Categories: ಮಂಗಳೂರು

ಪಾವೂರು–ಉಳಿಯ: ಮಳೆ ಶುರುವಾಗುತ್ತಲೇ ದ್ವೀಪವಾಸಿಗಳಿಗೆ ಕಳವಳ, ದೋಣಿಯೇ ಗತಿ

ಮಂಗಳೂರು: ನೇತ್ರಾವತಿ ನದಿಯಲ್ಲಿ ರುವ ಪಾವೂರು–ಉಳಿಯ ದ್ವೀಪ ವಾಸಿಗಳಿಗೆ ಮಳೆಗಾಲ ಸಮೀಪಿಸುತ್ತಲೇ ಕಳವಳ ಶುರುವಾಗುತ್ತದೆ. ನದಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಪಾದಚಾರಿ ಸೇತುವೆಯನ್ನು ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚುವ ಮುನ್ನವೇ ಬಿಚ್ಚಿಡಬೇಕು. ಇಲ್ಲದಿದ್ದರೆ, ಪ್ರವಾಹದಲ್ಲಿ ಅದು ಕೊಚ್ಚಿ ಹೋಗುತ್ತದೆ.

ಮಳೆಗಾಲದಲ್ಲಿ ನದಿ ದಾಟಲು ದೋಣಿಯೇ ಗತಿ. ಹಾಗಾಗಿ ಮಳೆಗಾಲ ಇವರಿಗೆ ದುಃಸ್ವಪ್ನವಿದ್ದಂತೆ.

ನಗರದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ ಪಾವೂರು–ಉಳಿಯ ದ್ವೀಪ. ಇಲ್ಲಿ 52 ಕುಟುಂಬಗಳು ನೆಲೆಸಿವೆ. ಈ ದ್ವೀಪ ನದಿಯ ದಕ್ಷಿಣ ದಿಕ್ಕಿನಲ್ಲಿರುವ ಹರೇಕಳ ಗ್ರಾಮ ಪಂಚಾಯಿತಿಗೆ ಸೇರಿದ್ದರೂ, ಇಲ್ಲಿನ ನಿವಾಸಿಗಳು ದೈನಂದಿನ ವ್ಯವಹಾರಗಳಿಗೆ ಪಶ್ಚಿಮ ದಿಕ್ಕಿನಲ್ಲಿರುವ ಮಂಗಳೂರು ನಗರವನ್ನೇ ನೆಚ್ಚಿಕೊಂಡಿದ್ದಾರೆ.

ಮಂಗಳೂರಿಗೆ ಹೋಗಲು ಇಲ್ಲಿನ ನಿವಾಸಿಗಳು ದೋಣಿಯನ್ನು ಬಳಸುತ್ತಿದ್ದರು. ‌ದಶಕಗಳ ಹಿಂದೆ ಇಲ್ಲಿನ ನಿವಾಸಿಗಳು ನೇತ್ರಾವತಿಯಲ್ಲಿ ನೀರಿನ ಹರಿವು ಕಡಿಮೆಯಾ‌‌‌ದ ಬಳಿಕ, ಮರದ ಕಂಬಗಳನ್ನು ಬಳಸಿ ಸೇತುವೆ ನಿರ್ಮಿಸುತ್ತಿದ್ದರು. ಮರಳುಗಾರಿಕೆ ಹೆಚ್ಚಾದಂತೆ ನದಿಪಾತ್ರವೂ ಅಗಲವಾಯಿತು. 450 ಅಡಿ ಉದ್ದದ ಸೇತುವೆ ಬದಲು 900 ಅಡಿ ಉದ್ದದ ಸೇತುವೆ ನಿರ್ಮಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಸೇತುವೆ ನಿರ್ಮಿಸುವುದನ್ನೇ ಬಿಟ್ಟುಬಿಟ್ಟಿದ್ದರು.

‘ಈ ದ್ವೀಪದ ಇನ್ಫೆಂಟ್‌ ಜೀಸಸ್‌ ಚರ್ಚ್‌ನ ಪಾದ್ರಿಯಾಗಿದ್ದ ಫಾ.ಜೆರಾಲ್ಡ್‌ ಲೋಬೊ ಅವರು, ಊರಿನವರ ಕಷ್ಟ ಕಂಡು ದಾನಿಗಳ ನೆರವಿನಿಂದ ತಾತ್ಕಾಲಿಕ ಸೇತುವೆ ನಿರ್ಮಿಸಲು ಕಬ್ಬಿಣದ ಪೈಪ್‌ಗಳು ಹಾಗೂ ಹಲಗೆಗಳ ವ್ಯವಸ್ಥೆ ಮಾಡಿದ್ದರು. ಸುಮಾರು ₹18 ಲಕ್ಷ ದಲ್ಲಿ ಐದು ವರ್ಷಗಳ ಹಿಂದೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆವು’ ಎಂದು ಸ್ಥಳೀಯ ರಾದ ಗಿಲ್ಬರ್ಟ್‌ ಡಿಸೋಜ ತಿಳಿಸಿದರು.

ಇನ್ನು ತಾತ್ಕಾಲಿಕ ಸೇತುವೆ ಇರದು?

‘ಪಾವೂರು–ಉಳಿಯ ದ್ವೀಪದ ಪಶ್ಚಿಮ ದಿಕ್ಕಿನಲ್ಲಿ ನೇತ್ರಾವತಿ ನದಿಗೆ ಹೊಸ ಅಣೆಕಟ್ಟು ನಿರ್ಮಿಸ ಲಾಗಿದೆ. ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲು ಶುರು ಮಾಡಿದರೆ ನಾವು ದ್ವೀಪಕ್ಕೆ ಸೇತುವೆ ನಿರ್ಮಿಸುವ ಜಾಗದಲ್ಲಿ ನೀರಿನ ಮಟ್ಟ ಈಗಿನದಕ್ಕಿಂತ 3 ಮೀಟರ್‌ಗಳಷ್ಟು ಹೆಚ್ಚಾಗಲಿದೆ. ಆಗ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲು ಸಾಧ್ಯವಾಗದು. ನಮ್ಮ ದ್ವೀಪಕ್ಕೆ ಪ್ರತ್ಯೇಕ ಕಾಂಕ್ರೀಟ್‌ ಸೇತುವೆ ನಿರ್ಮಿಸಿ ಕೊಡದಿದ್ದರೆ ವರ್ಷಪೂರ್ತಿ ನದಿ ದಾಟಲು ದೋಣಿಯೇ ಗತಿ’

Gayathri SG

Recent Posts

ಬಿಜೆಪಿ ಪ್ರಚಾರದ ನಿಮಿತ್ತ ಅಫಜಲಪುರಕ್ಕೆ ಕರಾವಳಿ ಶಾಸಕ ಯಶ್ ಪಾಲ್ ಸುವರ್ಣ

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರ ಪರವಾಗಿ ಕರಾವಳಿ ತೀರದ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ…

3 mins ago

ಮೃಣಾಲ್ ಹೆಬ್ಬಾಳ್ಕರ್​ ಪರ ನೇಹಾ ತಂದೆ ಪ್ರಚಾರ; ನೆಟ್ಟಿಗರ ಆಕ್ರೋಶ

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

24 mins ago

ಇಂದು ಚಕ್ರವರ್ತಿ ಸೂಲಿಬೆಲೆ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗಿ

ತಾಲೂಕಿನ ಕರಜಗಿ ಗ್ರಾಮದಲ್ಲಿ ಇಂದು ಸಾಯಂಕಾಲ 6 ಗಂಟೆಗೆ ನಮೋ ಬ್ರಿಗೇಡ್ ವತಿಯಿಂದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಬಹಿರಂಗ…

31 mins ago

ಗನ್‌ ಪಾಯಿಂಟ್‌ ಇಟ್ಟು ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ !

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

41 mins ago

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ಇಬ್ಬರು ಸಾವು

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.

55 mins ago

ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ; ತಾಯಿ, ಮಗು ಸಾವು

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಆಕೆಯ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುವ ಅಘಾತಕಾರಿ…

1 hour ago