News Karnataka Kannada
Thursday, April 25 2024
ಮಂಗಳೂರು

ಮಳೆ ಲೆಕ್ಕಿಸದೇ ಮೀನುಗಾರಿಕೆ: ಮುಳುಗುತ್ತಿದ್ದ ಯುವಕನ ವಿಡಿಯೋ ವೈರಲ್‌

Video of man drowning in fishing despite rain goes viral
Photo Credit : News Kannada

ಮಂಗಳೂರು: ಮಳೆ ತೀವ್ರವಾಗಿರುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ ಅಪಾಯ ಲೆಕ್ಕಿಸದೇ ಮೀನುಗಾರಿಕೆ ನಡೆಸುತ್ತಿದ್ದ ಯುವಕನ ಬೋಟ್‌ವೊಂದು ಮುಳುಗಡೆಯಾಗಿದ್ದು ಆತನನ್ನು ರಕ್ಷಿಸಲಾಗಿದೆ.

ಮಂಗಳೂರು ಹೊರವಲಯದ ಹರೇಕಳದಲ್ಲಿ ಘಟನೆ ನಡೆದಿದ್ದು, ರೆಡ್ ಅಲರ್ಟ್ ನಡುವೆಯೂ ಯುವಕ ಮೀನುಗಾರಿಕೆ ನಡೆಸುತ್ತಿದ್ದ ಎನ್ನಲಾಗಿದೆ.

ಈ ವೇಳೆ ದೋಣಿ ಮಗುಚಿಬಿದ್ದು ಭಾರೀ ಅವಘಡ ಸಂಭವಿಸಿದೆ. ಹರೇಕಳ- ಅಡ್ಯಾರ್ ಸೇತುವೆಯ ಕೆಳಭಾಗ ನೇತ್ರಾವತಿ ನದಿಯಲ್ಲಿ ಘಟನೆ ನಡೆದಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ನೀರಿನ ಹರಿವು ನದಿಯಲ್ಲಿ ಹೆಚ್ಚಾಗಿತ್ತು ನೀರಿನ ರಭಸಕ್ಕೆ ದೋಣಿ ಏಕಾಏಕಿ ಮಗುಚಿಬಿದ್ದಿದೆ.

ತಕ್ಷಣ ಸ್ಥಳದಲ್ಲಿದ್ದ ಯುವಕರ ತಂಡ ಸೇತುವೆ ಮೇಲಿನಿಂದ ನದಿಗೆ ಹಗ್ಗ ಇಳಿಸಿ ಮೇಲಕ್ಕೆತ್ತಿದ್ದಾರೆ. ದೋಣಿ ನೀರುಪಾಲಾಗಿದ್ದು, ರಕ್ಷಣೆಯ ವೀಡಿಯೋ ವೈರಲ್ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು