News Karnataka Kannada
Monday, April 15 2024
Cricket
ಮಂಗಳೂರು

ಗ್ರಾಪಂ ಮುಂದೆಯೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು

Villagers offer to cremate the body in front of gram panchayat
Photo Credit : News Kannada

ಮಂಗಳೂರು: ಗ್ರಾಪಂ ಆಡಳಿತ ಶವಸಂಸ್ಕಾರಕ್ಕೆ ಸೌಕರ್ಯ ಒದಗಿಸಿಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಗ್ರಾಪಂ ಮುಂದೆಯೇ ಶವ ಸಂಸ್ಕಾರಕ್ಕೆ ಮುಂದಾದ ಘಟನೆ ಬೆಳ್ತಂಗಡಿಯ ನೆರಿಯಾದಲ್ಲಿ ನಡೆದಿದೆ. ಈ ಹಿಂದೆ ಸ್ಮಶಾನಕ್ಕಾಗಿ ಹಲವು ಬಾರಿ ನೆರಿಯಾ ಗ್ರಾಪಂಚಾಯತ್ ಗೆ ಮನವಿ ಮಾಡಿದ್ದರು. ಆದರೆ ಗ್ರಾಪಂ ಮೂಲಸೌಲಭ್ಯ ಒದಗಿಸದೇ ಅಸಡ್ಡೆ ತೋರಿತ್ತು.

ಈ ಮಧ್ಯೆ ಶನಿವಾರ ನೆರಿಯಾದ ಜನತಾ ಕಾಲೋನಿ ನಿವಾಸಿ ಮೃತಪಟ್ಟಿದ್ದು, ಹಿನ್ನಲೆ ಶವಸಂಸ್ಕಾರಕ್ಕೆ ಸ್ಥಳವಿಲ್ಲದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಅಂತ್ಯಕ್ರಿಯೆ ನಡೆಸದೆ ಶವವಿರಿಸಿ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಮಶಾನಕ್ಕೆ ಸ್ಥಳ ನಿಗದಿ ಮಾಡದೆ ಹೋದರೆ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪರಿಸ್ಥಿತಿ ಕೈ ಮೀರುವ ಮುನ್ನ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಇಟ್ಟಾಡಿ ಎಂಬಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಆದರೆ ಪರಿಶೀಲನೆ ವೇಳೆ ನಿಗದಿತ ಸ್ಥಳದಲ್ಲಿ ಸ್ಮಶಾನ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಗೊಂದಲದ ನಡುವೆ ಪಂಚಾಯತ್ ಮುಂದೆ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದು, ಈ ನಿಟ್ಟಿನಲ್ಲಿ ತುರ್ತು ನಿರ್ಧಾರ ಕೈಗೊಂಡ ತಹಸೀಲ್ದಾರ್‌ ಪಂಚಾಯತ್ ಸಮೀಪದ ಸರಕಾರಿ ಜಾಗವನ್ನ ಸ್ಮಶಾನಕ್ಕಾಗಿ ನಿಗದಿ ಪಡಿಸಲು ಆದೇಶ ನೀಡಿದ್ದಾರೆ. ಸ್ಮಶಾನಕ್ಕೆ ಸ್ಥಳ ನಿಗದಿಯಾದ ಹಿನ್ನಲೆ ಜನರು ಪ್ರತಿಭಟನೆ ಹಿಂಪಡೆದಿದ್ದಾರೆ. ನಿಗದಿತ ಸ್ಥಳದಲ್ಲೇ ಅಂತ್ಯಸಂಸ್ಕಾರಕ್ಕೆ ಮೃತರ ಕುಟುಂಬಸ್ಥರಿಂದ ಸಿದ್ಧತೆ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು