Categories: ಮಂಗಳೂರು

ಉಳ್ಳಾಲ: ಜಾಂಬೂರಿ ಗೆ ಉಳ್ಳಾಲದಿಂದ ಹೊರೆಕಾಣಿಕೆ

ಉಳ್ಳಾಲ: ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ ಹೊರೆ ಕಾಣಿಕೆ ನೀಡುವ  ನಿಟ್ಟಿನಲ್ಲಿ ಉಳ್ಳಾಲ ತಾಲೂಕು ಆದರ್ಶವಾಗಿದ್ದು, ಜಾತಿ ಧರ್ಮ, ಬೇದವನ್ನು ಮರೆತು ಉಳ್ಳಾಲ ಸಮಿತಿಯ ಎಲ್ಲಾ ಘಟಕಗಳು ಶಕ್ತಿ ಮೀರಿ ಪ್ರಯತ್ನದಿಂದ 25 ಲಕ್ಷಕ್ಕೂ ಹೆಚ್ಚು ದೇಣಿಗೆ ಮತ್ತು ಆಹಾರ ಸಾಮಾಗ್ರಿಗಳನ್ನು ತಾಲೂಕಿನ ಜನತೆ ಸಮರ್ಪಿಸಿರುವುದು ಅಭಿನಂದನೀಯವಾಗಿದ್ದು, ಒಂದು ವಾರಗಳ ಕಾಲ ನಡೆಯುವ ಈ ಉತ್ಸವವನ್ನು ನೋಡಲು ಜನ ಕಾತರರಾಗಿದ್ದಾರೆ. ಈ ಮೂಲಕ ಕಾರ್ಯಕ್ರಮದ ಸಂಘಟಕ ಡಾ| ಮೋಹನ್ ಆಳ್ವ ಅವರಿಗೆ ಶಕ್ತಿಯನ್ನು ನೀಡಿದಂತಾಗಿದೆ ಎಂದು ವಿಶ್ವ ಸಾಂಸ್ಕೃತಿಕ ಜಾಂಬೂರಿಯ ಉಳ್ಳಾಲ ತಾಲೂಕು ಘಟಕದ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ  ಪ್ರಸಾದ್ ರೈ ಕಲ್ಲಿಮಾರ್  ಅಭಿಪ್ರಾಯಪಟ್ಟರು.

ಮೂಡಬಿದ್ರೆಯ ಆಳ್ವಾಸ್ ನಲ್ಲಿ ನಡೆಯಲಿರುವ ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ  ಉಳ್ಳಾಲ ತಾಲೂಕು ಘಟಕದ ವತಿಯಿಂದ ಸಂಗ್ರಹಿಸಿದ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸತೀಶ್ ಕುಂಪಲ ಇವರು ಮಾತನಾಡಿ ಉಳ್ಳಾಲ ತಾಲೂಕಿನ 17 ಗ್ರಾಮಪಂಚಾಯತ್  ಹಾಗೂ ಉಳ್ಳಾಲ  ನಗರಸಭೆ ಸೋಮೇಶ್ವರ ಪಟ್ಟಣ ಪಂಚಾಯತ್ ಮತ್ತು ಕೋಟೆಕಾರ್ ಪುರಸಭೆ ಇವುಗಳ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳು,ಮಂಗಳೂರು ವಿಶ್ವ ವಿದ್ಯಾನಿಲಯ, 7 ನೇ ಕೆ ಎಸ್ ಆರ್ ಪಿ ಪಡೆ ಅಸೈಗೋಳಿ, ಸಮಾಜ ಮುಖಿ ಮತ್ತು ಶೈಕ್ಷಣಿಕ  ಸಂಘಟನೆಗಳು, ಹೊರೆಕಾಣಿಕೆಯನ್ನು ಮತ್ತು ದೇಣಿಗೆಯನ್ನು ನೀಡಿ  ಯಶಸ್ವಿ ಗೊಳಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಕಾರ್ಯಾಧ್ಯಕ್ಷ ಚಂದ್ರಹಾಸ ಅಡ್ಯಂತಾಯ,  ಆರ್ಥಿಕ ಸಮಿತಿಯ ಸಂಚಾಲಕ ಹೈದರ್ ಪರ್ತಿಪಾಡಿ, ಉಳ್ಳಾಲ ನಗರ ಸಭೆ ಅಧ್ಯಕ್ಷ ಚಿತ್ರಕಲಾ ಚಂದ್ರಕಾಂತ್  ವಿವಿಧ ಸಮಿತಿಯ ಸಂಚಾಲಕರುಗಳಾದ ಚಂದ್ರಹಾಸ ಉಳ್ಳಾಲ್ ,,ದೇವದಾಸ್ ಶೆಟ್ಟಿ, ಗಣೇಶ್ ನಾಯಕ್, ಜೆಸಿಂತಾ, ಮಹಮ್ಮದ್   ಅನ್ಸರ್ ಇನೊಳಿ, ಸುರೇಶ್ ಭಟ್ನಗರ್, ಸಿರಾಜ್ ,ಎಂ. ಎಚ್ ಮಲಾರ್, ಜಗದೀಶ್ ಶೆಟ್ಟಿ, ಕೆಎಮ್‍ಕೆ ಮಂಜಿನಾಡಿ, ಕಮಲಾಕ್ಷ ಶೆಟ್ಟಿಗಾರ್, ಆನಂದ ಶೆಟ್ಟಿ,ಸಂಜೀವ ಶೆಟ್ಟಿ, ಅನಿಲ್ ಬಗಂಬಿಲ ದಯಾನಂದ ತೊಕ್ಕೊಟ್ಟು,ಗೋಪಾಲಕೃಷ್ಣ ಮೇಲಾಂಟ, ರಾಜೇಶ್ ಶೆಟ್ಟಿ ಪಜೀರ್ ಗುತ್ತು, ವಿವಿಧ ಪಂಚಾಯತ್‍ಗಳ ಪಂಚಾಯತ್ ಅಭಿವೃದ್ಧಿ ಅ„ಕಾರಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು ತಾಲೂಕು ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಪ್ರಚಾರ ಸಮಿತಿ ಮುಖ್ಯಸ್ಥರು ತ್ಯಾಗಮ್  ಹರೇಕಳ  ಕಾರ್ಯಕ್ರಮ ನಿರೂಪಿಸಿದರು. ಆರ್ಥಿಕ ಸಮಿತಿ ಸಂಚಾಲಕ  ಚಂದ್ರಹಾಸ್ ಶೆಟ್ಟಿ ವಂದಿಸಿದರು.

ತಾಲೂಕು ಘಟಕದ ಗೌರವ ಅಧ್ಯಕ್ಷ ಮತ್ತು ಶಾಸಕ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸುಮಾರು 30 ಸಭೆಗಳು ಯಾವುದೇ ಖರ್ಚು ಇಲ್ಲದೆ ನಡದಿದ್ದು, ಮಕ್ಕಳ ಈ ಕಾರ್ಯಕ್ರಮಕ್ಕೆ ಎಲ್ಲಾ ವರ್ಗದ ಜನರು ಸುಮಾರು 25 ಲಕ್ಷದಷ್ಟು ದೇಣಿಗೆ ಮತ್ತು ಸುಮಾರು 10,000ಕ್ಕೂ ಹೆಚ್ಚು ತೆಂಗಿನ ಕಾಯಿ, ಆಹಾರ ಪದಾರ್ಥಗಳು 100 ಕಿಂಟಲ್ ಕ್ಕಿಂತಲೂ ಹೆಚ್ಚು ಅಕ್ಕಿ ನೀಡಿ ಸಹಕರಿಸಿದ್ದು, ಮುಖ್ಯ ಸಮಿತಿ ಮತ್ತು ಗ್ರಾಮ ಸಮಿತಿಗಳ ಈ ಕಾರ್ಯ ಶ್ಲಾಘನೀಯ ಪ್ರಸಾದ್ ರೈ ಕಲ್ಲಿಮಾರ್ , ಉಳ್ಳಾಲ ತಾಲೂಕು ಘಟಕದ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ

Sneha Gowda

Recent Posts

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

14 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

56 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

59 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

1 hour ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

2 hours ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago