Categories: ಮಂಗಳೂರು

ಕರಾವಳಿಯಿಂದ ವಿಧಾನಭೆಗೆ ಆರು ಮಂದಿ ಹೊಸಬರು

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಯ್ಕೆಯಾಗಿರುವ 13 ಜನಪ್ರತಿನಿಧಿಗಳಲ್ಲಿ ಆರು ಮಂದಿ ಹೊಸಬರು ಎಂಬುದು ಆಸಕ್ತಿಯ ಸಂಗತಿ.

ಉಡುಪಿ ಕ್ಷೇತ್ರದಿಂದ ಯಶ್‌ಪಾಲ್‌ ಎ. ಸುವರ್ಣ, ಕಾಪುವಿನಿಂದ ಗುರ್ಮೆ ಸುರೇಶ್‌ ಶೆಟ್ಟಿ, ಬೈಂದೂರಿನಿಂದ ಗುರುರಾಜ ಗಂಟಿಹೊಳೆ, ಕುಂದಾಪುರದಿಂದ ಕಿರಣ್‌ ಕೊಡ್ಗಿ, ಸುಳ್ಯದಿಂದ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರಿನಿಂದ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಶಾಸಕರಾಗಿ ವಿಧಾನಸೌಧ ಪ್ರವೇಶಿಸಲಿದ್ದಾರೆ.

ಕಿರಣ್‌ ಕೊಡ್ಗಿಯವರ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಶ್‌ಪಾಲ್‌ ಸುವರ್ಣ ಅವರ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಕೆ.ರಘುಪತಿ ಭಟ್‌ ಹಾಗೂ ಗುರ್ಮೆ ಸುರೇಶ್‌ ಶೆಟ್ಟಿ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಲಾಲಾಜಿ ಮೆಂಡನ್‌ ಅವರ ಶ್ರಮವೂ ಇದೆ. ಆದರೆ, ಗುರುರಾಜ ಗಂಟಿಹೊಳೆಯವರಿಗೆ ನಿರ್ಗಮಿತ ಶಾಸಕರ ಬೆಂಬಲ ಸಿಗದೇ ಇದ್ದರೂ ಕಾರ್ಯಕರ್ತರು, ಪರಿವಾರ ಸಂಘಟನೆಗಳ ಪ್ರಮುಖರು ಕೈಬಿಡಲಿಲ್ಲ.

ಯಶ್‌ಪಾಲ್‌ ಸುವರ್ಣ ಉಡುಪಿಯಿಂದ ಆಯ್ಕೆಯಾಗಿರುವ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಅವರು ಈ ಹಿಂದೆ ಉಡುಪಿ ನಗರಸಭೆಯೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಉಳಿದ ಮೂವರು ಜನಪ್ರತಿನಿಧಿಗಳಾಗಿರಲಿಲ್ಲ, ಪಕ್ಷದಲ್ಲಿ ಸಕ್ರಿಯರಾಗಿದ್ದರು.

ಕಿರಣ್‌ ಕೊಡ್ಗಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾಗಿದ್ದ ಕಿರಣ್‌ ಕೊಡ್ಗಿಯವರ ತಂದೆ ಎ.ಜಿ. ಕೊಡ್ಗಿಯವರು ಶಾಸಕರಾಗಿದ್ದರು.

ಗುರುರಾಜ ಗಂಟಿಹೊಳೆ ಗುರುರಾಜ ಗಂಟಿಹೊಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣವಧಿ ಪ್ರಚಾರಕರಾಗಿ 10 ವರ್ಷ ಸೇವೆ ಸಲ್ಲಿಸಿ, ಅನಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುರೇಶ್‌ ಶೆಟ್ಟಿ ಸಮಾಜ ಸೇವಕರಾಗಿರುವ ಗುರ್ಮೆ ಸುರೇಶ್‌ ಶೆಟ್ಟಿಯವರು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾಗೀರಥಿ ಮುರುಳ್ಯ ಮೀಸಲು ಕ್ಷೇತ್ರ ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯಅವರು ಜಿ.ಪಂ. ಮಾಜಿ ಸದಸ್ಯೆ. ಪ್ರಥಮ ಬಾರಿಗೆ ಬಿಜೆಪಿಯಿಂದ ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದವರು. ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಹೈನುಗಾರಿಕೆ, ಟೈಲರಿಂಗ್‌ ವೃತ್ತಿಯನ್ನೂ ನಿರ್ವಹಿಸುತ್ತಿದ್ದಾರೆ.

ಅಶೋಕ್‌ ಕುಮಾರ್‌ ರೈ ಪುತ್ತೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು ಪುತ್ತೂರು ರೈ ಎಸ್ಟೇಟ್ಸ್‌ ಎಜುಕೇಶನ್‌ ಹಾಗೂ ಚಾರಿಟೆಬಲ್‌ ಟ್ರಸ್ಟ್‌ ಮುಖ್ಯಸ್ಥರು. ಟ್ರಸ್ಟ್‌ ಮೂಲಕ ಹತ್ತಾರು ಜನಪರ ಕಾರ್ಯ ನಡೆಸುತ್ತಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು.

Gayathri SG

Recent Posts

ಗುರು ಗ್ರಂಥ ಸಾಹೀಬ್​ ಪುಟಗಳನ್ನು ಹರಿದ ಯುವಕ : ಹೊಡೆದು ಕೊಂದ ಸ್ಥಳೀಯರು

ಪಂಜಾಬ್‌ನ ಗುರುದ್ವಾರವೊಂದರಲ್ಲಿ ಪೂಜ್ಯ ಗುರು ಗ್ರಂಥ ಸಾಹಿಬ್‌ನ ಪುಟಗಳನ್ನು ಹರಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಹೊಡೆದು ಹತ್ಯೆ…

18 seconds ago

ದುಷ್ಕರ್ಮಿಗಳಿಂದ ನಡುರಸ್ತೆಯಲ್ಲಿಯೇ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ

ನಡುರಸ್ತೆಯಲ್ಲಿಯೇ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ.

2 mins ago

ಬಿಜೆಪಿಗೆ ಮತ ಹಾಕ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಕ್ತಿಗೆ ಥಳಿತ

ಕಾಂಗ್ರೆಸ್​ಗೆ ಮತ ಹಾಕಲ್ಲ, ನಾವು ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ…

22 mins ago

ಆನ್‌ಲೈನ್ ಮತದಾನ ಮಾಡಿದ್ದೇನೆ ಎಂದ ತಮಿಳಿ ನಟಿ ಜ್ಯೋತಿಕಾ

ತಮಿಳಿನ ನಟಿ ಜ್ಯೋತಿಕಾ ರಾಜ್‌ಕುಮಾರ್ ರಾವ್ ಸಂದರ್ಶನವೊಂದರಲ್ಲಿ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ…

33 mins ago

ಯುನಿಸೆಫ್ ಇಂಡಿಯಾʼಗೆ ಕರೀನಾ ಕಪೂರ್ ರಾಯಭಾರಿ

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್‌ ಜತೆ ನಟು ಹೊಂದಿ, ಅದರ…

43 mins ago

ಶಂಕರ್‌ನಾಗ್ ಹೆಸರಿನಲ್ಲಿ ಮಹತ್ವದ ಘೋಷಣೆ ಮಾಡಲಿದೆ ಕರ್ನಾಟಕ ಸರ್ಕಾರ

ನಟ, ನಿರ್ದೇಶಕ ಶಂಕರ್ ನಾಗ್ ನಮ್ಮನ್ನು ಅಗಲಿ ದಶಕಗಳೇ ಕಳೆದರೂ ಕೂಡ ಅವರ ನೆನಪು ಸದಾ ಕನ್ನಡಿಗರ ಮನದಲ್ಲಿ ಹಸಿರಾಗಿರುತ್ತದೆ.…

47 mins ago