Categories: ಮಂಗಳೂರು

ತಲಪಾಡಿ, ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಉಳ್ಳಾಲ: ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಉಳ್ಳಾಲ ಪೊಲೀಸರು ದಾಳಿ ನಡೆಸಿರುವ ಘಟನೆ ತಲಪಾಡಿಯ ದೇವಿಪುರದಲ್ಲಿ ನಡೆದಿದ್ದು, ಕೋಳಿ ಸಹಿತ ಆಟಕ್ಕೆ ಪಣವಾಗಿಟ್ಟ ನಗದು ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ತಲಪಾಡಿ ಗ್ರಾಮದ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿರುವ ಖಾಲಿ ಸ್ಥಳದಲ್ಲಿ ದೇವಿಪುರದ ರವಿ ಹಾಗೂ ಇತರ ಜನರು ಗುಂಪು ಸೇರಿಕೊಂಡು ಹಣವನ್ನು ಪಣವಾಗಿಟ್ಟು ಆಟವಾಡುತ್ತಿರುವ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ. ಖಾಲಿ ಜಾಗದಲ್ಲಿ 3 ರಿಂದ 4 ಜನ ಸುತ್ತಲೂ ಗುಂಪಾಗಿ ಕೋಳಿ ಅಂಕದ ಜೂಜಾಟ ನಡೆಸುವಾಗ ದಾಳಿ ನಡೆದಿದೆ. ಹಲವು ಕೋಳಿ, ನಗದು ಹಾಗೂ ಇಬ್ಬರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಲಪಾಡಿ ದೇವಿಪುರ ದೇವಸ್ಥಾನದ ಬಳಿಯಲ್ಲಿ ಪತ್ತಣಾಜೆ ಬಳಿಕ ಮಳೆ ಬರುವ ತನಕ ಸಾಂಪ್ರದಾಯಿಕ ಕೋಳಿ ಅಂಕವು ಬಹಳ ಹಿಂದಿನಿಂದಲೂ ಗ್ರಾಮಸ್ಥರಿಂದ ನಡೆದು ಬರುತ್ತಿತ್ತು. ಇಲ್ಲಿ ಯಾವುದೇ ಜೂಜು ನಡೆಯ ಬಾರದು ಹಾಗೂ ಜಗಳ ಗಲಾಟೆ ನಡೆಯಬಾರದೆಂಬ ನಿಯಮವಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇದೇ ಸಾಂಪ್ರದಾಯಿಕ ಕೋಳಿ ಅಂಕವು ಲಕ್ಷಗಟ್ಟಲೆ ಜೂಜಿನ ಕೇಂದ್ರವಾಗಿದೆ. ಹಾಗೂ ಬೈಕಿನಿಂದ ಹಿಡಿದು ಐಷಾರಾಮಿ ಕಾರುಗಳು ನೂರಾರು ಸಂಖ್ಯೆಯಲ್ಲಿ ಕೇರಳ ಕರ್ನಾಟಕದ ಗಡಿ ಭಾಗಗಳಿಂದ ಸೇರಲು ಆರಂಭ ಆಗಿದೆ.

ಇತ್ತೀಚೆಗೆ ಮರಳು ಮಾಫಿಯಾ ಮತ್ತು ಇಸ್ಪೀಟ್ ದಂಧೆಗಳಿಗೆ ಕಡಿವಾಣ ಬಿದ್ದು ಇಂತಹ ಅವ್ಯವಹಾರ ಮಾಡುವವರ ವಹಿವಾಟುಗಳು ನಿಂತಾಗ ಇದೇ ಸಾಂಪ್ರದಾಯಿಕ ಕೋಳಿ ಅಂಕಗಳು ಜೂಜಿನ ಕೇಂದ್ರವಾಗಿ ಮಾರ್ಪಟ್ಟು ದೇವರ ಸಾಪ್ರದಾಯಿಕ ಕೋಳಿ ಅಂಕಗಳು ಪೊಲೀಸ್ ದಾಳಿಗಳಿಂದ ನಿಂತು ಹೋಗಿ ಸಮಾಜಕ್ಕೆ ಕಂಟಕ ಆಗುವ ಭೀತಿಯಲ್ಲಿ ಜನರಿದ್ದಾರೆ. ಇನ್ನಾದರೂ ಜೂಜು ಜುಗಾರಿ ಇಲ್ಲದ ಸಾಂಪ್ರದಾಯಿಕ ಕೋಳಿ ಅಂಕಗಳು ನಡೆಯಲಿ ಎಳಂಬ ಅಭಿಪ್ರಾಯವನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ.

Sneha Gowda

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

6 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

6 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

6 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

7 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

7 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

7 hours ago