ಉಡುಪಿ: ನಗರದ ಅಂಬಾಗಿಲು ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಮಗುವಿನ ತಲೆ ಮೇಲೆ ಹರಿದು ಮಗು ಸ್ಥಳದಲ್ಲೇ ಸಾವನಪ್ಪಿದ ಘಟನೆ ಶನಿವಾರ ನಡೆದಿದೆ. ಪ್ರಾಣಮ್ಯ(8) ಮೃತ ಪಟ್ಟ ಮಗು.
ಸಂತೆಕಟ್ಟೆಯಿಂದ ಅಂಬಾಗಿಲು ಕಡೆಗೆ ತಾಯಿ ಮತ್ತು ಮಗು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮಗು ರಸ್ತೆಗೆ ಬಿದ್ದದ್ದು ಮಗುವಿನ ತಲೆ ಮೇಲೆ ಲಾರಿಯ ಚಕ್ರ ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಉಡುಪಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.