News Karnataka Kannada
Tuesday, April 16 2024
Cricket
ಮಂಗಳೂರು

ಸುಳ್ಯ: ಭಾರೀ ಮಳೆ, ಜಯನಗರದಲ್ಲಿ ಕಾಂಪೌಂಡ್ ಕುಸಿದು‌ ಹಾನಿ

Sullia: Heavy rains, compound collapses in Jayanagar, damages
Photo Credit : News Kannada

ಸುಳ್ಯ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ಸುಳ್ಯದ ಜಯನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಎರಡು ಮನೆಗಳ ಕಾಂಪೌಂಡ್ ಕುಸಿದು ಮನೆಯೊಂದರ ಛಾವಣಿಗೆ ಹಾನಿಯಾದ ಘಟನೆ ವರದಿಯಾಗಿದೆ.

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ದಾಮೋದರ ಪಡಂಬೈಲು ಎಂಬವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ ಸುತ್ತಲೂ ಕಾಂಪೌಂಡ್ ರಚಿಸಿದ್ದು ಅದು ಕುಸಿದು ಬಿದ್ದಿದೆ.

ಅಲ್ಲೇ ಸಮೀಪದ ರುಖಿಯಾ ಎಂಬುವರ ಮನೆಯ ಕಾಂಪೌಂಡ್ ಜನಾರ್ದನ ಗೌಡ ಎಂಬವರ ಮನೆಯ ಮೇಲೆ ಕುಸಿದಿದ್ದು, ಸುಮಾರು ಹತ್ತಕ್ಕೂ ಹೆಚ್ಚು ಸಿಮಂಟ್ ಶೀಟುಗಳು ಹಾನಿಯಾಗಿದೆ.‌

ಸ್ಥಳಕ್ಕೆ ಗ್ರಾಮಾಧಿಕಾರಿ ತಿಪ್ಪೇಶ್, ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು