Categories: ಮಂಗಳೂರು

ಮಂಗಳೂರು: ಕರಾವಳಿಗೆ ಉಸ್ತುವಾರಿ ಸಚಿವರು ಯಾರು?

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಪಡೆದಿದ್ದರೂ ಕರಾವಳಿಯಲ್ಲಿ ಪಕ್ಷದ ಸಾಧನೆ ನೀರಸವಾಗಿದೆ. ಕರಾವಳಿ ಈಗಲೂ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಫಲಿತಾಂಶಗಳು ಹೇಳಿವೆ.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 13 ಸ್ಥಾನಗಳಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಅದರಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಶಾಸಕರಾಗಿ ಆಯ್ಕೆಯಾಗಿದ್ದು, ಮಂಗಳೂರು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿ ಕರಾವಳಿಯ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಜಿಜ್ಞಾಸೆ ಮತದಾರರಲ್ಲಿ ಮೂಡಿದೆ. ಆದ್ರೆ ಈ ಅವಕಾಶವನ್ನು ಪರಿಷತ್ ಸದಸ್ಯರು ಬಳಸಿಕೊಳ್ಳಲು ಮುಂದಾಗಿದ್ದು ಎಂ.ಎಲ್.ಸಿಯೂ ಆಗಿರುವ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿ.ಕೆ ಹರಿಪ್ರಸಾದ್ ಸಚಿವ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.

ಇವರ ಜೊತೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ ಹೆಸರು ಸಹ ಕೇಳಿಬಂದಿದೆ. ಅದೇ ರೀತಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಕೂಡ ರೇಸ್‌ ನಲ್ಲಿದ್ದಾರೆ. ಇದೆಲ್ಲದರ ನಡುವೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ರಮಾನಾಥ್ ರೈ‌ ಅವರನ್ನು ಎಂ.ಎಲ್.ಸಿ ಮಾಡಿ ಸಚಿವ ಸ್ಥಾನ ನೀಡಿ ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.

Gayathri SG

Recent Posts

ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ: ಬಸವರಾಜ ಜಾಬಶೆಟ್ಟಿ ಆರೋಪ

'ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ…

3 mins ago

ಜಾನುವಾರುಗಳಿಗೆ ಮೇವು ನೀಡಲು ಸರಕಾರಕ್ಕೆ ಆಗ್ರಹ

ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ…

4 mins ago

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ…

14 mins ago

ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

ಎರಡು ದಿನದ ಹಿಂದೆ ಸಿಲಿಕಾನ್ ಸಿಟಿಗೆ ಮಳೆರಾಯ ತಂಪೆರೆದು ಹೋಗಿದ್ದಾನೆ. ಸದ್ಯ ಇದರ ಬೆನ್ನಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ…

21 mins ago

ನಿಜಶರಣೆಯ ಮಾದರಿ ಬದುಕು: ಎಡೆಯೂರು ಶ್ರೀಗಳು

ಗುರು ಲಿಂಗ ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜಶರಣೆ ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು…

26 mins ago

ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರ ಒತ್ತಾಯ

ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕಾರೇಹಳ್ಳಿ…

28 mins ago