News Karnataka Kannada
Saturday, April 13 2024
Cricket
ಮಂಗಳೂರು

ಹಿಂದು ವಿರೋಧಿ ನೀತಿ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ: ಸಂತರ ನಿರ್ಣಯ

Saints decide to go on hunger strike if anti-Hindu policy is not abandoned
Photo Credit : News Kannada

ಮಂಗಳೂರು: ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆಯ ವಿರುದ್ದ ಮಂಗಳೂರಿನಲ್ಲಿ ಸ್ವಾಮೀಜಿಗಳ ಧರ್ಮ ಸಭೆ ನಡೆಯಿತು. ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈ ಬಿಡದಿದ್ದರೆ ಸಂತರಿಂದ ಉಪವಾಸ ಸತ್ಯಾಗ್ರಹ ಮಂಗಳೂರು ಧರ್ಮ ಸಭೆಯಲ್ಲಿ ಕರಾವಳಿಯ ಸಂತ ಸಮೂಹದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇದೇವೇಳೆ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಾಸ್ ನಿರ್ಧಾರ ಕೈ ಬಿಡಲು‌ ಸ್ವಾಮೀಜಿಗಳು ಆಗ್ರಹಿಸಿದರು.

ಸುದೀರ್ಘ ಸಭೆಯ ಬಳಿಕ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿದರು. ಗುರುಪುರ ವಜ್ರದೇಹಿ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕೇಮಾರು ಸೇರಿ ಹಲವು ಸಂತರು ಭಾಗಿಯಾಗಿದ್ದರು. ಅಲ್ಲದೆ ವಿಎಚ್‌ಪಿ ಮತ್ತು ಬಜರಂಗದಳ ಹಾಗೂ ಆರ್.ಎಸ್.ಎಸ್ ಪ್ರಮುಖರು ಭಾಗಿಯಾಗಿದ್ದರು. ಸುದ್ದಿಗೋಷ್ಟಿ ಉದ್ದೇಶಿಸಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಸ್ವಾಮೀಜಿ ಮಾತನಾಡಿದರು. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು ಎಂದು ಸರ್ಕಾರಕ್ಕೆ ಮನವಿ ನೀಡಲು ನಿರ್ಧಾರ ಕೈಗೊಳ್ಳಲಾಯಿತು.

ವಾಪಸ್ ಪಡೆದರೆ ಸಮಾಜದಲ್ಲಿ ಸಂಘರ್ಷ ಆಗಬಹುದು. ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿ ನಿರ್ಧಾರ ಖಂಡನೀಯ ಎಂದು ಸಂತರು ಹೇಳಿದರು. ಗೋ ಹತ್ಯೆ‌ ನಿಷೇಧ ರದ್ದು ಮಾಡಿದರೆ ಗೋ ಸಂತತಿ ನಾಶವಾಗಲಿದೆ. ಈ ನಿರ್ಣಯ ಹಿಂದೂ ವಿರೋಧಿ ನಿರ್ಣಯ, ಇದರ ವಿರುದ್ದ ಹೋರಾಟಕ್ಕೆ ಸಿದ್ಧ. ನಿರ್ಧಾರ ವಾಪಸ್ ಪಡೆಯದೇ ಇದ್ದರೆ ಹೋರಾಟ ನಡೆಸುವುದಾಗಿ ತಿಳಿಸಿದರು. ಹೋರಾಟಕ್ಕೂ ಬಗ್ಗದೆ ಹೋದರೆ ಸಂತ ಸಮೂಹ ಉಪವಾಸ ಸತ್ಯಾಗ್ರಹ ಮಾಡಲಿದೆ ಎಂದು ತಿಳಿಸಿದರು. ಸಂತರು ಉಪವಾಸ ಕುಳಿತರೆ ಹಿಂದೂ ಸಮಾಜ ಎದ್ದೇಳಲಿದೆ. ಅದಕ್ಕೆ ಸರ್ಕಾರ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಧಾರ ವಾಪಸ್ ಪಡೆಯಲಿ ಎಂದರು.

ರಾಜ್ಯದ ಶಾಂತಿ ಐಕ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ಹಿಂದೂ ಯುವಕರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಯುವಕರನ್ನು ಗಡಿಪಾರು ಮಾಡುವ ಕೆಲಸಗಳು ನಡೆಯುತ್ತಿದೆ. ಹೀಗಾಗಿ ನಮ್ಮ ಸಂತ ಸಮುದಾಯ ತೀವ್ರ ಹೋರಾಟದ ನಿರ್ಣಯಕ್ಕೆ ಬಂದಿದೆ ಎಂದು ಸ್ವಾಮೀಜಿಗಳು ತಿಳಿಸಿದರು. ಸಪ್ಟೆಂಬರ್ ಹತ್ತರ ಬಳಿಕ ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಕೆಗೆ ನಿರ್ಧರಿಸಲಾಗಿದ್ದು, ಆ ಬಳಿಕ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ಭೇಟಿಗೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು