Categories: ಮಂಗಳೂರು

ಉಜಿರೆ: ಧರ್ಮಸ್ಥಳದ ಗೋಕುಲಕ್ಕೆ ಪುಂಗನೂರು ಹಸುಗಳ ಆಗಮನ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲಕ್ಕೆ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ. ಅತ್ಯಂತ ಆಕರ್ಷಕ ಹಾಗೂ ಬೆಲೆಬಾಳುವ ಈ ತಳಿಗೆ ಹೆಚ್ಚಿನ ವಿಶೇಷ ಬೇಡಿಕೆ ಇದೆ.

ದೇಶದಲ್ಲಿ ಸುಮಾರು 40 ವಿವಿಧ ತಳಿಯ ಹಸುಗಳಿದ್ದರೂ ಪುಂಗನೂರು ಹಸುವಿಗೆ ಸಮಾನವಾದದ್ದು ಯಾವುದು ಇಲ್ಲ. ಜಗತ್ತಿನಾದ್ಯಂತ ಗುರುತಿಸಲ್ಪಡುವ ಈ ತಳಿಯ ಹಸುಗಳ ಮೂಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮ. ಈ ಕಾರಣದಿಂದ ಹಸುವಿನ ತಳಿಗೂ ಗ್ರಾಮದ ಹೆಸರೇ ಬಂದಿದೆ ಎಂದು ಹೇಳಲಾಗಿದೆ.

ತೀರಾ ಸಾಧು ಸ್ವಭಾವದ ಈತಳಿಯ ದನ ಒಂದಕ್ಕೆ ಲಕ್ಷಾಂತರ ರೂ.ಬೆಲೆ ಇದೆ. ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಇವು ಬಹಳ ಶುಭ್ರ ಹಾಗೂ ಸ್ವಚ್ಛವಾಗಿರುತ್ತವೆ. ಸ್ವಚ್ಛತೆಯ ವಿಚಾರ ಈ ತಳಿಯ ಹಸುಗಳು ಹೆಚ್ಚಿನ ಪ್ರಾಧ್ಯಾನತೆ ನೀಡುತ್ತವೆ. ಮಾಮೂಲು ಆಹಾರ ಪದ್ಧತಿಯಲ್ಲಿ ಬೆಳೆಯುವ ಇವುಗಳಿಗೆ ವಿಶೇಷ ಆಹಾರ ಪದ್ಧತಿಯ ಅಗತ್ಯ ಇರುವುದಿಲ್ಲ. ಹುಲ್ಲುಗಾವಲುಗಳಲ್ಲಿ ಮೇಯಲು ಇವು ಇಷ್ಟಪಡುತ್ತವೆ. ಇವುಗಳು ಸ್ವಭಾವತ: ಜನರೊಂದಿಗೆ ಹಾಗೂ ಇತರ ಜಾನುವಾರುಗಳೊಂದಿಗೆ ಕೂಡಲೇ ಹೊಂದಿಕೊಳ್ಳುತ್ತವೆ. ಬಲು ಬೇಡಿಕೆಯ ಈ ಹಸುಗಳ ಲಭ್ಯತೆ ಇಂದು ಕಷ್ಟವಾಗಿದೆ.

ಗುಣ ವಿಶೇಷಗಳು

ಶ್ರೀ ಕ್ಷೇತ್ರಕ್ಕೆ ಎರಡು ದನ ಒಂದು ಹೆಣ್ಣು ಹಾಗೂ ಗಂಡು ಕರು ಹಾಗೂ ಒಂದು ಹೋರಿಯನ್ನು ತರಲಾಗಿದೆ. ಇವುಗಳ ಹಾಲಿಗೆ ವಿಶೇಷ ಸ್ಥಾನವಿದ್ದು ಪೌಷ್ಟಿಕತೆ ಮತ್ತು ಪಾವಿತ್ರ್ಯತೆ ಅಧಿಕ. ಹಾಲಿಗೆ ರೋಗನಿರೋಧಕ ಶಕ್ತಿ ಇದ್ದು ಹೋಮಿಯೋಪತಿ ಔಷಧಿಗಳಲ್ಲೂ ಬಳಸಿಕೊಳ್ಳಲಾಗುತ್ತದೆ. ಈ ಹಸುಗಳ ಹಾಲು ಆರೋಗ್ಯಕರವಾಗಿದ್ದು ಮಕ್ಕಳು ರೋಗಿಗಳಿಗೂ ಹೆಚ್ಚು ಉಪಯುಕ್ತ. ಇವುಗಳ ಹಾಲಿನಲ್ಲಿ ಬೆಣ್ಣೆ ಅಂಶವೂ ಹೆಚ್ಚಿದ್ದು , ಇದರಿಂದ ತಯಾರಿಸುವ ತುಪ್ಪಕ್ಕೂ ಸಾವಿರಾರು ರೂ. ಬೆಲೆ ಇದೆ.ಗಿಡ್ಡ ದೇಹ,ಕಡಿಮೆ ತೂಕದ ಇವು ಬಿಳಿ ಬೂದು ಹಾಗೂ ತಿಳಿ ಕಂದು ಬಣ್ಣದಲ್ಲಿ ಇರುತ್ತವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೆ ಈ ಹಸುಗಳ ಹಾಲನ್ನು ಉಪಯೋಗಿಸುವ ಉದ್ದೇಶ ಹಾಗೂ ಅಳಿವಿನಂಚಿನಲ್ಲಿರುವ ಇವುಗಳ ತಳಿಯ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಹಸುಗಳ ಆಗಮನವಾಗಿದೆ.

ಪುರಾಣಗಳಲ್ಲಿ ಕೇಳಿ ಬರುವ ಕಾಮಧೇನು ಪುಂಗನೂರು ತಳಿಯ ಹಸು ಎನ್ನಲಾಗುತ್ತದೆ. ಜತೆಗೆ ಹಿಂದೆಲ್ಲಾ ಈ ಹಸುಗಳನ್ನು ರಾಜರು, ಆಗರ್ಭ ಶ್ರೀಮಂತರು ಮಾತ್ರ ಸಾಕುತ್ತಿದ್ದರು ಎಂಬ ಉಲ್ಲೇಖವೂ ಇದೆ.ತಳಿಯನ್ನು ಅಭಿವೃದ್ಧಿಪಡಿಸಿದ್ದು ಆಂಧ್ರಪ್ರದೇಶದ ರಾಜ ಮನೆತನಗಳು ಎಂದು ಹೇಳಲಾಗುತ್ತದೆ ದೇಶದಲ್ಲಿ ಈಗ ಅತಿ ಕಡಿಮೆ ಸಂಖ್ಯೆಯಲ್ಲಿ ಪುಂಗನೂರು ಹಸುಗಳಿವೆ ಎಂದು ತಿಳಿದುಬಂದಿದೆ.

Ashika S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

26 mins ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

50 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

1 hour ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

3 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

3 hours ago