Categories: ಕರಾವಳಿ

ಚುನಾವಣೋತ್ತರ ಸಮೀಕ್ಷೆ ಬಹಿರಂಗ, ಅಂತಂತ್ರ ವಿಧಾನಸಭೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತಗಟ್ಟೆ ಸಮೀಕ್ಷೆ ಕೂಡ ಲಭ್ಯವಾಗಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ.

ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.

ಸಿ ವೋಟರ್‌ ಸಂಸ್ಥೆಯ ಎಕ್ಸಿಟ್‌ ಪೋಲ್‌ ಪ್ರಕಾರ ಬಿಜೆಪಿ 83ರಿಂದ 95 ಸ್ಥಾನ ಕಾಂಗ್ರೆಸ್‌ 100ರಿಂದ 112 ಸ್ಥಾನ ಜೆಡಿಎಸ್‌ ಗೆ 21ರಿಂದ 29 ಸ್ಥಾನ, ಇತರರು 2ರಿಂದ 6 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ.

ಜೀ ನ್ಯೂಸ್ ಸಮೀಕ್ಷೆಯು ಬಿಜೆಪಿ – 79-94, ಕಾಂಗ್ರೆಸ್ – 103-118, ಜೆಡಿಎಸ್- 25-33, ಇತರರು 02-05 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ.

ನ್ಯೂಸ್ ನೇಷನ್ಸ್-ಸಿಜಿಎಸ್ ಸಮೀಕ್ಷೆಯಲ್ಲಿ ಬಿಜೆಪಿ- 114, ಕಾಂಗ್ರೆಸ್- 86, ಜೆಡಿಎಸ್- 21, ಇತರರು- 03 ಮೂರು ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ  ಹೇಳಿದೆ.

ಪೋಲ್ ಸ್ಟಾರ್ಟ್ ಸಂಸ್ಥೆ ಸಮೀಕ್ಷೆ ಪ್ರಕಾರ ಬಿಜೆಪಿ- 88-98, ಕಾಂಗ್ರೆಸ್- 99-109, ಜೆಡಿಎಸ್- 21-26, ಇತರರು- 02-04 ಸ್ಥಾನ ಪಡೆಯುಲಿದ್ದಾರೆ ಎಂದು ಹೇಳಿದೆ.

Umesha HS

Recent Posts

ಹಾಸನ ವಿಡಿಯೋ ಪ್ರಕರಣ: ಡಿ.ಕೆ. ಶಿವಕುಮಾರ್‌ ಪಿತೂರಿ ಇದೆ ಎಂದ ಎಚ್‌.ಡಿ. ಕುಮಾರಸ್ವಾಮಿ

ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

7 mins ago

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

25 mins ago

ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಕಾಲಿಟ್ಟ ಶಾಸಕ ವಿನಯ್ ಕುಲಕರ್ಣಿ

ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ…

43 mins ago

ಲೋಕಸಭೆ ಚುನಾವಣೆ: ಮೂರನೇ ಹಂತದ ಮತದಾನ ಮುಕ್ತಾಯ

ದೇಶದಾದ್ಯಂತ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಬೆಳಗ್ಗ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಸಣ್ಣಪುಟ್ಟ ಗಲಾಟೆಗಳನ್ನು…

55 mins ago

ಅನಿಮೇಟೆಡ್ ವಿಡಿಯೋ ‘ತಕ್ಷಣ’ ತೆಗೆದುಹಾಕುವಂತೆ ಬಿಜೆಪಿಗೆ ಚುನಾವಣಾ ಆಯೋಗ ಆದೇಶ

ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ…

1 hour ago

13 ವರ್ಷದ ಬಾಲಕಿ ಜೊತೆ 70ರ ವೃದ್ಧ ಮದುವೆ: ತಂದೆ, ವರ ಪೊಲೀಸರ ವಶಕ್ಕೆ

13 ವರ್ಷದ ಬಾಲಕಿಯನ್ನು  70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

2 hours ago