Categories: ಮಂಗಳೂರು

ಮಂಗಳೂರು: ಖಾಸಗಿ ಬಸ್ ಧಾವಾಂತಕ್ಕೆ ವ್ಯಕ್ತಿ ಬಲಿ

ಮಂಗಳೂರು: ಖಾಸಗಿ ಬಸ್‌ನ ಧಾವಂತಕ್ಕೆ ಪಾದಚಾರಿಯೊಬ್ಬರು ಬಸ್ ನಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ರಾವ್ ಆ್ಯಂಡ್ ರಾವ್ ಸರ್ಕಲ್‌ನಲ್ಲಿ ಸಂಭವಿಸಿದೆ.

ಕೊಣಾಜೆಯ ಹೂಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ 54 ಸಂಬರ್‌ನ ಖಾಸಗಿ ಬಸ್ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಿರುವು ಪಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದರು. ಆಗ ನೇರವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಮುಂದಿನ ಚಕ್ರದಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ವ್ಯಕ್ತಿಯ ತಲೆ ಸಂಪೂರ್ಣ ಛಿದ್ರಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖವೂ ಛಿದ್ರಗೊಂಡ ಪರಿಣಾಮ ಅವರ ಮುಖ ಪರಿಚಯವೂ ಸಾಧ್ಯವಾಗಿಲ್ಲ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು ಪಾಂಡೇಶ್ವರ ಪೊಲೀಸರು ಸೆಕ್ಷನ್ 304 ಅಡಿ ಕೊಲೆಗೆ ಸಮಾನ ಆಗಬಲ್ಲ ಅಪರಾಧ ಎಸಗಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿ 40-42 ವಯಸ್ಸಿನವರು ಎನ್ನಲಾಗುತ್ತಿದ್ದು ಅಪರಿಚಿತನ ಪತ್ತೆಗಾಗಿ ಸಂಶಯ ಇದ್ದವರು ಪಾಂಡೇಶ್ವರ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಶವವನ್ನು ವೆಸ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.

Ashitha S

Recent Posts

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

13 mins ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

29 mins ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

48 mins ago

ಬಿಜೆಪಿ ಈಗ ಬೆಳೆದು ನಿಂತಿದೆ ಅದಕ್ಕೆ ಆರ್ ಎಸ್ ಎಸ್ ಬೆಂಬಲ ಬೇಕಾಗಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…

53 mins ago

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

1 hour ago

ಕಲಬುರಗಿ: ಅಂಧ ಮಕ್ಕಳ ಶಾಲೆಗೆ 100% ಫಲಿತಾಂಶ

ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ…

1 hour ago