News Karnataka Kannada
Saturday, April 13 2024
Cricket
ಮಂಗಳೂರು

ಕಾರ್ಮಿಕನ ಕೊಲೆ, ಸ್ಥಳೀಯರಿಂದಲೇ ಶವಸಂಸ್ಕಾರ

Ullal: Man commits suicide by pouring petrol
Photo Credit : News Kannada

ಮಂಗಳೂರು: ದಿನಸಿ ಅಂಗಡಿ ಮಾಲೀಕನೊಬ್ಬ ಅಂಗಡಿಯಲ್ಲಿ ಕೆಲಸಕ್ಕಿದ್ದ ಉತ್ತರಭಾರತ ಮೂಲದ ಕಾರ್ಮಿಕನನ್ನು ಕೊಲೆ ಮಾಡಿದ್ದು, ಈ ಸಂಬಂಧ ಕೊಲೆಗೀಡಾದ ಕಾರ್ಮಿಕ ಗಜ್ಜಾನ್‌ ಅಲಿಯಾಸ್‌ ಜಗ್ಗುಅಂತ್ಯ ಸಂಸ್ಕಾರ ನಂದಿಗುಡ್ಡೆ ಸ್ಮಶಾನದಲ್ಲಿ ನಡೆಯಿತು.

ಮಹಮ್ಮದ್ ಅಝರ್ ನೇತೃತ್ವದಲ್ಲಿ ನಡೆದ ಅಂತ್ಯಸಂಸ್ಕಾರ ಕಾರ್ಯದಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಉತ್ತರ ಭಾರತ ಮೂಲದ ಗಜ್ಜಾನ್‌ ಅಲಿಯಾಸ್‌ ಜಗ್ಗು ಮುಳಿಹಿತ್ಲುವಿನ ತೌಸೀಫ್‌ ಹುಸೇನ್‌ ನ ಜನರಲ್‌ ಸ್ಟೋರ್‌ನಲ್ಲಿ ಕೆಲಸಕ್ಕಿದ್ದ. ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲೀಕ ತೌಸೀಫ್‌, ಜಗ್ಗುವನ್ನು ಪೆಟ್ರೋಲ್‌ ಹಾಕಿ ಸುಟ್ಟುಹಾಕಿದ್ದ, ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಜಗ್ಗುವನ್ನು ಕರೆಂಟ್‌ ಶಾಕ್‌ ಹೊಡೆದಿದೆ ಎಂದು ಸುಳ್ಳು ಹೇಳಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು.

ಈ ವೇಳೆ ಆಸ್ಪತ್ರೆಯ ವೈದ್ಯರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಪೆಟ್ರೋಲ್‌ ಹಾಕಿ ಸುಟ್ಟಿರುವುದಾಗಿ ಒಪ್ಪಿಕೊಂಡಿದ್ದು, ಅಲ್ಲದೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಜಗ್ಗು ಮರಣ ಹೊಂದಿದ್ದ. ಇದೀಗ ಮೃತ ಕಾರ್ಮಿಕ ಜಗ್ಗುವಿನ ಕುಟುಂಬಸ್ಥರ ಪತ್ತೆಯಾಗದ ಕಾರಣ ಪಾಂಡೇಶ್ವರ ಪೊಲೀಸರ ಸಮ್ಮುಖದಲ್ಲಿ ಜಗ್ಗುವಿನ ಅಂತ್ಯಸಂಸ್ಕಾರ ನಡೆಯಿತು.

ಪ್ರಕರಣದಲ್ಲಿ ಅಝರ್‌ ಪ್ರಮುಖ ಸಾಕ್ಷಿಯಾಗಿದ್ದು, ತೌಸೀಫ್‌ ಹುಸೇನ್‌ ನ ಅಂಗಡಿ ಪಕ್ಕದಲ್ಲಿಯೇ ಅಝರ್ ಇದ್ದು, ಪೊಲೀಸರಿಗೆ ಆರೋಪಿ ಕುರಿತು ಮಾಹಿತಿ ಒದಗಿಸಿ ದೂರು ನೀಡಿದ್ದರು. ಆರೋಪಿ ತೌಸೀಫ್‌ನನ್ನು ಪಾಂಡೇಶ್ವರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು