News Karnataka Kannada
Friday, April 12 2024
Cricket
ಮಂಗಳೂರು

ಪಿಲ್ಯ: ವಿದ್ಯುತ್ ತಂತಿ ಸ್ಪರ್ಶ, ಗಬ್ಬದ ದನ ಸಹಿತ ಮೂರು ದನಗಳು ಸ್ಥಳದಲ್ಲೇ ಸಾವು

Pilya: Electric shock
Photo Credit : News Kannada

ಬೆಳ್ತಂಗಡಿ: ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲ್ಯ ಸಮೀಪ ಗದ್ದೆಯಲ್ಲಿ ವಾಲಿ ನಿಂತ ವಿದ್ಯುತ್ ಕಂಬಗಳ ತಂತಿಗಳು ತಾಗಿ ಮೂರು ದನಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಪಿಲ್ಯದ ಲಾರೆನ್ಸ್ ಪಿರೇರಾ ಅವರಿಗೆ ಸೇರಿದ ದನಗಳು ಇದಾಗಿದ್ದು, ಗದ್ದೆಗೆ ದನಗಳನ್ನು ಮೇಯಲು ಬಿಟ್ಟಿದ್ದರು ಎನ್ನಲಾಗಿದೆ. ವಿಶಾಲವಾಗಿದ್ದ ಗದ್ದೆಯಲ್ಲಿ ನೀರು ತುಂಬಿದ್ದ ಕಾರಣ ತಂತಿಗಳು ಜೋತುಬಿದ್ದ ವಿಚಾರ ಲಾರೆನ್ಸ್ ಅವರ ಗಮನಕ್ಕೆ ಬಂದಿರಲಿಲ್ಲ. ದನಗಳು ಮೇಯುತ್ತ ವಾಲಿ ನಿಂತ ವಿದ್ಯುತ್ ಕಂಬಕ್ಕೆ ಜೋಡಿಸಿದ್ದ ತಂತಿಯನ್ನು ಸ್ಪರ್ಶಿಸಿ, 9ತಿಂಗಳು ತುಂಬಿರುವ ಗಬ್ಬದ ದನ ಹಾಗೂ ಎರಡು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ತಂತಿಗಳು ಜೋತುಬಿದ್ದು ಗದ್ದೆಯ ನೀರಿಗೆ ತಾಗಿತ್ತು. ದನಗಳು ತಂತಿಯ ಹತ್ತಿರ ಬಂದ ಕೂಡಲೇ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಂದಾಯ ಇಲಾಖೆಯವರು ಭೇಟಿ ನೀಡಿದ್ದು, ಸ್ಥಳೀಯ ಪಶು ವೈದ್ಯರು ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು