ಮಂಗಳೂರು

ಮಂಗಳೂರು ಕೆಥೊಲಿಕ್‌ ಸಭಾದಿಂದ ಮಹಿಳಾ ದಿನಾಚರಣೆ

ಮಂಗಳೂರು: ಕೆಥೊಲಿಕ್‌ ಸಭಾ ಮಂಗಳೂರು  ಹಾಗೂ ಎಲ್ಲಾ  ವಲಯಗಳ ಸಹಕಾರದೊಂದಿಗೆ ೨೦೨೩ ಮಾರ್ಚ್ ೧೨ ರಂದು ಮಹಿಳಾ ದಿನಾಚರಣೆ ಆಚರಿಸಲಾಯಿತು. ಬೆಳಗ್ಗೆ ಕೇಂದ್ರದ ಆದ್ಯಾತ್ಮಿಕ ನಿರ್ದೇಶಕ  ಹಾಗೂ ಬಿಜೈ ಚರ್ಚಿನ ಗುರುಗಳಾದ ಧರ್ಮಗುರು ಡಾ.ಜೆ.ಬಿ ಸಲ್ಡಾನ್ಹಾರ ಪವಿತ್ರ ಪೂಜೆ  ನೆರವೇರಿಸಿದರು.

ನಂತರ ಸಭಾ ಕಾರ‍್ಯಕ್ರಮ ನಡೆಯಿತು.  ಕೆಥೊಲಿಕ್‌ ಸಭಾ ಕೇಂದ್ರಿಯ ಅಧ್ಯಕ್ಷ  ಸ್ಟ್ಯಾನಿ ಲೋಬೊ    ಅಧಕ್ಷ್ಷತೆ ವಹಿಸಿದ್ದರು ಆಧ್ಯಾತ್ಮಿ ಕ ನಿರ್ದೇಶಕರು. ಉದ್ಘಾಟಕರಾಗಿ ಹಾಜರಿದ್ದರು. ೧೨ ವಲಯದ ೧೨ ಸ್ತ್ರೀ ಹಿತಾ ಸಂಚಾಲಕಿಯರು ದೀಪದ ಮೂಲಕ ವೇದಿಕೆಗೆ ಆಗಮಿಸಿದ ಬಳಿಕ ಅಧ್ಯಾತ್ಮಿಕ ನಿರ್ದೇಶಕರು ವೇದಿಕೆಯಲ್ಲಿ ದೀಪವನ್ನು ಗಣ್ಯರೊಂದಿಗೆ ಸೇರಿ ಉರಿಸಿದ ಬಳಿಕ ಕಾರ‍್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ನಂತರ ತಮ್ಮ ಉದ್ಘಾಟನ ಭಾಷಣದಲ್ಲಿ ಲಿಂಗ ಸಮಾನತೆ ಇನ್ನೂ ಕನಸಾಗಿದೆ. ಪ್ರತಿಯೊಬ್ಬ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಂಡರು. ಪ್ರತಿಯೊಬ್ಬ ಹೆಣ್ಣು ಮಗುವಿಗೆ ಗಂಡು ಮಗುವಿನಂತೆಯೇ ಸಮಾನ ಗೌರವವನ್ನು ನೀಡುವುದು ಅಗತ್ಯ ಎಂದರು.

ತಿಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಹಾಗೂ ಯುವತಿಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರಲ್ಲಿ ಒಬ್ಬರಾದ ಮಿಶೆಲ್ ಕ್ವೀನಿ ಡಿಕೋಸ್ತಾ ಮಾತಾನಾಡಿ ಪ್ರತಿಯೊಬ್ಬ ಮಹಿಳೆಯ ಯಶಸ್ಸು ಇತರ ಮಹಿಳೆಗೆ ಸ್ಪೂರ್ತಿಯಾಗಬೇಕು. ಯುವಜನರನ್ನು ಅವರಿಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಪ್ರೇರೇಪಿಸಬೇಕು. ಸರ್ಕಾರದ ಮೂಲಕ ಆಧಾರಿತವಾದ ಸೇವೆಗಳಿಗೆ ಒತ್ತು ನೀಡಬೇಕು. ಸಮಾನತೆಯನ್ನು ಅಳವಡಿಸಿಕೊಂಡು ಮುನ್ನಡೆಯಿರಿ ಎಂದರು.

ಪ್ರಮುಖ ಅತಿಥಿಯಾದ ಕಲ್ಯಾಣ್‌ಪುರ ಮಿಲಾಗ್ರಿಸ್ ಕಾಲೇಜು ನಿವೃತ್ತ ಉಪಪ್ರಾಂಶುಪಾಲರಾದ ಹಿಲ್ಡಾ ಡಿಸಿಲ್ವಾ ದಿಕ್ಸೂಚಿ ಭಾಷಣದಲ್ಲಿ  ಪುರುಷರಿಗೆ ಮಹಿಳೆಯರು ಸಮಾನರು. ನಾವು ನಮ್ಮ ಕುಟುಂಬಗಳನ್ನು ನೋಡಬೇಕು .ನಾವು ನಮ್ಮ ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು. ಒಬ್ಬ ಮಹಿಳೆ ತನ್ನ ಮಕ್ಕಳಿಗೆ ಮಾದರಿಯಾಗಲು ಸಾಧ್ಯವಾಗದಿದ್ದರೆ, ಮಹಿಳಾ ದಿನಾಚರಣೆಗೆ ಹೆಚ್ಚಿನ ಮಹತ್ವವಿಲ್ಲ ಎಂದು ನುಡಿದರು. ನಮ್ಮ ಕುಟುಂಬದಲ್ಲಿ, ನಮ್ಮ ನೆರೆಹೊರೆಯಲ್ಲಿ ನಮ್ಮ ನಡತೆಯ ಮೂಲಕ ಬದಲಾವಣೆಯನ್ನು ತರಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಥನಿ ಪ್ರೊವಿನ್ಶಿಯಲೇಟ್ ಪ್ರೊವಿನ್ಶಿಯಲ್ ಸುಪಿರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ- ಮಾತನಾಡಿ ಮೌಲ್ಯಗಳು ಅಗತ್ಯ. ಪ್ರತಿಯೊಬ್ಬ ಮಹಿಳೆಯು ನಾಯಕತ್ವ ಮತ್ತು ಜವಾಬ್ದಾರಿ ಮೂಲಕ ಮನೆ ಮತ್ತು ಸಮಾಜದಲ್ಲಿ ಸುಧಾರಣೆಯನ್ನು ಮಾಡಬಹುದು ಎಂದರು. ಅತಿಥಿ ಮಂಗಳೂರು ಧರ್ಮಪ್ರಾತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ ಮಾತನಾಡಿ ಮಹಿಳೆಯರ ಸಾಧನೆಗಳನ್ನು  ಪ್ರಶಂಶಿಸಿದರು. ರಾಜಕೀಯದಲ್ಲಿ ಮಹಿಳೆಯರ ಪಾತ್ರ ಅಗತ್ಯ ಎಂದು ತಿಳಿಸಿ, ಕ್ಯಾಥೋಲಿಕ್ ಸಭೆಯ ಉತ್ತಮ ಕಾರ್ಯಕ್ಕಾಗಿ ಅಭಿನಂದಿಸಿದರು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ್  ಅಧ್ಯಕ್ಷ ಸ್ಟ್ಯಾನಿ ಲೋಬೋ ಅಧ್ಯಕ್ಷ ಭಾಷಣ ಮಾಡಿ ಸಮಾಜಕ್ಕೆ ನಮ್ಮ ಸೇವೆಯು ಪ್ರಮುಖವಾದುದು.

ಯಾವುದೇ ಸಮಸ್ಯೆಗಳನ್ನು ಎದುರಿಸಿ ಅದನ್ನು ಜಯಿಸಬೇಕು ಎಂದು ಕರೆಕೊಟ್ಟರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಉಪಾಧ್ಯಕ್ಷರಾದ  ವಿನೋದ್ ಪಿಂಟೊ ಸ್ವಾಗತಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್  ಸಶಕ್ತೀಕರಣ ಸಂಚಾಲಕಿಯಾದ ಲವೀನಾ ಪಿಂಟೊ ವಂದಿಸಿದರು.  ಎಪಿಸ್ಕೋಪಲ್ ಸಿಟಿ ವಲಯದ ಮಾಜಿ ಅಧ್ಯಕ್ಷ ಪ್ಯಾಟ್ರಿಕ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

Ashika S

Recent Posts

ಆರ್​​ಸಿಬಿ ತಂಡದ ಸತತ 5 ಪಂದ್ಯಗಳ ಗೆಲುವಿಗೆ ಕಾರಣ ಯಾರು ಗೊತ್ತಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ…

2 mins ago

ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕ್ರಿಕೆಟ್ ದಿಗ್ಗಜ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ(ಗನ್​ಮ್ಯಾನ್​) ಸರ್ವೀಸ್ ಗನ್…

13 mins ago

ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಉಪಕರಣಗಳು, ಬಿತ್ತನೆ ಬೀಜ ವಿತರಣೆ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿ…

17 mins ago

ಬೆಂಬಲಿಗರ ಸಭೆ ನಡೆಸಿದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಲ್ಲಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ರಘುಪತಿ ಭಟ್ ಇಂದು ತಮ್ಮ ನಿವಾಸದಲ್ಲಿ…

31 mins ago

14 ಜನರಿಗೆ ಭಾರತದ ಪೌರತ್ವ ನೀಡಿದ ಕೇಂದ್ರ ಸರ್ಕಾರ

ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019  ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ…

39 mins ago

ಕತ್ತು ಸೀಳಿ ಯುವಕನ ಕೊಲೆ ಪ್ರಕರಣ: ಆರೋಪಿ ಪೊಲೀಸರ ಗುಂಡೇಟಿಗೆ ಬಲಿ

ಕತ್ತು ಸೀಳಿ ಯುವಕನನ್ನು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ ಮಾಡಿದ್ದಾರೆ.

52 mins ago