ಮಂಗಳೂರು

ಬಂಟ್ವಾಳ: ಆಲಾಡಿ ಜಾಕ್ ವೆಲ್ ಗೆ ಸಚಿವ ಬೈರತಿ ಬಸವರಾಜ್ ಭೇಟಿ

ಬಂಟ್ವಾಳ: ಮಂಗಳೂರು ಕ್ಷೇತ್ರ ಹಾಗೂ ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಗೊಂದಲ ದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಾಡಿಯಲ್ಲಿ ನಿರ್ಮಾಣ ಗೊಂಡಿರುವ ಜಾಕ್ ವೆಲ್ ಗೆ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಬೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾ.ಪಂ.ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.

ಸಜೀಪ ಮುನ್ನೂರು ಸೇರಿದಂತೆ 5 ಗ್ರಾ.ಪಂ.ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಜ್ ಅವರ ವಿಶೇಷ ಪ್ರಯತ್ನ ದಿಂದ 279 ಕೋಟಿ ರೂ ಗಳು ಮಂಜೂರಾಗಿದ್ದು, ಅದರ ಅನುಷ್ಠಾನ ಕೊಂಚ ವಿಳಂಬವಾಗುವುದರಿಂದ , ಈ ಗ್ರಾಮದ ಜನತೆಗೆ ಕುಡಿಯುವ ನೀರು ತತಕ್ಷಣ ನೀಡಲು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಿಂದ ನೀರು ಶುದ್ದೀಕರಣಕ್ಕಾಗಿ ಪಿಲ್ಟರ್ ಅಳವಡಿಸಿ, 0.2 ಎಂ.ಎಲ್.ಡಿ. ನೀರನ್ನು ಸಜೀಪ ಮುನ್ನೂರು ಗ್ರಾಮಕ್ಕೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜತೆಗೆ ಉಳ್ಳಾಲ ಹಾಗೂ ಬಂಟ್ವಾಳದ ಹಲವು ಗ್ರಾಮಗಳಿಗೆ ನೀರನ್ನು ಒದಗಿಸುವ ಕಚ್ಚಾನೀರು ಹಾಗೂ ಶುದ್ದೀಕರಣ ದ ನೀರಿನ ಪೈಪ್ ಲೈನ್ , ಅಳವಡಿಕೆ ಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅನುಮತಿ ನೀಡಲು ಗ್ರಾ.ಪಂ.ಗೆ ಮನವರಿಕೆ ಮಾಡಿದರು .

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸಜೀಪ ಮುನ್ನೂರು ಗ್ರಾಮಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ಈ ಹಿಂದೆಯೂ ಅನ್ಯಾಯವಾಗಿ ರುವುದು ನಮಗೆ ತಿಳಿದಿದ್ದು, ಈಗಾಗಿ ಸತತ ಎರಡು ವರ್ಷಗಳ ಕಾಲ ಹೋರಾಟ ಮಾಡಿ, 279 ಕೋಟಿ ರೂ ಗಳ ಯೋಜನೆ ಮಂಜೂರು ಮಾಡಿಸಲಾಗಿದೆ, ಇದು ಬಂಟ್ವಾಳ ದ ಐದು ಗ್ರಾ.ಪಂ ಗಳಿಗೆ ಶಾಶ್ವತ ನೀರಿನ ಯೋಜನೆ ಯಾಗಿದೆ . ಆದರೆ ತತಕ್ಷಣದ ಪರಿಹಾರಕ್ಕಾಗಿ ಕೊಳವೆ ಬಾವಿ ಕೊರೆದರು ನೀರು ಸಿಗದೆ ಇರುವದುದರಿಂದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರನ್ನು ಸ್ಥಳಕ್ಕೆ ಕರೆಯಿಸಿ, ಗ್ರಾ.ಪಂ.ಅಧ್ಯಕ್ಷ ರು ಹಾಗೂ ಸದಸ್ಯರ ಎದುರಿನಲ್ಲಿ, ಮಾತುಕತೆ ನಡೆಸಲಾಗಿದೆ .

ಜತೆಗೆ ತಕ್ಷಣ ದ ಪರಿಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರನ್ನು ಪಡೆಯಲು, ಸಂಬಂಧ ಪಟ್ಟ, ಅಧಿಕಾರಿಗಳಿಗೆ ಸಚಿವರು, ಸೂಚನೆಯನ್ನು ನೀಡಿದ್ದಾರೆ.

ಆಲಾಡಿ ಪ್ಲಾಂಟೇಷನ್ ಗೆ ಬೇಟಿ ನೀಡಿ ಸಮಾಲೋಚನೆ ನಡೆಸಿ ದ ಬಳಿಕ ಸಚಿವರು ಹಾಗೂ ಶಾಸಕರು ಅಧಿಕಾರಿಗಳ ಜೊತೆ ಮುಡಿಪುವಿನಲ್ಲಿ ನಿರ್ಮಾಣ ಗೊಂಡಿರುವ ಶುದ್ದೀಕರಣ ಘಟಕಕ್ಕೆ ಬೇಟಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ‌.ಅಧ್ಯಕ್ಷೆ ಸಬೀನಾ, ಗ್ರಾಮದ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಜೀಪ, ಸಂತೋಷ್ ಶೆಟ್ಟಿ ದಳಂದಿಲ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ, ಸಹಾಯಕ ಇಂಜಿನಿಯರ್ ಶೋಭಾಲಕ್ಮೀ, ಎ.ಇ.ಇ. ಜಿ.ಕೆ.ನಾಯ್ಕ್ , ಸಹಾಯಕ ಇಂಜಿನಿಯರ್ ಜಗದೀಶ್ ನಿಂಬಾಲ್ಕರ್, ಇ.ಒ.ರಾಜಣ್ಣ, ಸಜೀಪ ಮುನ್ನೂರು ಪಿಡಿಒ ಲಕ್ಷಣ್, ಸಜೀಪ ಮೂಡ ಪಿ.ಡಿಒ ಮಾಯಕುಮಾರಿ, ಕಂದಾಯ ನಿರೀಕ್ಷಕಿ ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

10 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago