Categories: ಮಂಗಳೂರು

ಮಂಗಳೂರು: “ಪರಿಸರಕ್ಕಾಗಿ ನಾವು” ತಂಡದಿಂದ ವಿಶ್ವ ಭೂದಿನ ಆಚರಣೆ

ಮಂಗಳೂರು:  ಏಪ್ರಿಲ್ 22 ರ ವಿಶ್ವ ಭೂದಿನದ ಪ್ರಯುಕ್ತ ‘ಪರಿಸರಕ್ಕಾಗಿ ನಾವು’ ಗುಂಪಿನ ದಕ್ಷಿಣ ಕನ್ನಡ ಉಡುಪಿ ಘಟಕದವರಾದ ಸರೋಜಾ ಪ್ರಕಾಶ್- ಪ್ರಕಾಶ್ ದಂಪತಿಯವರು, ಅಶ್ವಿನಿ ಕೆ ಭಟ್ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಏಪ್ರಿಲ್ 21 ನೇ ಭಾನುವಾರ ಸಂಜೆ ಎರಡು ತಾಸು ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಿತ ಬಳಕೆ, ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ ಕೊಟ್ಟರು.

ಘೋಷಣಾ ವಾಕ್ಯಗಳನ್ನು ಮನೆಯಲ್ಲೇ ಲಭ್ಯವಿದ್ದ ಹಳೆ ರಟ್ಟು, ಕಾಗದಗಳನ್ನುಪಯೋಗಿಸಿ, ಹಳೆ ಪಿವಿಸಿ ಪೈಪ್ಗಳಿಗೆ ಅಂಟಿಸಿ ಫಲಕಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು.ಸದಸ್ಯೆಯರಾದ ದೇವಕಿ ಜಿ ಕೆ, ಅಂಜನಿ ವಸಂತ್ ಹಾಗೂ ಸಮಾನಮನಸ್ಕರು ಅವರಿಗೆ ಸಹಕರಿಸಿದರು. ಈ ವರ್ಷದ ಭೂದಿನದ ಘೋಷಣೆಯು ‘ ಭೂಗ್ರಹ vs ಪ್ಲಾಸ್ಟಿಕ್’. ಪ್ಲಾಸ್ಟಿಕ್ ನ ದುಷ್ಪರಿಣಾಮಗಳು, ಅದಕ್ಕೆ ಪರ್ಯಾಯ, ಗೊಬ್ಬರ ತಯಾರಿಕೆ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು.

ಸಾಧಾರಣ 60 ಜನರನ್ನು ತಲಪಲು ಸಾಧ್ಯವಾಯಿತು. ಮುಂಗಡವಾಗಿ ಈ ಮೇಲ್ ಮೂಲಕ ಪಾರ್ಕಿನ ಆಡಳಿತದವರಿಂದ ಅನುಮತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಮಾಡಲಾಯಿತು. ಮುಂದೆಯೂ ಈ ರೀತಿಯ ಸರಳ ವಿಧಾನಗಳಿಂದ ಹೆಚ್ಚಿನ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಒಗ್ಗೂಡಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಂಚಾಲಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Ashitha S

Recent Posts

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

4 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

27 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

43 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

1 hour ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

2 hours ago