ಮಂಗಳೂರು

ಉಜಿರೆ: ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಹಾಗೂ ಗುರುವಂದನೆ ಕಾರ್ಯಕ್ರಮ

ಉಜಿರೆ: ಉದಯೋನ್ಮುಖ ಕಲಾವಿದರನ್ನು ಸೃಷ್ಟಿಸಿ ಅವರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಉಜಿರೆಯಲ್ಲಿ ಪ್ರಾರಂಭಗೊಂಡ ಯಕ್ಷಜನಸಭಾ ಮೂಲಕ ತಾಲೂಕಿನಲ್ಲಿ ಅನೇಕ ಹಿಮ್ಮೇಳ ಮುಮ್ಮೇಳ ಕಲಾವಿದರು ಮೂಡಿಬಂದಿದ್ದಾರೆ.

ತುಳುನಾಡು ದೈವಾರಾಧನೆಯ ಕೇಂದ್ರವಾಗಿ ಯಕ್ಷಗಾನ ಕಲೆ ಶತಶತಮಾನಗಳಿಂದ ಬೆಳೆದುಬಂದಿದೆ. ಜಿಲ್ಲೆಯಲ್ಲಿ ಯಕ್ಷಗಾನ ಕಲಾವಿದರು, ಸಂಘಟಕರು ಹಾಗು ಅಪಾರ ಅಭಿಮಾನಿಗಳಿದ್ದಾರೆ.

ಹಿಂದೂ ಸಮಾಜ ಎಚ್ಛೆತ್ತುಕೊಳ್ಳುವ ಶುದ್ಧ ಕಲೆಯನ್ನು ಬೆಳೆಸುವ, ಕಲೆಯ ವಿವಿಧ ಪ್ರ ಕಾರವನ್ನೂ ಆರಾಧಿಸುವ ಕಾರ್ಯ ತಾಲೂಕಿನಲ್ಲಿ ನಿರಂತರ ನಡೆದುಕೊಂಡು ಬರುತ್ತಿದೆ. ಯಕ್ಷಗಾನ ಕಲೆ ಪೌರಾಣಿಕ ಜ್ಞಾನವನ್ನು ಉಣಬಡಿಸುವ ಪ್ರೀತಿಯ ಕಲೆ. ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಶಿಷ್ಯೋತ್ತಮರನ್ನು ಕೊಟ್ಟ ತಾಲೂಕಿನಲ್ಲಿ ಇನ್ನಷ್ಟು ಕಲಾವಿದರು ಮೂಡಿ ಬರಲಿ ಎಂದು ಉಜಿರೆಯ ಖ್ಯಾತ ದಂತ ವೈದ್ಯ ಹಾಗು ಯಕ್ಷಜನ ಸಭಾ ಅಧ್ಯಕ್ಷ ಡಾ| ಎಂ.ಎಂ.ದಯಾಕರ್ ನುಡಿದರು.

ಅವರು ಜೂ 26 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನ ಹಾಗು ಯಕ್ಷಜನ ಸಭಾ ವತಿಯಿಂದ ನಡೆದ 4 ದಿನಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಯಕ್ಷಜನ ಸಭಾ ವತಿಯಿಂದ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ, ಯಕ್ಷಗಾನ ಹಿಮ್ಮೇಳ ಕಲಾವಿದ ಜನಾರ್ದನ ತೋಳ್ಪಡಿತ್ತಾಯ ಅವರು ಯಕ್ಷ ಗುರು ಮೋಹನ ಬೈಪಾಡಿತ್ತಾಯ ಅವರನ್ನು ಅಭಿನಂದಿಸಿ ಸ್ವತಃ ಅತ್ತ್ಯತ್ತಮ ಕಲಾವಿದರೂ, ಚೆಂಡೆವಾದಕರೂ , ಭಾಗವತರೂ ಆಗಿ ಬೈಪಡಿತ್ತಾಯರು ಪುರಾಣದ ಖಚಿತ ಮಾಹಿತಿ ಹೊಂದಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಾಳ್ಮೆ, ಪರಿಶ್ರಮದಿಂದ ಗುಣಮಟ್ಟದ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದಾರೆ. ಮಿತಭಾಷಿಯಾಗಿ ತನ್ನ ಕಲಾಸಿದ್ಧಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದಿದ್ದಾರೆ. ಅವರ ಕಲಾಸೇವೆ ನಿರಂತರವಾಗಿ ನಡೆದು ಮತ್ತಷ್ಟು ಕಲಾವಿದರ ಸೃಷ್ಟಿಯಾಗಲಿ ಎಂದು ನುಡಿದರು.

ಯಕ್ಷಜನಸಭಾ ಸಂಚಾಲಕ ವೆಂಕಟ್ರಮಣ ರಾವ್ ಸ್ವಾಗತಿಸಿ,ಪ್ರಸ್ತಾವಿಸಿದರು . ದಿನೇಶ್ ರಾವ್ ಬಳ್ಳಮಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ| ಜಿ.ಪಿ.ಹೆಗ್ಡೆ ವಂದಿಸಿದರು.

ಬಳಿಕ ಹಿರಿಯ ಯಕ್ಷಗಾನ ಕಲಾವಿದರಿಂದ “ನರಕಾಸುರ ಮೋಕ್ಷ “ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಹಾಡುಗಾರಿಕೆಯಲ್ಲಿ ವೆಂಕಟ್ರಮಣ ರಾವ್ ಹಾಗು ಶ್ರೀವಿದ್ಯಾ ಐತಾಳ್, ಹಿಮ್ಮೇಳದಲ್ಲಿ ಜನಾರ್ದನ ತೋಳ್ಪಡಿತ್ತಾಯ, ರಾಮಪ್ರಕಾಶ್ ಕಲ್ಲೂರಾಯ,  ಶ್ರೇಯಸ್ ಪಾಳಂದೆ ಮತ್ತು ಗಣೇಶ್ ಭಟ್ ಸಹಕರಿಸಿದ್ದರು.

ನಾಲ್ಕು ದಿನಗಳ ಕಾಲ ಹಿರಿಯ ಕಿರಿಯ ಅರ್ಥಧಾರಿಗಳಿಂದ “ಗುರು ದಕ್ಷಿಣೆ”, “ಗಿರಿಜಾ ಕಲ್ಯಾಣ”, “ಕಚ ದೇವಯಾನಿ” ಹಾಗು “ಶ್ರೀದೇವಿ ಕೌಶಿಕೆ ” ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು.

Sneha Gowda

Recent Posts

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

25 mins ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

40 mins ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

1 hour ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

2 hours ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago