News Karnataka Kannada
Monday, April 22 2024
Cricket
ಮಂಗಳೂರು

ಎ.ಜೆ. ಹಾಸ್ಪಿಟಲ್‌ನಲ್ಲಿ ಹೃದಯ ರಕ್ಷಣೆಗೆ ಮೂರು ಅದ್ಭುತ ಉಪಕರಣಗಳ ಉದ್ಘಾಟನೆ

ಎ.ಜೆ. ಆಸ್ಪತ್ರೆ ಹೃದಯ ವಿಭಾಗದಲ್ಲಿ ರೋಗಿಗಳ ಉತ್ತಮ ರೋಗನಿರ್ಣಯ ಮತ್ತು ಆರೈಕೆಗೆ ಸಹಾಯ ಮಾಡುವ ಮೂರು ವಿಶಿಷ್ಟ ಸೌಲಭ್ಯಗಳನ್ನು ಲಕ್ಷ್ಮಿ ಮೆಮೋರಿಯಲ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಜೆ ಶೆಟ್ಟಿ ಅವರು ಬುಧವಾರ ಉದ್ಘಾಟಿಸಿದರು.
Photo Credit : NewsKarnataka

ಮಂಗಳೂರು: ಎ.ಜೆ. ಆಸ್ಪತ್ರೆ ಹೃದಯ ವಿಭಾಗದಲ್ಲಿ ರೋಗಿಗಳ ಉತ್ತಮ ರೋಗನಿರ್ಣಯ ಮತ್ತು ಆರೈಕೆಗೆ ಸಹಾಯ ಮಾಡುವ ಮೂರು ವಿಶಿಷ್ಟ ಸೌಲಭ್ಯಗಳನ್ನು ಲಕ್ಷ್ಮಿ ಮೆಮೋರಿಯಲ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಜೆ ಶೆಟ್ಟಿ ಅವರು ಬುಧವಾರ ಉದ್ಘಾಟಿಸಿದರು.

ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ(OCT): ಈ ಯಂತ್ರವು ಕೃತೃಮ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡುತ್ತದೆ. ಇದು ಬೆಂಗಳೂರಿನ ನಂತರ ಕರ್ನಾಟಕದಲ್ಲಿ ಎರಡನೇ ಯಂತ್ರವಾಗಿದೆ, ಇದನ್ನು ಅಬ್ಬೋಟ್ ಹೆಲ್ತ್ ಸೈನ್ಸಸ್ ಯುಎಸ್ಎ ಪೂರೈಸಿದೆ. ಈ ಯಂತ್ರವು ಕ್ಯಾಥ್ ಲ್ಯಾಬ್‌ನಲ್ಲಿ ಆಂಜಿಯೋಪ್ಲಾಸ್ಟಿಯ ಸಮಯದಲ್ಲಿ ರಕ್ತನಾಳಗಳ ವಿವರವಾದ 3D ಚಿತ್ರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಹೃದಯ ತಜ್ಞರಿಗೆ ನಿಖರವಾಗಿ ಸ್ಟೆಂಟ್ ಅಳವಡಿಸಲು ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಹೃದಯದ MRI & CT: ಎ.ಜೆ. ಆಸ್ಪತ್ರೆಯ MRIಯು ಆಧುನಿಕ ಹೃದಯ ಸಾಫ್ಟ್‌ವೇರ್‌ಗಳೊಂದಿಗೆ ಹೃದಯದ ಚಲನೆಗಳು, ಕವಾಟದ ಸಮಸ್ಯೆಗಳು, ಹೃದಯದ ಸ್ನಾಯುಗಳ ಆರೋಗ್ಯ ಮುಂತಾದ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಅದಕ್ಕೆ ಯಾವುದೇ ಹಸ್ತಕ್ಷೇಪ ಅಥವಾ ವಿಕಿರಣದ ಅಪಾಯಗಳಿಲ್ಲ. MRI ಯನ್ನು ಪೂರಕವಾಗಿ 256 ಸ್ಲೈಸ್ ಆಧುನಿಕ ಕೃತೃಮ ಬುದ್ಧಿಮತ್ತೆಯ CT ಮತ್ತು ಸೀಮೆನ್ಸ್ ಯುಎಸ್ಎ ಯಿಂದ ಪ್ರಮುಖ PET CT ಇದೆ. ಇದಕ್ಕೆ ಬೆಂಬಲವಾಗಿ ಈ ವರದಿಗಳನ್ನು ವಿಶ್ಲೇಷಿಸಲು ಡೆಡಿಕೇಟೆಡ್ ಕಾರ್ಡಿಯಾಕ್ ಇಮೇಜಿಂಗ್ ರೇಡಿಯೋಲಜಿಸ್ಟ್ ಇದ್ದಾರೆ. ಮತ್ತೆ, ಬೆಂಗಳೂರಿನ ಕೆಲವ ಕೇಂದ್ರಗಳ ಹೊರತು ಇಲ್ಲಿ ಲಭ್ಯವಿರುವ ವಿಶಿಷ್ಟ ಸೌಲಭ್ಯವಾಗಿದೆ.

