ಸುರತ್ಕಲ್: ಕಳೆದ ವಾರ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ.
ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಜುಲೈ 28ರ ರಾತ್ರಿ ಫಾಝಿಲ್ ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದ ಪೊಲೀಸರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, “ಫಾಝಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ. ಅವರು ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ” ಎಂದಿದ್ದಾರೆ.
ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡದಿದ್ದ ಪೊಲೀಸರು, ಇಂದು ಬೆಳಗ್ಗೆ ಪಣಂಬೂರು ಎಸಿಪಿ ಕಚೇರಿಯಲ್ಲಿ ಕಮಿಷನರ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಿದ್ದರು.
ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಟಿ:
ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ. ಪ್ರಕರಣ ನಡೆದ ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ.ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು. ಫಾಜಿಲ್ ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ.
ಫಾಝಿಲ್ ಹತ್ಯೆ ಪ್ರಕರಣದ ಆರು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ. ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್( 29), ಮೋಹನ್(23) ಮತ್ತು ಗಿರೀಶ್(27) ಬಂಧಿತರು.
ಅಜಿತ್ ಕ್ರಾಸ್ತಾ ಎಂಬರಿಗೆ ಸೇರಿದ ಇಯಾನ್ ಕಾರು ಮತ್ತು ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ. ಅಜಿತ್ ಗೆ ಘಟನೆ ಬಗ್ಗೆ ಗೊತ್ತಿದ್ದರೂ ಅವರಿಗೆ ಕಾರು ಕೊಟ್ಟಿದ್ದಾರೆ. ಮೂರು ದಿನಕ್ಕೆ 15 ಸಾವಿರ ಕೊಡೋ ಭರವಸೆ ಕೊಟ್ಟಿದ್ದರು. ಅಜಿತ್ ಹಣದ ಆಸೆಗೆ ಕಾರು ಗುರುತು ಮರೆಮಾಚಲು ಹೇಳಿ ಕಾರು ಕೊಟ್ಟಿದ್ದಾರೆ ಎಂದರು.
ನಗರದ ಹೊರವಲಯದ ಗುರುಪುರ ಕೈಕಂಬದಲ್ಲಿ ನಿರ್ಮಾಣ ಆಗಲಿರುವ ಮೆಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು .ಕಾಮಗಾರಿ ವಿರುದ್ಧದ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ…
ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಸಾಂಗೋಲಾ- ಜತ್ತ ಮಾರ್ಗದ ಬಳಿ…
ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…
ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…
ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…
ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.