News Karnataka Kannada
Wednesday, April 17 2024
Cricket
ಮಂಗಳೂರು

ಕಡಬ: ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಗೆ ಬಂದ ಕುದುರೆ

horse came to the police station
Photo Credit : News Kannada

ಕಡಬ: ಹಲವಾರು ಮುಖ್ಯ ರಸ್ತೆಯುದ್ದಕ್ಕೂ ಅಲೆದಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಕುದುರೆಯೊಂದನ್ನು ಯುವಕನೊರ್ವ ಕಟ್ಟಿ ಹಾಕಿ ಠಾಣೆಗೆ ದೂರು ನೀಡಿದ್ದು,ಕೊನೆಗೆ ಕುದುರೆ ಯಜಮಾನ ಕುದುರೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಟ್ಟು ಕುದುರೆಯೊಂದಿಗೆ ಹೊರಟುಹೋದ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯ ವ್ಯಕ್ತಿ ಯೊಬ್ಬರಿಗೆ ಸೇರಿರುವ ಈ ಮೂಕಪ್ರಾಣಿ ಆತನ ಅಸಡ್ಡೆಯಿಂದ ಹಲವು ದಿನಗಳಿಂದ ಪ್ರಮುಖ ರಸ್ತೆಯಲ್ಲೇ ತಿರುಗಾಡುತ್ತಿತ್ತು. ಆಹಾರ ಅರಸುತ್ತಾ ಕುದುರೆ ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಬೈಕ್ ಸವಾರರೂ ಅಪಘಾತಕ್ಕೆ ಒಳಗಾದ ಘಟನೆಗಳೂ ನಡೆದಿತು.  ರಸ್ತೆ ಬದಿಯಲ್ಲಿ ತೊಂದರೆ ಕೊಡುತ್ತಿದ್ದ ಈ ಕುದುರೆಯನ್ನು ವಾಹನ ಸವಾರರೊಬ್ಬರು ಬದಿಗೆ ಓಡಿಸಿದ್ದು ಈ ವೇಳೆ ಕುದುರೆ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಎಂಬವರಿಗೆ ಸೇರಿದ ಕೃಷಿ ತೊಟ್ಟದತ್ತ ಬಂದು ತಾನು ಹೈನುಗಾರಿಕೆ ಸಲುವಾಗಿ ನೆಟ್ಟ ಹಸಿರು ಹುಲ್ಲನ್ನು ನಾಶಪಡಿಸಿದಲ್ಲದೆ ಇಲ್ಲಿನ ಪೈಪ್‌ಗೂ ಹಾನಿ ಮಾಡಿತ್ತು.

ಕುದುರೆ ಇನ್ನಷ್ಟು ಸಾರ್ವಜನಿಕರಿಗೆ ಉಪಟಳ ಕೊಡಬಹುದೆಂದು ರಾಘವ ಅವರು ಕುದುರೆಯ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೂ ಆತ ಉಡಾಫೆ ಉತ್ತರ ನೀಡಲು ಆರಂಭಿಸಿದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುದುರೆಯನ್ನು ಗದ್ದೆಯಲ್ಲಿನ ತೆಂಗಿನ ಮರವೊಂದಕ್ಕೆ ಕಟ್ಟಿಹಾಕಿದ ರಾಘವ ಅವರು ಬಳಿಕ ಕಡಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಕುದುರೆಯ ವಾರಿಸುದಾರನ್ನು ಕುದುರೆಯೊಂದಿಗೆ ಠಾಣೆಗೆ ಕರೆಸಿ ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಂತೂ ತನ್ನ ಮಾಲೀಕರ ಅಸಡ್ಡೆಯಿಂದಾಗಿ ಮೂಕ ಪ್ರಾಣಿಯೊಂದು ಠಾಣೆಗೆ ಬರುವಂತಾಯಿತು.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ದಿನಂಪ್ರತಿ ಸಾಕು ಪ್ರಾಣಿಗಳಾದ ಆಡು, ದನ,ನಾಯಿಗಳು ಅಲೆದಾಡಿ ವಾಹನಗಳಿಗೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಇದಕ್ಕೆ ಈಗ ಕುದುರೆಯು ಸೇರ್ಪಡೆಯಾಗಿದೆ. ಸಾಕು ಪ್ರಾಣಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾರ್ವಜನಿಕರಿಗೆ ಪರೋಕ್ಷ ತೊಂದರೆ ಕೊಡುತ್ತಿರುವ ಇಂತಹ ಮಾಲಕರ ವಿರುದ್ದವೇ ಕ್ರಮ ಕೈಗೊಳ್ಳುವಂತೆ ರಾಘವ ಅವರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು