Categories: ಮಂಗಳೂರು

‌ನ್ಯೂಸ್ ಕರ್ನಾಟಕ ಏರ್ಪಡಿಸಿದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಚಿನ್ನರ ಅರ್ಥ ಪೂರ್ಣ ಕಲ್ಪನೆಯ ಅನಾವರಣ

ಮಂಗಳೂರು: ನ್ಯೂಸ್ ಕರ್ನಾಟಕ, ಫಿಝ್ಹಾ ಬೈ ನೆಕ್ಸಸ್ ಮಾಲ್ ಹಾಗೂ ಮೆಡಿಕ್ವೆಸ್ಟ್ ಸಹಯೋಗದಲ್ಲಿ ಗಣರಾಜೊತ್ಸವದ ಅಂಗವಾಗಿ ಎರಡು ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜ. 26 ರ ಇಂದು ಮಧ್ಯಾಹ್ನ 3 ಗಂಟೆಗೆ ಫಿಝ್ಹಾ ಬೈ ನೆಕ್ಸಸ್ ಮಂಗಳೂರು ಇಲ್ಲಿ “ಮೈ ವರ್ಲ್ಡ್‌ ಶೀರ್ಷಿಕೆ ಕುರಿತು” ಸೇವ್‌ ಗರ್ಲ್‌ ಚೈಲ್ಡ್‌ ಎಂಬ ವಿಷಯದ ಮೇಲೆ ಡ್ರಾಯಿಂಗ್‌ ಸ್ಫರ್ಧೆ ಹಾಗು “ಮೈ ನೇಷನ್‌ ಕುರಿತು ದೇಶ ಭಕ್ತಿಗೀತೆ ಹಾಡುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

 

“ಮೈ ವರ್ಲ್ಡ್‌ ಶೀರ್ಷಿಕೆ ಕುರಿತು” ಸೇವ್‌ ಗರ್ಲ್‌ ಚೈಲ್ಡ್‌ ಎಂಬ ವಿಷಯದ ಮೇಲೆ ನಡೆದ ಡ್ರಾಯಿಂಗ್‌ “ಎ” ವಿಭಾಗದಲ್ಲಿ ಪ್ರಥಮ ಬಹುಮಾನ ತನಿಷ್ಕಾ ಪಿ ಕೋಟ್ಯಾನ್.‌, ಎರಡನೇ ಬಹುಮಾನ ಮೋಕ್ಷಿತಾ ಎ.ಬಿ., ತೃತೀಯ ಬಹುಮಾನ ಕೃತಿ ಸಾಲ್ಯನ್‌ ಹಾಗು ಚತುರ್ಥ ಬಹುಮಾನವನ್ನು ತೃಪ್ತಿ ಪಡೆದುಕೊಂಡಿದ್ದಾರೆ. ಇನ್ನು “ಬಿ” ವಿಭಾಗದಲ್ಲಿ ನಡೆದ ಡ್ರಾಯಿಂಗ್‌ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮನ್ವಿತ್‌ ಕೆ. ಎಲ್‌., ದ್ವಿತೀಯ ಬಹುಮಾನವನ್ನು ನಿಹಾರ್‌ ಜೆ ಎಸ್.‌, ಮೂರನೇ ಬಹುಮಾನ ಕೃತಿ ಎಸ್‌ ಎ., ಚತುರ್ಥ ಬಹುಮಾನ ನಿಧೀಶ್‌ ಪಡೆದುಕೊಂಡಿದ್ದಾರೆ.

ಇನ್ನು “ಸಿ” ವಿಭಾಗದಲ್ಲಿ ಪ್ರಥಮ ಬಹುಮಾನ ಅಕ್ಷಯ್‌ ಜೆ ಪಡೆದುಕೊಂಡರೆ, ದ್ವೀತಿಯ ಬಹುಮಾನ ಜ್ಯೋತಿಕಾ ಪಡೆದುಕೊಂಡರೆ, ತೃತೀಯ ಬಹುಮಾನ ರಿತೀಷ ಕೆಜೆ ಹಾಗು ನಾಲ್ಕನೇ ಬಹುಮಾನ ಹೆಚ್‌ ಶರಣ್ಯಾ ಕಾಮತ್‌ ಪಡೆದುಕೊಂಡಿದ್ದಾರೆ.

ಇನ್ನು ಎಲ್‌ ಕೆಜಿ ಯಿಂದ 1ನೇ ತರಗತಿಗೆ ನಡೆದ ದೇಶ ಭಕ್ತಿ ಸ್ಪರ್ಧೆಯ “1”ನೇ ವಿಭಾಗದಲ್ಲಿ ಪ್ರಥಮ ಬಹುಮಾನ ಚಿರಾಂತ್‌ ವೈ ದೇವಾಡಿಗ., ದ್ವಿತೀಯ ಬಹುಮಾನ ಅನಘ ಎಸ್‌ ಕೆ., ಮೂರನೇ ಬಹುಮಾನ ತ್ರಿಷಿಕಾ ಹಾಗೂ ನಾಲ್ಕನೇ ಬಹುಮಾನ ವಿಹಾನ್‌ ಪಡೆದುಕೊಂಡಿದ್ದಾರೆ.

“2”ನೇ ವಿಭಾಗದಲ್ಲಿ ಪ್ರಥಮ ಬಹುಮಾನ ದೃಷ್ಠಿ ವಿ.ಕೆ. ದ್ವಿತೀಯ ಬಹುಮಾನ ಕೃತಿ., ತೃತೀಯ ಬಹುಮಾನ ದಿಯಾನ್‌ ಕೊಟ್ಯಾನ್.‌, ಚತುರ್ಥ ಬಹುಮಾನ ಸಿದಿಕ್ಷಾ ಪಡೆದುಕೊಂಡಿದ್ದಾರೆ.

ಇನ್ನು 3ನೇ ವಿಭಾಗದಲ್ಲಿ ಪ್ರಥಮ ಬಹುಮಾನ ಸಮಾರ್ಥ್‌ ಶೆಟ್ಟಿ ಪಡೆದುಕೊಂಡರೆ, ದ್ವಿತೀಯ ಬಹುಮಾನ ಮೇಘಾನ ವಿ ರಾವ್‌, ತೃತೀಯ ಬಹುಮಾನ ವಸುಂದರ ಹಾಗು ನಾಲ್ಕನೇ ಬಹುಮಾನ ವೈದೇಹಿ ಪಡೆದುಕೊಂಡಿದ್ದಾರೆ.

 

ಇನ್ನು ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣೆಯನ್ನು ಫಿಝ್ಹಾ ಬೈ ನೆಕ್ಸಸ್ ನ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿರುವ ಶ್ರೀನಿಧಿ., ಕಾರ್ಯಕ್ರಮದ ಶೀರ್ಷಿಕೆ ಪ್ರಾಯೋಜಕತ್ವರಾದ ಮೆಡಿಕ್ವೆಸ್ಟ್‌ ಹೆಲ್ತ್‌ ಕೇರ್‌ ಇದರ ಮ್ಯಾನೇಜರ್‌ ಡೈರಕ್ಟರ್ ರೀನಾ ಟಿ.ಬಿ.‌, ಪಾಟ್ನರ್‌ ಆಗಿ ರಾಘವೇಂದ್ರ ಗಂಗೂಳ್ಳಿ ಅವರು ನಡೆಸಿಕೊಟ್ಟರು.

ಈ ವಿಶೇಷ ಕಾರ್ಯಕ್ರಮದಲ್ಲಿ ಡ್ರಾಯಿಂಗ್‌ ಸ್ಪರ್ಧೆಯ ನಿರ್ಣಾಯಕರಾಗಿ ಆಗಿ ಕಲಾವಿದ ಅನುದೀಪ್‌ ಕರ್ಕೆರ, ದೇಶಭಕ್ತಿ ಸ್ಪರ್ಧೆಯ ನಿರ್ಣಾಯಕರಾಗಿ ಮೋಹನ್‌ ಪ್ರಸಾದ್‌ ನಂತೂರು,ಕೆ. ವೀಣಾ ರಾವ್ ಅವರು ಸಹಕರಿಸಿದರು.

ನ್ಯೂಸ್‌ ಕರ್ನಾಟಕದ ಆಪರೇಷನ್ ಮ್ಯಾನೇಜರ್ ಹರ್ಷಿತ್‌ ಹೊಳ್ಳ, ಮಾರ್ಕೆಟಿಂಗ್‌ ಮ್ಯಾನೇಜರ್ ಮೊಹಮ್ಮದ್‌ ಚಮಾಡಿಯಾ, ಮಾರ್ಕೆಟಿಂಗ್‌ ಆಂಡ್ ಬ್ರಾಂಡ್ ಅವೇರ್ನೆಸ್ ಆಫೀಸರ್ ಪ್ರತಿಮಾ ಪವಾರ್‌ ಇದ್ದರು. ಕುಮಾರ್ ವಿಟ್ಲ ಕಾರ್ಯಕ್ರಮ ನಿರೂಪಣೆ ಮಾಡಿದರು.

Ashika S

Recent Posts

ವೇಣುಗೋಪಾಲಸ್ವಾಮಿ ದೇಗುಲ ಬಳಿ ಅಡ್ಡಾಡುತ್ತಿರುವ ಒಂಟಿ ಗಜ

ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…

3 mins ago

ಕಾಡಾನೆಯಿಂದ ಬೆಳೆ ನಾಶ: ಮನನೊಂದು ರೈತ ಆತ್ಮಹತ್ಯೆ

ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.

4 mins ago

ಬಂಡೀಪುರ ಪ್ರವೇಶದ್ವಾರದ ಬಳಿ ಕೆಟ್ಟು ನಿಂತ ಲಾರಿ: ಸಂಚಾರಕ್ಕೆ ಅಡ್ಡಿ

ಬಂಡೀಪುರ ಪ್ರವೇಶದ್ವಾರದ ಬಳಿ ಭಾರಿ ವಾಹನ ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಿಲೋಮೀಟರ್ ಗಟ್ಟಲೆ…

19 mins ago

ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಬೆಟ್ಟದ ತಪ್ಪಲಿನಲ್ಲೇ ನಿಂತ ಭಕ್ತರು

ವಾರಾಂತ್ಯದ ರಜೆ ಹಿನ್ನೆಲೆ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಹಸ್ರಾರು ಮಂದಿ ಪ್ರವಾಸಿಗರು ಹಾಗೂ ಭಕ್ತಗಣ ಆಗಮಿಸಿದ್ದರು…

22 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ…

47 mins ago

ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿಯ ದುರಂತ ಅಂತ್ಯ

ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ…

58 mins ago