Categories: ಮಂಗಳೂರು

ಮಂಗಳೂರಿನಲ್ಲಿ ಮರುಬಳಕೆ ತ್ಯಾಜ್ಯ ಸಂಗ್ರಹ ಕೇಂದ್ರ: ಹಳೆ ಪುಸ್ತಕ, ಬಟ್ಟೆ ನೀಡಲು ಅವಕಾಶ

ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛ ಭಾರತ್‌ ಮಿಷನ್‌ ನಗರ 2.0 ಯೋಜನೆಯಡಿ ಆರಂಭಿಸಲಾಗಿರುವ ನನ್ನ ಲೈಫ್‌ ನನ್ನ ಸ್ವಚ್ಛ ನಗರ ಅಭಿಯಾನ ಕಾರ್ಯಕ್ರಮದಡಿ ರೀಯೂಸ್‌ (ಮರುಬಳಕೆ) ಮತ್ತು ರಿಸೈಕಲ್‌ (ಪುನರ್‌ ಬಳಕೆ) ರೆಡ್ಯೂಸ್‌ (ಕಡಿಮೆಗೊಳಿಸು) ಆರ್‌ ಆರ್‌ ಆರ್‌ ಕೇಂದ್ರವನ್ನು ಶನಿವಾರ ಲಾಲ್‌ ಭಾಗ್‌ ಮನಪಾ ಕಚೇರಿ ಆವರಣದಲ್ಲಿ ಉದ್ಘಾಟಿಸಲಾಯಿತು.

ಹಳೆಯ ಆಟಿಕೆಗಳನ್ನು ಕೇಂದ್ರಕ್ಕೆ ನೀಡುವ ಮೂಲಕ ಮೇಯರ್‌ ಜಯಾನಂದ ಅಂಚನ್‌ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಾರ್ವಜನಿಕರು ಅಭಿಯಾನದಡಿ ಬರುವ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಅಗತ್ಯವಿದ್ದವರಿಗೆ ಒದಗಿಸುವ ಮೂಲಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪಾಲಿಕೆ ಆಯುಕ್ತ ಚೆನ್ನಬಸಪ್ಪ ಕೆ. ಮಾತನಾಡಿ ಬಟ್ಟೆ, ಚಪ್ಪಲಿ, ದಿನಪತ್ರಿಕೆ ಕ್ಯಾರಿಬ್ಯಾಗ್‌, ಹಳೆಯ ಪುಸ್ತಕ ಸೇರಿದಂತೆ ವಿವಿಧ ವಸ್ತುಗಳನ್ನು ಕೇಂದ್ರಕ್ಕೆನೀಡಬಹುದು ಎಂದರು.

ಆಟಿಕೆಗಳನ್ನು ಅಂಗನವಾಡಿ ಕೇಂದ್ರಗಳಿಗೆ, ಪುಸ್ತಕಗಳನ್ನು ಲೈಬ್ರೆರಿಗಳಿಗೆ ಬಟ್ಟೆಗಳನ್ನು ಅಗತ್ಯವಿರುವವರಿಗೆ ನೀಡಲಾಗುವುದು ಎಂದರು.

ಜೂನ್‌ 5ರವರೆಗೆ ಕಾರ್ಯಾಚರಣೆ
ಪಾಲಿಕೆಯ ಲಾಲ್‌ಭಾಗ್‌ ಕೇಂದ್ರ ಕಚೇರಿ, ಸುರತ್ಕಲ್‌ ವಲಯ ಕಚೇರಿ, ಮಣ್ಣಗುಡ್ಡೆ ಕಚೇರಿ, ಕಾವೂರು ಮಾರುಕಟ್ಟೆ, ಹಂಪನಕಟ್ಟೆಯ ಕುದ್ಮುಲ್‌ ರಂಗರಾವ್‌ ಪುರಭವನ, ಸುರತ್ಕಲ್‌ ಮಾಧವ ನಗರದ ಒಣತ್ಯಾಜ್ಯ ಸಂಗ್ರಹ ಕೇಂದ್ರ, ಬಜಾಲ್‌ ಒಣತ್ಯಾಜ್ಯ ಸಂಗ್ರಹ ಕೇಂದ್ರ, ತಣ್ಣೀರು ಬಾವಿ ಬೀಚ್‌ನಲ್ಲಿ ಆರ್‌ ಆರ್‌ ಆರ್‌ ಕೇಂದ್ರ ತೆರೆಯಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಕೇಂದ್ರ ತೆರೆದಿರುತ್ತದೆ. ತ್ಯಾಜ್ಯ ಸಂಗ್ರಾಹಕರೂ ಮನೆ ಮನೆಗಳಿಂದ ಈ ವಸ್ತುಗಳನ್ನು ಸ್ವೀಕರಿಸಲಿದ್ದಾರೆ.

Sneha Gowda

Recent Posts

ಬೀದರ್‌ನಲ್ಲಿ ಪರಿಶಿಷ್ಟ ಮುಖಂಡ ಬಿಜೆಪಿ ಸೇರ್ಪಡೆ

ಔರಾದ್‌ ತಾಲ್ಲೂಕಿನ ವಡಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಜಾತಿಯ ಮುಖಂಡ ಬಾಬುರಾವ ಅಡಕೆ ಅವರು ನಗರದಲ್ಲಿ ಶನಿವಾರ ಬಿಜೆಪಿ…

5 mins ago

ಬೀದರ್‌ನಲ್ಲಿ ಸರಳ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 10ರಂದು ಸರಳ ಹಾಗೂ ಸಾಂಕೇತಿಕವಾಗಿ…

16 mins ago

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ

26 mins ago

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

39 mins ago

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

60 mins ago

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

1 hour ago