Categories: ಮಂಗಳೂರು

ಮಂಗಳೂರು ನಗರದಲ್ಲಿ ನೀರು ರೇಷನಿಂಗ್‌ ಜಾರಿ

ಮಂಗಳೂರು: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿರುವ ಕಾರಣದಿಂದಾಗಿ ನಾಳೆ (ಮೇ 4) ರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ರೇಷನಿಂಗ್‌ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತದೆ.

ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್‌ (ಮಂಗಳೂರು ಉತ್ತರ) ಭಾಗಕ್ಕೆ ʻಪರ್ಯಾಯ ದಿನʼಗಳಲ್ಲಿ ನೀರು ಬಿಡಲು ಸೂಚಿಸಲಾಗಿದೆ.

ಅದಲ್ಲದೆ, ಕಟ್ಟಡ ರಚನೆ, ಇತರೆ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವೀಸ್‌ ಸ್ಟೇಷನ್‌ ಗಳಿಗೆ ನೀರು ಬಳಕೆಗೆ ಅವಕಾಶವಿಲ್ಲ.  ಮಹಾನಗರದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ನೀರನ್ನು ವಿನಾ ಕಾರಣ ಪೋಲು ಮಾಡುತ್ತಿರುವುದು ಕಂಟಡುಬಂದಲ್ಲಿ ಯಾವುದೇ ಸೂಚನೆ ನೀಡದೆ ನೀರು ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಮೇ 5  ರಂದು ಮಂಗಳೂರು ನಗರ ಉತ್ತರಕ್ಕೆ, ಮೇ 6 ರಂದು ಮಂಗಳೂರು ನಗರ ದಕ್ಷಿಣ ಹೀಗೆ ಕ್ರಮಾನುಗತವಾಗಿ ಈ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ.

 

Umesha HS

Recent Posts

ನೆರೆಮನೆಯ ಕಾರಿನ ಗ್ಲಾಸ್‌ ಪುಡಿ ಮಾಡಿದ ಶಿಕ್ಷಕಿ: ದೂರು ದಾಖಲು

ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

1 min ago

ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದ ಹೆಚ್‌.ಡಿ ಕುಮಾರಸ್ವಾಮಿ

ಹಾಸನದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಉಪ್ಪು ತಿಂದವನು ನೀರು…

20 mins ago

ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರ ಸಾವು

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ರಾಜಾಜಿನಗರ 6th ಬ್ಲಾಕ್‌ ನಲ್ಲಿ…

39 mins ago

ಕಾಂಗ್ರೆಸ್‍ ನ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ: ಡಿಕೆಶಿ

ರಾಜ್ಯದಲ್ಲಿ ಜನ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಯಿಂದ ಬದುಕುತ್ತಿದ್ದಾರೆ. ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

60 mins ago

ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನಿನಲ್ಲಿ ಬಿಡುಗಡೆಗೆ ಸಿದ್ಧ

ಪರಂವಃ ಸ್ಟುಡಿಯೋಸ್ ನಿರ್ಮಾಣದ, ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.…

2 hours ago

ರೈತರಿಗಾಗಿ ಹಣ ಕೇಳಿದ್ದು, ಗ್ಯಾರಂಟಿಗಾಗಿ ಹಣ ಕೇಳಿಲ್ಲ, ಕೇಳುವುದು ಇಲ್ಲ : ಸಿಎಂ

ರೈತರಿಗಾಗಿ ಹಣ ಕೇಳಿದ್ದು, ಗ್ಯಾರಂಟಿಗಾಗಿ ಹಣ ಕೇಳಿಲ್ಲ ಮತ್ತು ಕೇಳುವುದು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ…

2 hours ago