Categories: ಮಂಗಳೂರು

ಉಳ್ಳಾಲ: ಮಾ.25, 26 ರಂದು ನಿಂತುಹೋಗಿದ್ದ ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

ಉಳ್ಳಾಲ: ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳ ಎಂಬಲ್ಲಿ ಶಾಸಕ ಯು.ಟಿ.ಖಾದರ್ ಅನುದಾನದಿಂದ ನಿರ್ಮಾಣಗೊಂಡ ಕಂಬಳ ಕರೆ ಉದ್ಘಾಟನೆಗೊಂಡಿದ್ದು, ಇಲ್ಲಿ ಮಾರ್ಚ್ 25,26 ರಂದು ಕಾರಣಾಂತರಗಳಿಂದ‌ ನಿಂತು ಹೋಗಿದ್ದ ಲವ-ಕುಶ ಜೋಡುಕರೆ ಕಂಬಳ ನಡೆಯಲಿದೆ.

ಮೋರ್ಲ-ಬೋಳದ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಕಂಬಳ ಕರೆಯನ್ನ ಬುಧವಾರ ಲವ-ಕುಶ ಜೋಡುಕರೆ ಕಂಬಳ ಉತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಅವರು ಉದ್ಘಾಟಿಸಿದರು.

ಶಾಸಕ ಯು.ಟಿ ಖಾದರ್ ಮಾತನಾಡಿ ಕಂಬಳ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳಿದ್ದಂತೆ. ಯಕ್ಷಗಾನದಂತಹ ವಿಶಿಷ್ಟ ಕಲೆ,ಕಂಬಳದಂತಹ ಕರಾವಳಿಯ ಸಂಸ್ಕೃತಿಯನ್ನ ಭವಿಷ್ಯದಲ್ಲಿ ಉಳಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ನರಿಂಗಾನದಲ್ಲಿ‌ ಕಂಬಳ‌ ಕರೆ ನಿರ್ಮಾಣವಾದ ಕಾರಣ ಗ್ರಾಮೀಣ ಮಟ್ಟದ ಈ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ಈ ಹಿಂದೆ ತಲಪಾಡಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ರಾಜ್ಯ ಸರ್ಕಾರವು ಪ್ರಥಮ ಬಾರಿ ಅನುದಾನ ನೀಡಿತ್ತು.ಇದೀಗ ನರಿಂಗಾನದಲ್ಲಿ ಸರಕಾರಿ ಅನುದಾನದಲ್ಲೇ ಸುಸಜ್ಜಿತ ಕಂಬಳ ಕರೆಯು ನಿರ್ಮಾಣವಾಗಿದ್ದು ಈ ಗ್ರಾಮಕ್ಕೆ ಹೆಮ್ಮೆಯ ವಿಚಾರ ಎಂದರು.

ಲವ-ಕುಶ ಜೋಡುಕೆರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಮಾತನಾಡಿ ಕಂಬಳ ಎಂಬುದು ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುವ ಉತ್ಸವವಾಗಿದೆ.ಕರಾವಳಿಗರ ಜನಪದ ಕ್ರೀಡೆ ಕಂಬಳಕ್ಕೆ ಸರ್ಕಾರ ಬಜೆಟಲ್ಲಿ ಅನುದಾನ ಮೀಸಲಿಡಬೇಕು.ರಾಜ್ಯೋತ್ಸವ ಪ್ರಶಸ್ತಿಗಳನ್ನು ಶಿಫಾರಸು,ಒತ್ತಡಕ್ಕೆ ಮನಿದು ನೀಡದೆ,ಆದ್ಯತೆ ಮೇರೆಗೆ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಕಾನೂನು ತಂದು ಕಂಬಳ ಕೂಟ ನಡೆಸಿ ಸಾಧಕರನ್ನು ಗೌರವಿಸಬೇಕು,ಕಂಬಳ ಓಟಗಾರರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದರು.

ಕುದಿಕಂಬಳ: ನರಿಂಗಾನ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಸರಕಾರಿ ಕಂಬಳ ಕರೆಯಲ್ಲಿ ಬುಧವಾರದಂದು ಕೋಣಗಳ ಕುದಿ ಕಂಬಳ ನಡೆಯಿತು.ವಿವಿಧ ಗುತ್ತಿನ ಮನೆತನದ ಕೋಣಗಳನ್ನ ಕರೆಯಲ್ಲಿ ಪ್ರಾತ್ಯಕ್ಷಿಕೆಗಾಗಿ ಓಡಿಸಲಾಯಿತು.ಈ ಸರಕಾರಿ ಕಂಬಳ ಕರೆಯಲ್ಲಿ ಈ ಹಿಂದೆ ಪಜೀರು ಗ್ರಾಮದಲ್ಲಿ ನಡೆಸಲ್ಪಡುತ್ತಿದ್ದ ಲವ-ಕುಶ ಜೋಡುಕರೆ ಕಂಬಳ ಇದೇ ಮಾರ್ಚ್ 25,26 ರಂದು ನಡೆಯಲಿದೆ.ಪಜೀರಿನಲ್ಲಿ ಸುಮಾರು 25 ವರುಷಗಳಿಂದ ನಡೆಯುತ್ತಿದ್ದ ಲವ-ಕುಶ ಜೋಡು ಕರೆ ಕಂಬಳವು ಸ್ಥಳಾವಕಾಶದ ಕೊರತೆ ಇನ್ನಿತರ ಕಾರಣಗಳಿಂದ‌ ನಿಂತು ಹೋಗಿತ್ತು.

ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬೋಳ ಸಂತ‌ ಲಾರೆನ್ಸ್ ಚರ್ಚ್ ಧರ್ಮಗುರು ಫೆಡ್ರಿಕ್ ಕೊರೆಯಾ,ಲವ-ಕುಶ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಗುಣಪಾಲ ಕಡಂಬ,ಜಿ.ಪಂ.ಮಾಜಿ ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನವೀನ್ ಚಂದ್ರ ಆಳ್ವ ತಿರುವೈಲ್ ಗುತ್ತು, ಬಿ.ಆರ್.ಶೆಟ್ಟಿ, ಮಹಾಬಲ ಆಳ್ವ, ಮನ್ಮತ್ ಜೆ.ಶೆಟ್ಟಿ, ರವೀಂದ್ರ ಶೆಟ್ಟಿ ತಲಪಾಡಿ ದೊಡ್ಡಮನೆ‌, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಬಾಲಕೃಷ್ಣ ರೈ ಬಿಳಿಯೂರು, ಎನ್.ಎಸ್.ಕರೀಂ, ಸಾಹುಲ್ ಹಮೀದ್, ಭರತ್ ರಾಜ್ ಶೆಟ್ಟಿ ಪಜೀರ್ ಗುತ್ತು, ದೇವಪ್ಪ ಮಾಸ್ಟರ್, ನ್ಯಾಯವಾದಿ ರತ್ನಾಕರ ಶೆಟ್ಟಿ ಮೋರ್ಲ, ಪ್ರಭಾಕರ ರೈ ನೆತ್ತಿಲಕೋಡಿ, ಲಕ್ಷ್ಮಣ ಮಾಸ್ಟರ್, ಅತ್ತಾವುಲ್ಲಾ ಪರ್ತಿಪ್ಪಾಡಿ, ನಾರಾಯಣ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮೋರ್ಲ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮುರಳೀಧರ ಶೆಟ್ಟಿ ಮೋರ್ಲ, ನಾಸೀರ್ ನಡುಪದವು, ನಾರಾಯಣ ಶೆಟ್ಟಿ ಬಲೆತ್ತೋಡು, ಸಿದ್ದೀಕ್ ಪಾರೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ ಸ್ವಾಗತಿಸಿದರು. ಅಬ್ದುಲ್ ಜಲೀಲ್ ಮೋಂಟುಗೋಳಿ ವಂದಿಸಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.

Ashika S

Recent Posts

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

12 mins ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

32 mins ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

57 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

1 hour ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

2 hours ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

2 hours ago