News Karnataka Kannada
Thursday, April 25 2024
ಮಂಗಳೂರು

ಮಂಗಳೂರು: ಜು.15ರಂದು ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ

Vidya Bharathi of Karnataka. District Educational Co-ordination of Mangaluru Region of K District
Photo Credit : News Kannada

ಮಂಗಳೂರು ಜು.14: ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆಯ ಸಂಲಗ್ನತೆ ಬರುವ ಮಂಗಳೂರು ವಲಯದ ಶಾಲೆ, ಪಪೂ ಕಾಲೇಜು ಶಿಕ್ಷಕರಿಗೆ, ಭೋದಕೇತರರಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ದಿನಾಂಕ 15-07-2023ರಂದು ಬೆಳಗ್ಗೆ 9.45ಕ್ಕೆ ತಲಪಾಡಿ ಶಾರದಾ ಪಬ್ಲಿಕ್ ಶಾಲೆ ಆಡಿಟೋರಿಯಂನಲ್ಲಿ ಒಂದು ದಿನದ ಶೈಕ್ಷಣಿಕ ಸಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾಯ್ಕ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಬಿ.ಪುರಾಣಿಕ್ ವಹಿಸಲಿದ್ದಾರೆ. ನಂತರ ಶಾಲೆ ಮತ್ತುಪಪೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳನ್ನು ಹಾಗೂ SGFI ರಾಷ್ಟ್ರ ಮಟ್ಟದಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.

ಅವಧಿ 02ರಲ್ಲಿ 5 ಗುಂಪುಗಳಲ್ಲಿ ವಿದ್ಯಾಭಾರತಿಚಟುವಟಿಕೆ ಹಾಗೂ ಶಾಲೆ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಯ ಕುರಿತಂತೆ ಚರ್ಚೆ ನಡೆಯಲಿದೆ. ಭಾರತೀಯ ಜ್ಞಾನ ಪರಂಪರೆಯ ಕುರಿತಂತೆ ಕುಟುಂಬ ಪ್ರಭೋದನ್‌ನ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ರಿಂದ ವಿಶೇಷ ಭಾಷಣ ನಡೆಯಲಿದೆ.

ಸಮರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶಾರದಾ ಸಮೂಹ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಕಲ್ಕೂರ ಹಾಗೂ ಸಮರೋಪ ಭಾಷಣವನ್ನು ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕ್ಷೇತ್ರೀಯ ನೈತಿಕ ಆಧ್ಯಾತ್ಮಿಕ ಪ್ರಮುಖರಾದ ವೆಂಕಟರಮಣ, ಜಿಲ್ಲಾಅಧ್ಯಕ್ಷರಾದ ಲೋಕಯ್ಯ.ಡಿ, ವಿಭಾಗ ಪ್ರಮುಖರಾದ ದಯಾನಂದ ಕಟೀಲು, ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು