ತಿರುವ ಹಿನ್ನೆಲೆಯಲ್ಲಿ ಜನರ ವಾಹನ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಹಾಗೂ ಜನರ ದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.

ಶ್ರೀಕೃಷ್ಣ ಮಠದಲ್ಲಿ ಎಣ್ಣೆಶಾಸ್ತ್ರ:

ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ತೈಲಾಭ್ಯಂಗ ಹಾಗೂ ಎಣ್ಣೆಶಾಸ್ತ್ರ ನಡೆಯಿತು. ಪ್ರಾತಃ ಕಾಲದ 5.39 ಚಂದ್ರೋದಯ ಕಾಲದಲ್ಲಿ ಚಂದ್ರಶಾಲೆಯಲ್ಲಿ ಪಲಿಮಾರು ಮಠಾ ಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ ಪರ್ಯಾಯ ಮಠದ ಪಾರುಪತ್ಯಗಾರರಾದ ವಿದ್ವಾನ್‌ ಮುದರಂಗಡಿ ಲಕ್ಷ್ಮೀಶಾಚಾರ್ಯರು ಎಣ್ಣೆಶಾಸ್ತ್ರ ಮಾಡಿದರು. ಅನಂತರ ಪಲಿಮಾರು ಮಠಾಧೀಶರು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು. ಪಾರುಪತ್ಯಗಾರರು ಶ್ರೀಪಾದರಿಗೆ ಗೌರವದೊಂದಿಗೆ ಹೊಸ ವಸ್ತ್ರ ಸಮರ್ಪಿಸಿದರು.

ದೀಪಾವಳಿಗೆ ಮಳೆ ತೊಡಕು:

ಅಪರಾಹ್ನದ ಬಳಿಕ ಸಿಡಿಲು ಸಹಿತ ವಿಪರೀತ ಮಳೆ ಸುರಿದ ಕಾರಣ ವಾಹನ ಸವಾರರು ತೊಂದರೆ ಅನುಭವಿಸಿದರು. ರಸ್ತೆ ಬದಿ ವ್ಯಾಪಾರಿಗಳು ಕೂಡ ಮಳೆ ಯಿಂದಾಗಿ ಕಂಗಾಲಾದರು. ಮಳೆ ತುಸು ಬಿಡುವು ನೀಡಿದ ಬಳಿಕ ಜನದಟ್ಟಣೆ ಮತ್ತೆ ಹೆಚ್ಚಾಯಿತು. ಬಳಿಕ ಹೂಗಳನ್ನು ಮಿತದರದಲ್ಲಿ ನೀಡಲಾಯಿತು.

Gayathri SG

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

3 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

3 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

3 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

4 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

4 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

4 hours ago