Categories: ಮಂಗಳೂರು

ಸುರತ್ಕಲ್: ಪ್ರಜಾಧ್ವನಿ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದ ಇನಾಯತ್ ಅಲಿ ಮೂಲ್ಕಿ

ಸುರತ್ಕಲ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ತೆರಳುವ ದಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಎನ್ ಐಟಿಕೆ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಮೂಲ್ಕಿ ಅವರು ಭವ್ಯವಾಗಿ ಸ್ವಾಗತ ಕೋರಿದರು.

ಉಡುಪಿಯಿಂದ ಸಾಗಿಬಂದ ಪ್ರಜಾಧ್ವನಿ ಯಾತ್ರೆಯನ್ನು ಎನ್ ಐಟಿಕೆ ಬಳಿ ಕಾಂಗ್ರೆಸ್ ಮುಖಂಡರು, ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸಿದ್ದ ಎರಡು ಜೆಸಿಬಿಯಿಂದ ಯಾತ್ರೆಯ ವಾಹನದ ಮೇಲೆ ಹೂವಿನ ಮಳೆ ಸುರಿಸಲಾಯಿತು.

ಇನಾಯತ್ ಅಲಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿ ಜಯಕಾರ ಹಾಕಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರತ್ತ ಕೈಬೀಸಿ ಮುಂದಕ್ಕೆ ಚಲಿಸಿದರು. ನೂರಾರು ಬೈಕ್, ಕಾರ್ ಗಳಲ್ಲಿ ಇನಾಯತ್ ಅಲಿ ಬೆಂಬಲಿಗರು ಪಕ್ಷದ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಎಸಿಪಿ ಮಹೇಶ್ ಪ್ರಸಾದ್, ಸುರತ್ಕಲ್ ಎಸ್ ಐ ಪುನೀತ್ ಗಾಂವ್ಕರ್ ಬಂದೋಬಸ್ತ್ ಏರ್ಪಡಿಸಿದ್ದರು.

Ashika S

Recent Posts

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

9 seconds ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

7 mins ago

ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಂಪ್ಯದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ…

17 mins ago

100ರ ಮುಖ ಬೆಲೆಯ ಹಳೆ ಮಾದರಿ ನೋಟು ರದ್ದಾಗದಿದ್ದರೂ ಚಲಾವಣೆಗೆ ಹಿಂದೇಟು

ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10…

26 mins ago

ಇಂದಿನ ಆರ್​​​ಸಿಬಿ, ಪಂಜಾಬ್​​ ನಡುವಿನ ಐಪಿಎಲ್​​ ಪಂದ್ಯ ರದ್ದು?

ಕಳೆದ ಮೂರು ದಿನಗಳಿಂದ ಇಡೀ ದೇಶಾದ್ಯಂತ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲೂ ಗುಡುಗು ಸಮೇತ ಮಳೆ ಸುರಿಯುತ್ತಿದೆ. ಇಷ್ಟೇ ಅಲ್ಲ…

27 mins ago

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

40 mins ago