News Karnataka Kannada
Thursday, April 18 2024
Cricket
ಉಡುಪಿ

ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ

ಫೆ.14ರ ಪ್ರೇಮಿಗಳ ದಿನದಂದು ಸಂಜೆ 5ರಿಂದ ಫೆಬ್ರವರಿ 17ರ ಬೆಳಿಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ (ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ) ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ.
Photo Credit : IANS

ಉಡುಪಿ : ನಾಳೆಯಿಂದ ಮೇ 19ರವರೆಗೆ ಮದ್ಯ  ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ.

ಈ ಕುರಿತಾಗಿ ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಿಸಿದ್ದಾರೆ. ಕೆಎಸ್​​ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ, ಅಬಕಾರಿ ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ದಿನ ಮದ್ಯ ಖರೀದಿ ಮಾಡಿದ್ದರೆ ರಾಜ್ಯದಲ್ಲಿ 70 ಕೋಟಿ ರೂಪಾಯಿ ನಷ್ಟ. ಹಾಗಾಗಿ ವಿಭಾಗಮಟ್ಟದಲ್ಲಿ ಮದ್ಯ ಖರೀದಿ ನಿಲ್ಲಿಸಲು ನಿರ್ಧಾರ ಮಾಡಲಾಗಿದೆ. ನಾಳೆ ಕಲಬುರಗಿ ವಿಭಾಗದಲ್ಲಿಯೂ ಮದ್ಯ ವ್ಯಾಪಾರಿಗಳಿಂದ ಮುಷ್ಕರ ಮಾಡಲಾಗುತ್ತಿದೆ. ಹೊಸಪೇಟೆ, ಬೆಳಗಾವಿ, ಮೈಸೂರು ಮಂಗಳೂರು ವಿಭಾಗದಲ್ಲಿ ಮದ್ಯ ಸಿಗಲ್ಲ. ಮೇ ತಿಂಗಳ 19ನೇ ತಾರೀಖಿನವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ.

ಮುಷ್ಕರ​ ಎಲ್ಲೆಲ್ಲಿ ಮತ್ತು ಯಾವಾಗ!

ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ. ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ.

ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ,ಉಡುಪಿ, ಉತ್ತರಕನ್ನಡ. ಮೇ 17ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ,ತುಮಕೂರ್.

ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆ ಎಸ್ ಬಿ ಸಿ ಎಲ್ ಡಿಪೋಗಳಲ್ಲಿ ಮಧ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು