News Karnataka Kannada
Friday, April 12 2024
Cricket
ಮಂಗಳೂರು

ಮಂಗಳೂರು: ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರ ಅಲ್ಪ ಇಳಿಕೆ

Nandini curd, lassi, buttermilk prices cut marginally
Photo Credit : By Author

ಮಂಗಳೂರು: ಏರಿಕೆ ಕಂಡಿದ್ದ ನಂದಿನಿ ಮೊಸರು ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ಸೋಮವಾರ ಮತ್ತೆ ಪರಿಷ್ಕರಣೆ ಮಾಡಲಾಗಿದೆ ಭಾನುವಾರ ಈ ಉತ್ಪನ್ನಗಳ ದರಗಳನ್ನು ಒಂದರಿಂದ 3ರಷ್ಟು ಹೆಚ್ಚಿಸಲಾಗಿತ್ತು ಆದರೆ ಈಗ ಈ ಎಲ್ಲಾ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ 1.50 ರಷ್ಟು ಕಡಿಮೆ ಮಾಡಲಾಗಿದೆ.

ಗ್ರಾಹಕರಿಂದ ಬೆಲೆಯೇರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್ ಈ ಕ್ರಮ ಕೈಗೊಂಡಿದೆ .ಪರಿಷ್ಕರಿಸಿದ ದರಗಳ ಅನ್ವಯ 200 ಗ್ರಾಂ ಮೊಸರಿಗೆ 10.50ರೂಪಾಯಿಗೆ ನಿಗದಿಪಡಿಸಲಾಗಿದೆ ಇದರಿಂದ ಮೂಲ ಹಿಂದಿನ ದರಕ್ಕಿಂತ 50 ಪೈಸೆಯಷ್ಟು ಮಾತ್ರ ಹೆಚ್ಚಿಸಿದಂತಾಗಿದೆ . 200 ಮಿಲಿ ಲೀಟರ್ ಮಜ್ಜಿಗೆ ದರವು 7ರಿಂದ 8ಕ್ಕೆ ಹೆಚ್ಚಿಸಲಾಗಿದ್ದು ಪರಿಷ್ಕೃತ ದರಗಳ ಅನ್ವಯ 7.50 ರೂಪಾಯಿಗೆ ನಿಗದಿಪಡಿಸಲಾಗಿದೆ . ಇದೇ ರೀತಿ 200 ಮಿಲಿಲೀಟರ್ ಲಸ್ಸಿ ದರವನ್ನು ಹತ್ತರಿಂದ ಹನ್ನೊಂದು ಕ್ಕೆ ಹೆಚ್ಚಿಸಲಾಗಿತ್ತು.

ಈಗ ಹೊಸ ದರಗಳನ್ವಯ 10.50 ರೂಪಾಯಿಗೆ ನಿಗದಿಪಡಿಸಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಜುಲೈ 19 ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರು ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಮತ್ತೊಮ್ಮೆ ಮರು ಪರಿಷ್ಕರಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು