Categories: ಮಂಗಳೂರು

ಬೆಳ್ತಂಗಡಿ: ಯಕ್ಷಭಾರತಿ (ರಿ ) ಸಂಸ್ಥೆಯ 8ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ

ಬೆಳ್ತಂಗಡಿ: ಯಕ್ಷಗಾನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸುವ ಅಪೂರ್ವ ಕಲೆ. ಸಮಾಜದಲ್ಲಿ ಯಕ್ಷಗಾನದ ಮೂಲಕ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ, ಪುರಾಣಗಳ ಬಗೆಗೆ ಜಾಗೃತಿ ಮೂಡಿಸಿ ಆಸಕ್ತಿ ಬೆಳೆಸಬಹುದು. ತಾಲೂಕಿನ ಶಾಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಶಗಾನ ತರಬೇತಿ ನೀಡಲು ಸರಕಾರದ ನೆರವು,ಸಹಕಾರ ದೊರಕಿಸ ಲು ಪ್ರಯತ್ನಿಸುವುದಾಗಿ ಶಾಸಕ ಹರೀಶ್ ಪೂಂಜ ನುಡಿದರು.

ಅವರು ಆ. 7 ರಂದು ಉಜಿರೆ ಶ್ರೀರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯ ಕ್ಷಭಾರತಿ    (ರಿ )ಬೆಳ್ತಂಗಡಿ ತಾಲೂಕು ಸಂಸ್ಥೆಯ 8ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ,ಸೇವಾ ಗೌರವ ಸಲ್ಲಿಸಿ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಿದ್ದರು.

ಯಕ್ಷಭಾರತಿ ಯಕ್ಷಗಾನವನ್ನು ಸಂಘಟಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸಭೆಗಳಲ್ಲಿ ಪ್ರೇಕ್ಷಕರ ಕೊರತೆಯಿದ್ದರೂ, ನೇರ ಪ್ರಸಾರದಲ್ಲಿ ಜಗತ್ತಿನಾದ್ಯಂತ ಸಹಸ್ರಾರು ಯಕ್ಷಗಾನ ಕಲಾಭಿಮಾನಿಗಳು ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕಲೆ ಯ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿದೆ.

ಕೊರೊನ ಸಂದರ್ಭದಲ್ಲೂ ಕಲೆ ಮತ್ತು ಕಲಾವಿದರ ಸಂಕಷ್ಟಗಳಿಗೆ ಸರಕಾರ ಹಾಗು ಸಂಘಟನೆಗಳು ಸಹಕರಿಸಿ ಕಲೆಗೆ ಉತ್ತೇಜನ ನೀಡಿದೆ ಎಂದರು. ಮುಖ್ಯ ಅತಿಥಿ ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ! ಟಿ.ಶ್ಯಾಮ್ ಭಟ್ ಯಕ್ಷಗಾನ ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ಕಲಾಭಿ ಮಾನಿಗಳ ಪ್ರೋತ್ಸಾಹ ನಿರಂತರವಾಗಿರಲಿ ಎಂದು ನುಡಿದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜನಾರ್ದನ ದೇವಸ್ತಾನದ ಶರತ್ ಕೃಷ್ಣ ಪಡುವೆಟ್ನಾಯ ಯಕ್ಷಭಾರತಿ ಯಕ್ಷಗಾನಕ್ಕೆ ಮೀಸಲಾಗಿರುವುದರ ಜತೆಗೆ ಶಿಕ್ಷಣ,ಅರೋಗ್ಯ, ಸಮಾಜಸೇವೆಗೆ ತನ್ನನ್ನು ವಿಸ್ತರಿಸಿಕೊಂಡಿದೆ. ಸಮಾಜ ಸೇವಾ ಕೈಂಕರ್ಯ ನಿರಂತರವಾಗಿ ಸಾಗಲು ಎಲ್ಲರ ಸಹಕಾರವಿರಲಿ ಎಂದರು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಪುರಸ್ಕೃತ ನರೇಂದ್ರಕುಮಾರ್ ಉಪಸ್ಥಿತರಿದ್ದರು.

ಯಕ್ಷಭಾರತಿ ಪ್ರಥಮ ಪ್ರಶಸ್ತಿ ಪ್ರದಾನ :

ಯಕ್ಷಭಾರತಿ ಆಯೋಜಿಸಿದ ಯಕ್ಷಭಾರತಿ ಚೊಚ್ಚಲ ಪ್ರಶಸ್ತಿಯನ್ನು ಯಕ್ಷಗಾನ ನಾಟ್ಯಗುರು,ಸಂಘಟಕ,ಕಲಾವಿದ ಮಹಾವೀರ ಪಾಂಡಿ ಕಾಂತಾವರ ಅವರಿಗೆ ಮುಖ್ಯ ಅತಿಥಿಗಳು ಪ್ರದಾ ನಿಸಿದರು. ಉಜಿರೆಯ ಸಮಾಜ ಸೇವಕ ರಾಮಚಂದ್ರ ಶೆಟ್ಟಿ,ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಮತ್ತು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ! ಮುರಳಿಕೃಷ್ಣ ಇರ್ವತ್ರಾಯ ಅವರಿಗೆ ಸೇವಾ ಗೌರವ ಸಮರ್ಪಿಸಲಾಯಿತು. ಧರ್ಮಸ್ಥಳ ಸೊಸೈಟಿ ಅಧ್ಯಕ್ಷ ಹರಿದಾಸ ಗಾಂಭೀರ ಸಮ್ಮಾನಿತರನ್ನು ಅಭಿನಂದಿಸಿದರು. ಭವ್ಯ ಹೊಳ್ಳ,ಕುಸುಮಾಕರ ಮತ್ತು ಸಾಂತೂರು ಶ್ರೀನಿವಾಸ ತಂತ್ರಿ ಸಂಮಾನಪತ್ರ ವಾಚಿಸಿದರು. ಸಮ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿದ್ಯಾನಿಧಿ ವಿತರಣೆ :

ಇದೆ ಸಂದರ್ಭದಲ್ಲಿ ತಾಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಾದ ರತನ್ ,ಕಾರ್ತಿಕ್ ನಾವಡ,ಸುಖೇಶ್, ಜತೀಕ್ಷಾ ಮತ್ತು ಶೃದೀಶ್ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿ, ಬಾಲಕಲಾವಿದೆ, ಡಾ| ಶೌರ್ಯ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು . ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಯಕ್ಷಭಾರತಿ ಯ ಸಾಧನೆಗಳ ವರದಿ ಮಂಡಿಸಿದರು.

ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ ಪ್ರಸ್ತಾವಿಸಿದರು. ಗುರುರಾಜ ಹೊಳ್ಳ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮದ್ಯಾಹ್ನ ಹಿರಿಯ, ಕಿರಿಯ ಕಲಾವಿದರಿಂದ  “ಸಂಜಯ ರಾಯಭಾರ-ಸಂಧಾನಗಮನ” ಪ್ರಸಂಗದ ಯಕ್ಷಗಾನ ತಾಳಮದ್ದಳೆ ಹಾಗೂ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ(ರಿ)ಯ ಪ್ರಸಿದ್ಧ ಕಲಾವಿದರಿಂದ ಚಂದ್ರಶೇಖರ ಧರ್ಮಸ್ಥಳ ನೇತೃತ್ವದಲ್ಲಿ “ತುಳಸಿ ಜಲಂಧರ-ಮಕರಾಕ್ಷ ಕಾಳಗ “ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

ಕಾರ್ಯಕ್ರಮ ಕೊಳ್ತಿಗೆ ಲೈವ್ ಮೂಲಕ ನೇರಪ್ರಸಾರದಲ್ಲಿ ಬಿತ್ತರಗೊಂಡಿತು. ಯಕ್ಷಭಾರತಿ ಸಂಚಾಲಕ ಮಹೇಶ್ ಕನ್ಯಾಡಿ, ಖಜಾಂಚಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ , ಶಿತಿಕಂಠ ಭಟ್, ಹರೀಶ್ ಕೊಳ್ತಿಗೆ, ಹರೀಶ್ ರಾವ್ ಮುಂಡ್ರು ಪ್ಪಾಡಿ, ವಿದ್ಯಾಕುಮಾರ್ ಕಾಂಚೋಡು, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

Sneha Gowda

Recent Posts

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

13 mins ago

ವಕೀಲ ದೇವರಾಜೆಗೌಡ ಮತ್ತೆ 2 ದಿನ ಎಸ್‌ಐಟಿ ಕಸ್ಟಡಿಗೆ

ಜಿಲ್ಲೆಯ 5ನೇ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು,…

37 mins ago

ಕೇರಳದಲ್ಲಿ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್…

53 mins ago

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

1 hour ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

2 hours ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

3 hours ago