News Karnataka Kannada
Sunday, April 21 2024
Cricket
ಮಂಗಳೂರು

ಅ.೧೦ರಂದು ಪುತ್ತೂರಿನ ಬಾಲವನದಲ್ಲಿ ಡಾ. ಕಾರಂತರ ೧೬೬ನೇ ಜನ್ಮದಿನೋತ್ಸವ

On October 10, Dr. Karanth's 166th birth anniversary
Photo Credit : News Kannada

ಪುತ್ತೂರು: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತ ಅವರ ೧೨೨ನೇ ಜನ್ಮದಿನೋತ್ಸವ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭವು ಅ.೧೦ರಂದು ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ಬುಧವಾರ ಪುತ್ತೂರು ತಾಲೂಕು ಆಡಳಿತ ಸೌಧದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್ ನಂದನ್ ಅವರು ಪ್ರಶಸ್ತಿ ಪ್ರಧಾನ ಸಮಾರಂಭ ಈ ಹಿಂದೆ ಸಂಜೆ ನಡೆಯುತ್ತಿತ್ತು. ಈ ಬಾರಿ ಬೆಳಿಗ್ಗೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ, ರಂಗಭೂಮಿ, ವಿಜ್ಞಾನ, ಪರಿಸರ, ಕಲಾ ವಿಭಾಗದಲ್ಲಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ ಅದರಲ್ಲಿ ಜೀವಮಾನ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಮಿತಿ ಮೂಲಕ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಾಹಿತಿ ಡಾ. ಎಚ್.ಜಿ.ಶ್ರೀಧರ್ ಸಹಾಯಕ ನಿರ್ದೇಶಕ ರಾಜೇಶ್ ಕಲ್ಬಾವಿ,ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಸಾಹಿತಿ ಡಾ. ವರದರಾಜ ಚಂದ್ರಗಿರಿ, ಡಾ. ಅಮೃತ ಮಲ್ಲ, ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಹಿರಿಯ ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ, ವಿವೇಕಾನಂದ ಕಾಲೇಜಿನ ನಿವೃತ್ತ ಪಾಂಶುಪಾಲ ಡಾ. ಮಾಧವ ಭಟ್, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಸಂತಕುಮಾರ್ ತಾಳ್ತಜೆ, ವಿವೇಕಾನಂದ ಕಾಲೇಜಿನ ಕುಲಪತಿ ಡಾ.ಎಚ್.ಜಿ.ಶ್ರೀಧರ್, ಉಪನ್ಯಾಸಕ ಡಾ.ರಾಜೇಶ್ ಬಿಜ್ಜಂಗಳ, ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ನಾಯಕ್, ವಕೀಲ ಬೆಟ್ಟ ಈಶ್ವರ ಭಟ್, ನಗರಸಭಾ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸಿಡಿಪಿಒ ಶ್ರೀಲತಾ, ಶಿಕ್ಷಣ ಇಲಾಖೆಯ ಶಶಿಕಲಾ, ರತ್ನಕುಮಾರಿ,ಬಾಲವನ ಸಂಯೋಜಕ ಜಗನ್ನಾಥ ಅರಿಯಡ್ಕ, ಶಿಕ್ಷಕ ರಮೇಶ್ ಉಳಯ ಮತ್ತಿತರರು ಉಪಸ್ಥಿತರಿದ್ದರು.

ಬಾಲವನ ಪ್ರಶಸ್ತಿ ಪುರಸ್ಕೃತರು:
ಕುರುಂಜಿ ವೆಂಕಟ್ರಮಣ ಗೌಡ ಅವರು ನೀಡಿದ ದತ್ತಿನಿಧಿಯೊಂದಿಗೆ ೨೦೧೦ರಿಂದ ಕಾರಂತ ಬಾಲವನ ಪ್ರಶಸ್ತಿ ಆರಂಭಗೊಂಡಿದ್ದು, ಬೊಳುವಾರು ಮಹಮ್ಮದ್ ಕುಂಞ(ಸಾಹಿತ್ಯ) ವಿಜ್ಞಾನ ವಿದ್ಯಾರ್ಥಿಗಳಾದ ಪ್ರಮೋದ್ ಕುಮಾರ್ ಮತ್ತು ಭಾರ್ಗವ(ವಿಜ್ಞಾನ), ಸಿ.ಎಸ್, ಪೇತ್ರಿ ಮಾಧನ ನಾಯಕ್ (ಕಲೆ) ಚಿದಂಬರ ರಾವ್ ಜಂಬೆ (ರಂಗಭೂಮಿ), ನಾಗೇಶ್ ಹೆಗಡೆ (ಪರಿಸರ) ವೈದೇಹಿ (ಸಾಹಿತ್ಯ), ಬನ್ನಂಜೆ ಸಂಜೀವ ಸುವರ್ಣ(ಕಲೆ) ಜಯಂತ ಕಾಯ್ಕಿಣಿ (ಸಾಹಿತ್ಯ) ಪ್ರೊ.ಅಮೃತ ಸೋಮೇಶ್ವರ (ಸಾಹಿತ್ಯ) ಪ್ರೊ. ಕೆ.ಪಿ.ರಾವ್ (ವಿಜ್ಞಾನ) ಮತ್ತು ಕೆ.ವಿ. ಅಕ್ಷರ(ರಂಗಭೂಮಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು