ಮಂಗಳೂರು

ಉಜಿರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಉದಯರಾಗದೊಂದಿಗೆ ಎರಡನೇ ದಿನ ಆರಂಭ

ಉಜಿರೆ: ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯುತ್ತಿರುವ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವು ಉದಯರಾಗದೊಂದಿಗೆ ಆರಂಭಗೊಂಡಿತು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಲಾವಿದರು ಕರ್ನಾಟಕ ಸಂಗೀತದ ರಸಧಾರೆಯೊಂದಿಗೆ ಭಕ್ತಿಸುಧೆಯನ್ನು ಹರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧವಾಗಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೂಂಡ ಕೃತಿಗಳನ್ನು ಆಧರಿಸಿ ಬೆಂಗಳೂರಿನ ಅದಿತಿ ಪ್ರಹ್ಲಾದ ಹಾಗೂ ಮಂಗಳೂರಿನ ಮೇಧಾ ಉಡುಪ ಗಾಯನ ಪ್ರಸ್ತುತಪಡಿಸಿದರು.
“ಪ್ರಥಮದಲಿ ವಂದಿಸುವೆ..” ಗೀತೆಯೊಂದಿಗೆ ಸಂಗೀತ ಕಛೇರಿ ಪ್ರಾರಂಭವಾಯಿತು. ಬಳಿಕ “ಕರುನಾಳು ಪರಮೇಶ..” ಎಂಬ ರೇವತಿ ರಾಗದ ರೂಪಕ ತಾಳದಲ್ಲಿನ ವಿದ್ವಾನ್ ಎಂ. ನಾರಾಯಣರಾವ್ ವಿರಚಿತ ಭಕ್ತಿಗೀತೆಯನ್ನು ಇಂಪಾಗಿ ಹಾಡಿದರು.
ಶತಾವಧಾನಿ ಆರ್. ಗಣೇಶ್ ವಿರಚಿತ, ಡಾ. ರಾಜಕುಮಾರ್ ಭಾರತಿ ರಾಗ ಸಂಯೋಜಿಸಿರುವ ಶ್ರೀ ಮಂಜುನಾಥಸ್ವಾಮಿ ಎಂಬ ಗೀತೆಯನ್ನು (ಆದಿತಾಳದ ತೋಡಿ ರಾಗ) ಪ್ರಸ್ತುತಪಡಿಸಿದರು. “ಕಾಮಿನಿ ಕರೆದಾರೆ..” ಎಂಬ ದ್ವಿಜವತಿ ರಾಗದ ಮಿಶ್ರ ತಾಳದ ಗೀತೆಯನ್ನು ಹಾಡಿದರು.
ಮಂಗಳ ಗೀತೆಯಾಗಿ ಆದಿತಾಳದ ಮಧ್ಯವತಿ ರಾಗದ “ಧರೆಯೊಳು ಹೆಸರಾಂತ..” ಎಂಬ ಹಾಡನ್ನು ಪ್ರಸ್ತುತಪಡಿಸಿದರು. ಈ ಗೀತೆಯ ಮೊದಲ ಚರಣವನ್ನು ಹೆಸರಾಂತ ಯಕ್ಷಗಾನ ಭಾಗವತ ಮಂಜುನಾಥ ಭಾಗವತ ರಚಿಸಿದರೆ, ನಂತರದ ಆರು ಚರಣಗಳನ್ನು ಮುರುಳೀಧರ್ ಭಟ್ ಕಟೀಲು ಬರೆದಿದ್ದಾರೆ. ಗಾಯನಕ್ಕೆ ವಯೋಲಿನ್ ನಲ್ಲಿ ಬೆಂಗಳೂರಿನ ಕಾರ್ತಿಕೇಯ ಆರ್. ಹಾಗೂ ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಸಾಥ್ ನೀಡಿದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿತ್ಯಾನಂದ ರಾವ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ಐತಾಳ್ ನಾಯ್ಕ ಸನ್ಮಾನಿಸಿದರು.
Ashika S

Recent Posts

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

11 mins ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

26 mins ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

38 mins ago

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

9 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

9 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

9 hours ago