Categories: ಮಂಗಳೂರು

ಬಂಟ್ವಾಳ: ಸಾತ್ವಿಕ ವ್ಯಕ್ತಿಯ ವಿಜಯ ನಮ್ಮ ಜವಾಬ್ದಾರಿ, ದೇವದಾಸ್ ಶೆಟ್ಟಿ ಅಭಿಮತ

ಬಂಟ್ವಾಳ: ಪ್ರಥಮ ಶಾಸಕತ್ವದ ಅವಧಿಯಲ್ಲಿ 2095 ಕೋಟಿ ರೂ.ಅನುದಾನಗಳ ಮೂಲಕ ಬಂಟ್ವಾಳ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇನೆ, ಇದು ನೀವು ನೀಡಿದ ಮತದ ಪರಿಣಾಮ.  ನೀಡಿದ ಮತಕ್ಕೆ ಕರ್ತವ್ಯ ಎಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.

ಬಂಟ್ವಾಳ ಸಜೀಪ ಮುನ್ನೂರು ಶಕ್ತಿ ಕೇಂದ್ರದ ಎನ್‌ಕೆ.ಶಿವ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಶೆಟ್ಟಿ ಪುಳಿಂಚ ಮಾತನಾಡಿ, ಸಾತ್ವಿಕ ಮನೋಭಾವದ ಓರ್ವ ನಿಷ್ಠಾವಂತ ರಾಜಕಾರಣಿ ರಾಜ್ಯಕ್ಕೆ ಮಾದರಿ, ಇಂತಹ ಸರ್ವಜನರ ಹೃದಯಗೆದ್ದ ದೇವತಾ ಮನುಷ್ಯ ರಾಜೇಶ್ ನಾಯ್ಕ್. ಅವರು ನಿರಂತರವಾಗಿ ಗೆಲುವು ಸಾಧಿಸಬೇಕು ಎಂದು ಅವರು ಹೇಳಿದರು.

ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ನಿರಂತರವಾದ ಹೋರಾಟದ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ರಾಜೇಶ್ ನಾಯ್ಕ್ ಅವರ ಕನಸಿನ ಬಂಟ್ವಾಳವಾಗಿ ಶಾಂತಿಯ ಬಂಟ್ವಾಳವಾಗಿ ಬದಲಾವಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ನಿಕಟಪೂರ್ವ ಜಿ.ಪ.ಸದಸ್ಯ ರವೀಂದ್ರ ಕಂಬಳಿ ಮಾತನಾಡಿ, ಸ್ವಂತ ಜಮೀನಿನನ್ನು ಮಾರಾಟ ಮಾಡಿ, ವೈಯಕ್ತಿಕ ಹಣವನ್ನು ಖರ್ಚು ಮಾಡಿ ರಾಜಕೀಯ ಮಾಡಿದ ರಾಜ್ಯದ ಏಕೈಕ ವ್ಯಕ್ತಿ ರಾಜೇಶ್ ನಾಯ್ಕ್ ಅವರಾಗಿದ್ದು, ಅಂತಹ ಓರ್ವ ಆದರ್ಶ ವ್ಯಕ್ತಿತ್ವದ ರಾಜಕಾರಣಿಯನ್ನು ಬಂಟ್ವಾಳದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಕಾರ್ಯದರ್ಶಿಗಳಾದ ರಮನಾಥ ರಾಯಿ,ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ಸಜೀಪ ಮುನ್ನೂರು ಶಕ್ತಿ ಕೇಂದ್ರದ ಪ್ರಭಾರಿ ಸುರೇಶ್ ಕೋಟ್ಯಾನ್, ಗ್ರಾಮಪಂಚಾಯತ್ ಸದಸ್ಯರುಗಳಾದ ಪ್ರವೀಣ್ ಗಟ್ಟಿ, ಸುಮತಿ ಎಸ್, ನವೀನ್ ಆಂಚನ್, ಸುಂದರ ಪೂಜಾರಿ, ದಯಲಕ್ಮೀ, ಅನಿತಾ, ಬೂತ್ ಅಧ್ಯಕ್ಷರುಗಳಾದ ಸೋಮಶೇಖರ್ ಆಲಡಿ, ವಿನೊಧ್ ನಾಯ್ಕ , ರೂಪೇಶ್ ,ಗೋಪಾಲ ಮತ್ತಿತರರು ಉಪಸ್ಥಿತರಿದ್ದರು.

Sneha Gowda

Recent Posts

ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಕೆ: ಬಿ.ಎಸ್.ಯಡಿಯೂರಪ್ಪ

ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿಮೈತ್ರಿ ಮುಂದುವರಿಯಲಿದ್ದು, ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ…

6 mins ago

ವೇಣುಗೋಪಾಲಸ್ವಾಮಿ ದೇಗುಲ ಬಳಿ ಅಡ್ಡಾಡುತ್ತಿರುವ ಒಂಟಿ ಗಜ

ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…

25 mins ago

ಕಾಡಾನೆಯಿಂದ ಬೆಳೆ ನಾಶ: ಮನನೊಂದು ರೈತ ಆತ್ಮಹತ್ಯೆ

ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.

27 mins ago

ಬಂಡೀಪುರ ಪ್ರವೇಶದ್ವಾರದ ಬಳಿ ಕೆಟ್ಟು ನಿಂತ ಲಾರಿ: ಸಂಚಾರಕ್ಕೆ ಅಡ್ಡಿ

ಬಂಡೀಪುರ ಪ್ರವೇಶದ್ವಾರದ ಬಳಿ ಭಾರಿ ವಾಹನ ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಿಲೋಮೀಟರ್ ಗಟ್ಟಲೆ…

42 mins ago

ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಬೆಟ್ಟದ ತಪ್ಪಲಿನಲ್ಲೇ ನಿಂತ ಭಕ್ತರು

ವಾರಾಂತ್ಯದ ರಜೆ ಹಿನ್ನೆಲೆ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಹಸ್ರಾರು ಮಂದಿ ಪ್ರವಾಸಿಗರು ಹಾಗೂ ಭಕ್ತಗಣ ಆಗಮಿಸಿದ್ದರು…

44 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ…

1 hour ago