Categories: ಮಂಗಳೂರು

ನೀವಷ್ಟೆ 10 ಕೋಟಿ ರೂ.ಗಳ ಮನೆ ಕಟ್ಟೋದಲ್ಲ ಸುನೀಲ್‌ ಕುಮಾರ್‌: ಮುತಾಲಿಕ್‌ ಗುಡುಗು

ಬೆಳ್ತಂಗಡಿ: ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದರು.

ಸೌಜನ್ಯಗೆ ನ್ಯಾಯ ಸಿಗಬೇಕು ಅನ್ನೋರಿಗೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲವಿದೆ. ಸೌಜನ್ಯ ಎಂಬ ಹೆಸರು ನಿಮಿತ್ತ ಮಾತ್ರ. ಲಕ್ಷಾಂತರ ಸೌಜನ್ಯ ಮೇಲೆ ಅತ್ಯಾಚಾರ ಆಗುತ್ತಿದೆ. ಕರ್ನಾಟಕದಲ್ಲಿ ಮೂರೇ ವರ್ಷದಲ್ಲಿ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. ಮೂರೇ ವರ್ಷದಲ್ಲಿ 45 ಸಾವಿರ ಅಪ್ರಾಪ್ತ ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಇದೆಲ್ಲದಕ್ಕೆ ನ್ಯಾಯ ಸಿಗಲು ಸೌಜನ್ಯ ಪ್ರತಿನಿಧಿಯಾಗಿ ನಾವು ಸೇರಿದ್ದೇವೆ. ಸಂತೋಷ್ ರಾವ್ ಅಪರಾಧಿ ಎನ್ನಲು ಸಾಕ್ಷ್ಯ ಇಲ್ಲ ಅಂತ ಕೋರ್ಟ್ ಪೊಲೀಸ್‌ ಇಲಾಖೆಗೆ ಚಪ್ಪಲಿಯಲ್ಲಿ ಹೊಡೆದಿದೆ.

ಪ್ರಾಮಾಣಿಕ ಧ್ವನಿ, ಸಿಟ್ಟಿನ ಧ್ವನಿಯನ್ನು ವ್ಯಕ್ತಪಡಿಸಲು ಪ್ರತಿಭಟನೆ ನಡೆಸಲು ಇವತ್ತು ನಮಗೆ ಮೈದಾನ ಕೊಡಲಿಲ್ಲ. ನಾವು ಕತ್ತಿ, ತಲವಾರು, ಬಾಂಬ್ ಹಿಡಿದುಕೊಂಡು ಬಂದಿದ್ದೇವಾ?. ಎಲ್ಲರಿಗೂ ಹೆಣ್ಮಕ್ಕಳು ಇರುತ್ತಾರೆ, ನಿಮ್ಮಲ್ಲಿ ಆಗಿದ್ರೆ ಮುಚ್ಚಿ ಹಾಕ್ತಾ ಇದ್ರಾ? ಎಂದು ಪ್ರಶ್ನಿಸಿದರು.

ನಿಮ್ಮ ಮಕ್ಕಳ ಮೇಲೆ ಈ ರೀತಿ ಆದಾಗ ಮಾತ್ರ ನಿಮಗೆ ಗೊತ್ತಾಗುವುದು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹಮಂತ್ರಿ ಪರಮೇಶ್ವರ್‌ ಅವಸರದ ಹೇಳಿಕೆ ನೀಡಬಾರದು. ನೀವು ಮರು ತನಿಖೆಗೆ ಆದೇಶ ಕೊಡದೇ ಇದ್ದರೆ ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ದ.ಕ ಜಿಲ್ಲೆಯಲ್ಲಿ ಹೊತ್ತಿಕೊಂಡ ಕಿಡಿ ಉತ್ತರ ಕರ್ನಾಟಕ ಭಾಗದಲ್ಲೂ ಹೊತ್ತಲಿದೆ. ಇಡೀ ರಾಜ್ಯದ ತುಂಬಾ ಇದರ ಹೋರಾಟ ನಡೆಯಲಿದೆ ಎಂದರು.

ಸೌಜನ್ಯ ಮತ್ತು ಸಂತೋಷ್ ರಾವ್ ಕುಟುಂಬ ಧೈರ್ಯದಿಂದ ಬದುಕಬೇಕು. ಎರಡೂ ಕುಟುಂಬಕ್ಕೆ ತಲಾ 25 ಲಕ್ಷ ರೂ. ‌ಪರಿಹಾರ ಕೊಡಬೇಕು. ದ.ಕ ಮತ್ತು ಉಡುಪಿ ಜಿಲ್ಲೆಯ ಎಂಎಲ್ಎ, ಎಂಪಿಗಳು ಪ್ರತಿಯೊಬ್ಬರು ಇಬ್ಬರ ಮನೆಗೂ ಐದು ಲಕ್ಷ ರೂ. ಕೊಡಬೇಕು. ಕೋಟಿ ಕೋಟಿ ಲೂಟಿ ಹೊಡೆದ ನೀವು ಕೊಡಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಸಂತೋಷ್ ರಾವ್ ಮನೆಗೆ ಹೋಗಿದ್ದೆ. ಆದರೆ ಅವರ ಕ್ಷೇತ್ರದ ಎಂಎಲ್ ಎ ಎಲ್ಲಿದ್ದಾನೋ ಗೊತ್ತಿಲ್ಲ. ಎಂಎಲ್‌ಎ ಸುನೀಲ್ ಕುಮಾರ್ ಅವರ ಮನೆಗೆ ಹೋಗಿ, ಸುಖ ದುಃಖ ಕೇಳಬೇಕು. ನೀವಷ್ಟೇ ಹತ್ತು ಕೋಟಿ ರೂ.ಗಳ ಮನೆ ಕಟ್ಟೋದಲ್ಲ ಸುನೀಲ್ ಕುಮಾರ್ ಎಂದು ಶಾಸಕ ಸುನೀಲ್‌ ಕುಮಾರ್‌ ಅವರ ಮೇಲೆ ವಾಗ್ದಾಳಿ ನಡೆಸಿದರು.

 

Ashika S

Recent Posts

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

5 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

10 mins ago

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

12 mins ago

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

23 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

25 mins ago

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

49 mins ago