ಆಧುನಿಕ ಎಕೋಕಾರ್ಡಿಯೋಗ್ರಾಂ ಯಂತ್ರ 4D ಯೊಂದಿಗೆ: ಫಿಲಿಪ್ಸ್ ಯುಎಸ್ಎ ಯಿಂದ ಪೂರೈಸಲ್ಪಟ್ಟ ಇದು ಮತ್ತೆ ಕರ್ನಾಟಕದಲ್ಲಿ ಎರಡನೇ ಸ್ಥಾಪನೆಯಾಗಿದೆ. ಟ್ರಾನ್ಸ್ ಒಸೊಫೇಜಲ್ ಸ್ಕ್ಯಾನಿಂಗ್‌ ಸೇರಿದಂತೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. ಈ ಯಂತ್ರವು ವಯಸ್ಕ, ಮಕ್ಕಳ ಮತ್ತು ನವಜಾತ ಶಿಶುಗಳ ನಿಖರ ಹೃದಯ ಸ್ಕ್ಯಾನ್‌ಗಳನ್ನು ನೀಡುತ್ತದೆ.

ಈ ಆಧುನಿಕ ಉಪಕರಣಗಳೊಂದಿಗೆ, ಎ.ಜೆ. ಆಸ್ಪತ್ರೆಯ ಹೃದಯ ರಕ್ಷಣಾ ವಿಭಾಗವು ವಿಶ್ವದ ಅತ್ಯಾಧುನಿಕ ಕೇಂದ್ರಗಳ ಸಾಲಿಗೆ ಸೇರಿದೆ. ವಿಶೇಷ ಪರಿಣತಿ ಹೊಂದಿರುವ ಡಾಕ್ಟರ್‌ಗಳು ಮತ್ತು ಸಿಬ್ಬಂದಿಗಳ ಬೆಂಬಲದೊಂದಿಗೆ ಅಗತ್ಯವಿರುವವರಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ LMET ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ, ವೈದ್ಯಕೀಯ ನಿರ್ದೇಶಕರಾದ ಡಾ ಪ್ರಶಾಂತ್ ಮಾರ್ಲ, ನಿರ್ದೇಶಕರಾದ ಡಾ ಅಮಿತಾ ಮಾರ್ಲ, ಡಾ ಅಶೋಕ್ ಹೆಗ್ಡೆ – ಡೀನ್, ಹೃದ್ರೋಗ ತಜ್ಞರು – ಡಾ. ಮಂಜುನಾಥ್ ಬಿ ವಿ, ಡಾ.ಪುರುಷೋತ್ತಮ್, ಡಾ.ಪ್ರವೀಣ್ ಶೆಟ್ಟಿ, ಡಾ.ಪ್ರೇಮ್ ಆಳ್ವ, ಜೊತೆಗೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು