Categories: ಮಂಗಳೂರು

ಉಳ್ಳಾಲ: ಆಕಸ್ಮಿಕ ಬೆಂಕಿ ಅವಘಡ, ಮನೆ ಸಂಪೂರ್ಣ ಭಸ್ಮ

ಉಳ್ಳಾಲ: ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ರ ಮನೆಯಲ್ಲಿ ಇಂದು ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಮನೆಯು ಸಂಪೂರ್ಣವಾಗಿ ಕರಕಲವಾಗಿದ್ದು, ಯಾವುದೇ ಪ್ರಾಣ ಹಾನಿ ನೋವು ಸಂಭವಿಸಿರುವುದಿಲ್ಲ.

ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿರುವುದಿಲ್ಲ, ಆದರೆ ಮನೆಯು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು, ಮಕ್ಕಳ ಶಾಲಾ ಪಠ್ಯ ಪುಸ್ತಕ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮಗೊಂಡಿದೆ.

ಘಟನಾ ಸ್ಥಳದ ಮಾಹಿತಿ ಪಡೆದು ಶಾಸಕ ಯು ಟಿ ಖಾದರ್ ಭೇಟಿ ನೀಡಿದ್ದು, ಅದೇ ರೀತಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳಾದ ರೆಹನ ನಝೀರ್, ಅನೀಸ್, ಹನೀಫ್, ರೆಹನ ಮುಹಮ್ಮದ್, ಅಬ್ದುಲ್ ಬಶೀರ್ SM ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಮಾತುಗಳನ್ನಾಡಿದರು.

ಸ್ಥಳಕ್ಕೆ ಅಗ್ನಿಶಾಮಕದಳದ ಬೇಟಿ ನೀಡಿ , ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Ashika S

Recent Posts

ಜಾಗದ ತಕರಾರು: ನಗರಸಭಾ ಸದಸ್ಯನಿಂದ ದಂಪತಿ ಮೇಲೆ ಹಲ್ಲೆ, ಜೀವಬೆದರಿಕೆ

ಜಾಗದ ತಕರಾರಿಗೆ ಸಂಬಂಧಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ…

10 mins ago

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ : ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ…

22 mins ago

ಭಾರೀ ಗಾಳಿ ಮಳೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಸಂಜೆ ಸುರಿದ ಜೋರಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಪಲ್ಟಿಯಾದ…

25 mins ago

ದ.ಕ ಬರ ಪರಿಸ್ಥಿತಿ ಹಿನ್ನಲೆ ನೀರು ಪೂರೈಕೆಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…

31 mins ago

ಕಲ್ಲಡ್ಕದಲ್ಲಿ ಪ್ರಥಮ ಮಳೆಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ಅಸ್ತವ್ಯಸ್ತ

ನಿನ್ನೆ ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

37 mins ago

ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದಲ್ಲಿ ಬಹುಕೋಟಿ ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌…

50 mins ago