News Karnataka Kannada
Saturday, April 13 2024
Cricket
ಉಡುಪಿ

ಓಲೈಕೆ ರಾಜಕಾರಣವನ್ನು ನಾವು ಮಾಡುದಿಲ್ಲ: ಸಿಎಂ ಬೊಮ್ಮಾಯಿ

Cm Bommai
Photo Credit :

ಮಣಿಪಾಲ: ನಮ್ಮ ಮೌನವನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ರೀತಿಯ ಓಲೈಕೆ ರಾಜಕಾರಣವನ್ನು ನಾವು ಮಾಡುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಮಣಿಪಾಲದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮಾತಿಗೆ ನಾವು ಮೌನವಾಗಿರುವುದರಿಂದ ಅವರಿಗೆ ಸಮಸ್ಯೆಯಾಗಿರಬೇಕು. ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ. ಯಾರೇ ಆಗಿರುವ ಅವರು ಆಡಿದ ಮಾತಿಗೆ ಬೆಲೆ ಬರಬೇಕಾದರೆ ಬಳಸುವ ಭಾಷೆ ಬಹಳ ಮುಖ್ಯವಾಗುತ್ತದೆ. ಸರಕಾರ ನಡೆಸುತ್ತಿರುವ ನಮಗೆ ಯಾವಾಗ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿದಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಘಟನೆ ನಡೆದಾಗ ಕಠಿನ ಕ್ರಮ ತೆಗೆದುಕೊಂಡು ನಿರ್ದಿಷ್ಟ ತನಿಖೆಗೂ ಒಪ್ಪಿಸಿದ್ದೇವೆ. ಧಾರವಾಡ ಘಟನೆಯ ಸಂಬಂಧ ಕ್ರಮ ಆಗಿದೆ. ಕಾನೂನು ಪ್ರಕರವಾಗಿ ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆ ಆಗಲಿದೆ. ಕಾಂಗ್ರೆಸ್‌ ರೀತಿಯಲ್ಲಿ ಓಲೈಕೆಯ ರಾಜಕಾರಣ ಮಾಡುತ್ತಿಲ್ಲ ಎಂದರು.

ಮುನ್ನೆಚ್ಚರಿಕೆ ಕ್ರಮ: ಕೋವಿಡ್ ಒಂದು, ಎರಡು ಹಾಗೂ ಮೂರನೇ ಅಲೆಯ ಅನುಭವದಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳವುದು ಅಗತ್ಯವಾಗಿದೆ. ಹೀಗಾಗಿ ಆರೋಗ್ಯ ಸಚಿವರು ಹಲವು ಸೂಚನೆಯನ್ನು ನೀಡಿದ್ದಾರೆ. ಅದೆಲ್ಲವೂ ಪಾಲನೆಯಾದರೆ, ಮುಂದೆ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸಾಧ್ಯವಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು