Categories: ಮಂಗಳೂರು

ಮೂಡಿಗೆರೆ: ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಗೆಲ್ಲಿಸಿ- ದೀಪಕ್ ದೊಡ್ಡಯ್ಯ

ಮೂಡಿಗೆರೆ: ಮೂಡಿಗೆರೆ ರಾಜ್ಯದ ಅಭಿವೃದ್ಧಿ ಕೇವಲ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ.   ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್‌ ದೊಡ್ಡಯ್ಯ ತಿಳಿಸಿದರು.

ಅವರು ಕಸಬಾ ಹೋಬಳಿ ಮಾಕೋನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ,   ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮಹಿಳೆಯರು ದೀನ ದಲಿತರು ಮತ್ತು ಮಧ್ಯಮ ವರ್ಗದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅದನ್ನು ಯಶಸ್ವಿಯಾಗಿ ಜನಸಾಮಾನ್ಯರ ಮನೆ ಮನೆಗೆ ತಲುಪಿಸಲಾಗಿದೆ.

ಮುಖ್ಯವಾಗಿ ಇಡೀ ವಿಶ್ವವೇ ಕೋವಿಡ್ ನಿಂದ ತತ್ತರಿಸಿದಾಗ ಭಾರತದಲ್ಲಿ ಉಚಿತ ವ್ಯಾಕ್ಸಿನ್ ಮತ್ತು ಆರೋಗ್ಯ ಸೇವೆಯನ್ನು ನೀಡಿ ಜನರ ಜೀವ ಉಳಿಸಿ ಇಡೀ ವಿಶ್ವಕ್ಕೆ ಮಾದರಿ ದೇಶ ಎನಿಸಿಕೊಂಡಿತು. ಅಲ್ಲದೆ ಹಸಿದವರಿಗೆ ಉಚಿತ ಅಕ್ಕಿ ಕೂಡ ನೀಡಲಾಯಿತು, ರಾಜ್ಯ ಸರ್ಕಾರವು ರಸ್ತೆ, ವಸತಿ, ವಿದ್ಯುತ್, ಶಿಕ್ಷಣ, ಮಹಿಳಾ ಸಬಲಿಕರಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ಮೂಲಕ ಜನರಿಗೆ ಮಾದರಿ ಆಡಳಿತ ನೀಡಿದ್ದು, ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು,
ಸಾಮೂಹಿಕ ಹತ್ಯೆಗೆ ಕುಮ್ಮಕ್ಕು ನೀಡಿದ್ದು, ಮತ್ತೊಮ್ಮೆ ರಾಜ್ಯವನ್ನು ದಿವಾಳಿಗೆ ನೂಕಲು ತಯಾರಾಗಿದ್ದು, ಇದನ್ನು ತಡೆಯಲು ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ವೇಳೆ ಅಭ್ಯರ್ಥಿ ಪ್ರಮುಕ್ ಕೆಸಿ ರತನ್, ಕಲ್ಲೆಶ್, ಕೃಷ್ಣೆಗೌಡ, ಸುರೇಂದ್ರ ಡಿಎಸ್ ವಿಜಯ್ ಕುಮಾರ್, ಮನೋಜ್ ಹಳೆಕೋಟೆ, ಸುನೀಲ್ ಪುರ ಜ್ಯೆರಾಮ್ ಸಂದೀಪ್, ಮಂಜು ಮತ್ತಿತರಿದ್ದರು.

Gayathri SG

Recent Posts

ಕೆಲ ಬಿಜೆಪಿ ಕಾರ್ಯಕರ್ತರಿಂದ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಚುನಾವಣಾ ಆಯೋಗದ ನಿಯಮಗಳನ್ನ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ತಸ್ವೀ‌ರ್ ಎಂಬುವ ವ್ಯಕ್ತಿ…

3 mins ago

ಫೋಟೋ ತೆಗೆಯಲು ಬಂದ ಅಭಿಮಾನಿಗೆ ಥಳಿಸಿದ ಶಕಿಬ್ ಅಲ್ ಹಸನ್‌

ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಹಿರಿಯ ಆಲ್​ರೌಂಡರ್​ ಶಕಿಬ್ ಅಲ್ ಹಸನ್‌ ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಥಳಿಸಲು ಮುಂದಾಗಿರುವ…

20 mins ago

ಹೆಚ್​​ಡಿ ರೇವಣ್ಣಗೆ ಮೇ 14ರವರೆಗೆ ನ್ಯಾಯಾಂಗ ಬಂಧನ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​​ಡಿ ರೇವಣ್ಣ ಅವರಿಗೆ ಏಳು ದಿನದವರೆಗೆ ಅಂದರೆ ಮೇ…

31 mins ago

ಸರ್ಕಾರಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ನರ್ಸ್ ವೊಬ್ಬರು ಸ್ಕೂಟಿಯಲ್ಲಿ ಓಡಾಟ

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ವೊಬ್ಬರು ಕಪ್ಪು ಕನ್ನಡಕ ಹಾಕಿಕೊಂಡು ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ನ ರೋಗಿಗಳ ಬಳಿ ಸ್ಕೂಟಿಯಲ್ಲಿ ಹೋಗಿ  ಚಿಕಿತ್ಸೆ…

49 mins ago

ಚಾಮರಾಜನಗರದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ  ಮಹಿಳಾ ಕಾಂಗ್ರೆಸ್ ಘಟಕ  ಪ್ರತಿಭಟನೆ…

49 mins ago

ರೇವಣ್ಣ ಕಿಡ್ನಾಪ್ ಕೇಸ್​ : ಜಾಮೀನು ಅರ್ಜಿ ವಿಚಾರಣೆ ​ಮುಂದೂಡಿದ ಕೋರ್ಟ್​

ಪ್ರಜ್ವಲ್ ರೇವಣ್ಣ ಪೆನ್​ ಡ್ರೈವ್ ಕೇಸ್​ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್​ ಡಿ ರೇವಣ್ಣ ಎಸ್​ಐಟಿ…

55 mins ago