ಸುಡು ಬಿಸಿಲಿನಲ್ಲಿಯೂ ಜಲಸಮೃದ್ಧವಾದ ನರಹರಿ ಪರ್ವತದ ತೀರ್ಥ ಬಾವಿ

ಬಂಟ್ವಾಳ: ಬಂಟ್ಚಾಳ ತಾಲೂಕಿನ ನರಹರಿ ಪರ್ವತ ಕ್ಷೇತ್ರದಲ್ಲಿ ನಾಲ್ಕು ತೀರ್ಥ ಬಾವಿಗಳು ಸುಡು ಬೇಸಿಗೆಯಲ್ಲೂ ಜಲಸಮೃದ್ದವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಭೂಮಿಯಲ್ಲಿ ನೀರಿನ ಸೆಲೆ ಬರಡಾಗುತ್ತಿದೆ. ನದಿ, ಕರೆ,ಕುಂಟೆ, ಬಾವಿ, ತೊರೆ, ಡ್ಯಾಂಗಳಲ್ಲಿ ನೀರು ಬತ್ತಿ ತಳ ಕಾಣಿಸುತ್ತಿದ್ದರೂ, ೩೫೦ ಅಡಿ ಎತ್ತರದಲ್ಲಿ ಕರ್ಗಲ್ಲು ಬೆಟ್ಟದ ಮೇಲಿರುವ ನರಹರಿ ಪರ್ವತದ ತೀರ್ಥ ಬಾವಿಗಳು ನೀರಿನಿಂದ ತುಂಬಿ ತುಳುಕುವ ಮುಲಕ ಭಕ್ತಾಧಿಗಳಲ್ಲಿ ಅಚ್ಚರಿ ಮೂಡಿಸುತ್ತಿದೆ.

ಬಂಟ್ಚಾಳ ತಾಲೂಕಿನ ಮೂರು ಗ್ರಾಮಗಳ ಗಡಿ ಸಂಗಮದಂತಿದೆ ನರಹರಿ ಪರ್ವತ ಕ್ಷೇತ್ರ. ಕುರುಕ್ಷೇತ್ರ ಯುದ್ದದ ಬಳಿಕ ಪಾಪವಿಮೋಚನೆಗಾಗಿ ಪಾಂಡವರು ಅಜ್ಞಾತವಾಸ ಕೈಗೊಂಡಿದ್ದಾಗ ಶ್ರೀ ಕೃಷ್ಣನ ಜೊತೆ ನರಹರಿ ಬೆಟ್ಟಕ್ಕೂ ಭೇಟಿ ನೀಡಿದ್ದರು.

ಈ ಸಂದರ್ಭ ಬೆಟ್ಟದ ಮೇಲೆ ಶ್ರೀ ಸದಾಶಿವ ದೇವರ ಲಿಂಗ ಪ್ರತಿಷ್ಠಾಪಿಸಿ ಅಭಿಷೇಕಕ್ಕೆ ಬೆಟ್ಟದ ಮೇಲೆ ನೀರು ಸಿಗದೇ ಇದ್ದಾಗ ಶ್ರೀ ಕೃಷ್ಣನು ತನ್ನ ಆಯುಧಗಳಾದ ಶಂಖ ಚಕ್ರ ಗಧಾ ಪದ್ಮಗಳಿಂದ ತೀರ್ಥ ಬಾವಿಗಳನ್ನು ನಿರ್ಮಿಸಿದನು ಎನ್ನುವ ಪ್ರತೀತಿ ಇದೆ. ಈ ತೀರ್ಥ ಬಾವಿಯಲ್ಲಿ ಎಂತಹ ಬರಗಾಲ ಬಂದರೂ ನೀರು ಬತ್ತಿಲ್ಲ ಎನ್ನುವುದು ಹಿರಿಯರ ಅಭಿಪ್ರಾಯ. ಆಟಿ ಅಮಾವಾಸ್ಯೆಯ ತೀರ್ಥ ಸ್ನಾನದ ಸಂದರ್ಭ ಬಾವಿಯಲ್ಲಿ ತುಂಬಿರುವಷ್ಠೇ ನೀರು ಈಗಲೂ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ. ನಾಲ್ಕೂ ತೀರ್ಥ ಬಾವಿಗಳಲ್ಲೂ ಭಕ್ತರ ಕೈಗೆ ಸಿಗುವಷ್ಟು ಎತ್ತರದಲ್ಲಿ ನೀರು ತುಂಬಿಕೊಂಡಿದೆ. ದೇವರ ಅಭಿಷೇಕ, ನೈವೇದ್ಯ, ಹಾಗೂ ಭಕ್ತರಿಗೆ ಕುಡಿಯಲೂ ಇಲ್ಲಿನ ಗದಾ ತೀರ್ಥದ ನೀರನ್ನು ಬಳಸಿಕೊಳ್ಳಲಾಗುತ್ತದೆ.

೧೯೯೨ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಸುವ ಸಂದರ್ಭ ಕಾಮಗಾರಿಗೆ ಬಳಸಲು ಈ ಕೆರೆಯ ನೀರನ್ನು ಬಳಸುತ್ತಿದ್ದರು. ಈ ಸಂದರ್ಭ ತೀರ್ಥ ಬಾವಿಯಲ್ಲಿ ನೀರು ಕಡಿಮೆಯಾದರೂ ಕೂಡ ಮರು ದಿನ ಬೆಳಗ್ಗೆ ದೇವರ ಅಭಿಷೇಕಕ್ಕೆ ಬೇಕಾಗುವ ನೀರು ಮತ್ತೆ ಸಂಗ್ರಹವಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಅರ್ಚಕರು. ಒಟ್ಟಿನಲ್ಲಿ ಸುಡು ಬಿಸಿಲಿದ್ದರೂ ಕೂಡ ಎತ್ತರದ ಬಂಡೆಯ ಮೇಲಿರುವ ಬಾವಿಯಲ್ಲಿ ವರ್ಷ ಪೂರ್ತಿ ಒಂದೇ ಮಟ್ಟದಲ್ಲಿ ನೀರು ಇರುವುದು ವಿಶೇಷವಾಗಿದೆ.

Gayathri SG

Recent Posts

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

7 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

7 hours ago

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

7 hours ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

7 hours ago

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

8 hours ago

ಪಾದಯಾತ್ರೆ ನಡೆಸಿ ಮತಯಾಚಿಸಿದ ಶಾಸಕ ಅಶೋಕ್ ಮನಗೂಳಿ

ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.

8 hours ago