News Karnataka Kannada
Monday, April 22 2024
Cricket
ಮಂಗಳೂರು

ಪಿಂಚಣಿ ದಾಖಲೆ ನೀಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಶಾಲಾ ಮಾಲೀಕರು ಲೋಕಾಯುಕ್ತ ಬಲೆಗೆ

Rs 5 lakh for issuing pension documents. Lokayukta nabs school owner for demanding bribe
Photo Credit : News Kannada

ಮಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ನಡೆದು ಭ್ರಷ್ಟಾಚಾರದ ಹಣದಿಂದ ಬಂಗಲೆ ನಿರ್ಮಿಸಿ, ಕಪ್ಪು ಹಣದ ಕೋಟಿ ಕೋಟಿ ಕುಳಗಳನ್ನು ಲೋಕಾಯುಕ್ತ ಅಧಿಕಾರಿಗಳು ಭೇಟೆಯಾಡಿದ್ದರು.

ಇದೀಗ ಶಾಲೆಯ ನಿವೃತ್ತ ಶಿಕ್ಷಕಿಯ ಪೆನ್ಷನ್‌ ಹಣಕ್ಕೆ ಅಗತ್ಯವಾಗಿರುವ ದಾಖಲೆ ನೀಡಲು ಶಾಲೆಯ ಮಾಲೀಕರು ಹಣ ಪಡೆಯುವ ವೇಳೆ ರೆಡ್‌ ಹ್ಯಾಂಡ್‌ ಅಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಿರಂಜನ ಸ್ವಾಮಿ ಸರ್ಕಾರಿ ಅನುದಾನಿತ ಶಾಲೆಯ ಮಾಲೀಕರಾದ ಜ್ಯೋತಿ ಅವರು ನಿವೃತ್ತ ಶಿಕ್ಷಕಿಯ ಪೆನ್ಷನ್‌ ಹಣ ಪಡೆಯಲು ಅಗತ್ಯ ದಾಖಲೆ ನೀಡಲು 5 ಲಕ್ಷ ರೂ.ಗಳಿಗೆ ಬೇಡಿಕೆ ಇರಿಸಿದ್ದರು.

ಶಿಕ್ಷಕಿ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದು, ಹಣ ಪಡೆಯುವ ವೇಳೆ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶಾಲಾ ಮಾಲೀಕರಾದ ಜ್ಯೋತಿ ಅವರನ್ನು ಲೋಕಾಯುಕ್ತ ವಶಕ್ಕೆ‌ ಪಡೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು