Categories: ಮಂಗಳೂರು

ಮೂಲ್ಕಿಗೆ ಪ್ರಧಾನಿ ಮೋದಿ ಭೇಟಿ, ಸಮುದ್ರ ಗಸ್ತು ಹೆಚ್ಚಳ

ಮಂಗಳೂರು: ಕರಾವಳಿಯ ಭಾಗದಲ್ಲಿ ಮೇ 3ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸಲಾಗಿದೆ.

ಪ್ರಧಾನಿಯವರು ಮೂಲ್ಕಿ ಸಮೀಪದ ಕೊಳ್ನಾಡು ಹಾಗೂ ಬಳಿಕ ಅಂಕೋಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹೆಚ್ಚುವರಿ ಭದ್ರತೆಗಾಗಿ ಕೋಸ್ಟ್‌ಗಾರ್ಡ್‌ ಹಾಗೂ ಕರಾವಳಿ ಕಾವಲು ಪಡೆಯ 200 ಸಿಬ್ಬಂದಿ, 200 ಮಂದಿ ಪೊಲೀಸರು ಹಾಗೂ ಇತರ 50 ಮಂದಿ ಕಡಲತೀರ ಹಾಗೂ ಸಮುದ್ರದಲ್ಲಿ ಗಸ್ತು ನಿರತರಾಗಿದ್ದಾರೆ.

ಸೋಮವಾರದಿಂದಲೇ ಸಮುದ್ರದಲ್ಲಿ ಹಲವು ಬಾರಿ ಗಸ್ತು ಕಾರ್ಯಾಚರಣೆ ನಡೆದಿದ್ದು, ಗುರುವಾರದವರೆಗೂ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಸ್ಥಳೀಯ ಪೊಲೀಸರು ಹಾಗೂ ಗರುಡಾ ದಳ ಕೂಡ ಕಾರ್ಯಾಚರಣೆಗಿಳಿದಿದೆ. ಭದ್ರತೆ ಗಾಗಿ ಹೆಚ್ಚುವರಿ ಶಿಪ್‌ಗ್ಳನ್ನು ಕೂಡ ನಿಯೋಜಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಲಾಡ್ಜ್ಗಳು, ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಪರಿಶೀಲಿಸಲಾಗಿದೆ. ಕೆರ್ವಾಶೆ, ಬೈಂದೂರು, ಕುಂದಾಪುರ ನಗರ, ಕಾರ್ಕಳ ನಗರಗಳಲ್ಲಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬಂದಿ ಪಥ ಸಂಚಲನ ನಡೆಸಿದರು.

ಬೈಂದೂರಿನ ಗುಲ್ವಾಡಿ ಮಾವಿನ ಕಟ್ಟೆಯಲ್ಲಿ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಕುಂದಾಪುರ ವೃತ್ತದ ಅಧಿಕಾರಿ ಸಿಬಂದಿಗಳು ಪಥ ಸಂಚಲನೆ ನಡೆಸಿದರು. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಚಿಸಿರುವ ಚೆಕ್‌ಪೋಸ್ಟ್‌ಗಳಲ್ಲಿಯೂ ಮಂಗಳವಾರ ವಿಶೇಷ ತಪಾಸಣೆ ನಡೆಸಲಾಯಿತು.

ಉಡುಪಿ ಪೊಲೀಸರು ಅಂಕೋಲಾಕ್ಕೆ
ಉತ್ತರ ಕನ್ನಡದ ಅಂಕೋಲಾಕ್ಕೂ ಪ್ರಧಾನಿ ಭೇಟಿ ನೀಡಲಿರುವ ಕಾರಣ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಒಬ್ಬರು ಡಿವೈಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್‌ ಹಾಗೂ 100 ಮಂದಿ ಪೊಲೀಸರು ಕರ್ತವ್ಯಕ್ಕಾಗಿ ಅಲ್ಲಿಗೆ ತೆರಳಿದ್ದಾರೆ.

Gayathri SG

Recent Posts

ಸಿಡಿಲು ಬಡಿದು 10 ದಿನದ ಹಿಂದೆ ಮದುವೆಯಾಗಿದ್ದ ಯುವಕ ಮೃತ್ಯು

ಹತ್ತು ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ…

8 mins ago

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…

8 hours ago

ಗುಂಡ್ಲುಪೇಟೆಯಲ್ಲಿ ಮಳೆಗೆ ನೆಲಕ್ಕುರುಳಿದ ಮರಗಳು

ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…

8 hours ago

ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಪದವೀಧರರಿಗೆ ಅವಕಾಶ

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…

9 hours ago

ಹಿಂದೂ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಅನ್ಯ ಕೋಮಿನ ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…

9 hours ago

ಮೈಸೂರಿಗೆ ತಂಪೆರೆದ ವರುಣ, ಸೃಷ್ಟಿಸಿದ್ದು ಹತ್ತಾರು ಅವಾಂತರ!

ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…

9 hours ago