Categories: ಮಂಗಳೂರು

ಮೂಡುಬಿದಿರೆ: ಇಡೀ ಜಗತ್ತಿನ ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿ

ಮೂಡುಬಿದಿರೆ: ಇಡೀ ಜಗತ್ತಿನ ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದೆ. ಜೈನ ಸಂಪ್ರದಾಯದಂತೆ ಈ ಕ್ಷೇತ್ರವು ಭೂತಕಾಲ-ವರ್ತಮಾನ ಮತ್ತು ಭವಿಷ್ಯತ್‌ ಕಾಲದ ಎಲ್ಲಾ ತೀರ್ಥ೦ಕರರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಶಾಶ್ವತ ಸಿದ್ಧಕ್ಷೇತ್ರವಾಗಿರುತ್ತದೆ. ವರ್ತಮಾನ ಕಾಲದ 24 ತೀರ್ಥಂಕರರ ಪೈಕಿ 20 ಜನ ತೀರ್ಥಂಕರರು ಈ ಬೆಟ್ಟದ ಮೇಲೆ ಪುರುಷಾರ್ಥ ಮಾಡಿ ಸಿದ್ಧಪದವಿ ಪ್ರಾಪ್ತಿ ಮಾಡಿರುತ್ತಾರೆ. ದಿನಂಪ್ರತಿ ಸಾವಿರಾರು ಜನ ಜೈನರು ಭಕ್ತಿ ಶ್ರದ್ಧೆಯಿಂದ ಈ ಕ್ಷೇತ್ರದ ದರ್ಶನ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳುತ್ತಾರೆ. ದಿಗಂಬರ ಮತ್ತು ಶ್ವೇತಾಂಬರ ಪಂಥದ ಮುನಿಗಳು, ಆರ್ಯಿಕೆಯರು, ಕ್ಷುಲ್ಲಕರು ಮತ್ತು ಐಲಕರು ಕೂಡಾ ಇಂದಿಗೂ ಅಲ್ಲಿನ ದರ್ಶನ ಮಾಡಿ ಜನ್ಮ ಸಾರ್ಥಕ ಮಾಡುತ್ತಿದ್ದಾರೆ.

ಸುಮಾರು 9 ಕಿ.ಮೀ ನಡೆದು ಬೆಟ್ಟವನ್ನು ಏರಿ ಕಿ.ಮೀ ಪ್ರದೇಶದಲ್ಲಿರುವ ಚರಣ 9 ಪಾದುಕೆಗಳನ್ನು ದರ್ಶನ ಮಾಡಿ 9 ಕಿ.ಮೀ ಇಳಿದು ಒಂದೇ ದಿನದಲ್ಲಿ ತೀರ್ಥ ಕ್ಷೇತ್ರದ ದರ್ಶನವನ್ನು ಕಾಲ್ನಡಿಗೆಯಿಂದ ಮಾಡಬೇಕಾಗಿದೆ.

ಅದಿವಾಸಿಗಳಿಂದ ತುಂಬಿದ ಅಲ್ಲಿನ ಸ್ಥಳೀಯ ಜನರು ಕೂಡ ಈ ತೀರ್ಥ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ವಿಶೇಷ.

ಜಾರ್ಖಂಡ್ ರಾಜ್ಯ ಸರಕಾರದ ಈ ನಿಲುವಿನಿಂದ ಅಲ್ಪಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆ ಜೈನರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ ಅನಾದಿಕಾಲದಿಂದ ಇರುವ ಪುಣ್ಯಭೂಮಿಯ ಪಾವಿತ್ರ್ಯತೆಯನ್ನು ರಕ್ಷಿಸಿ ಈ ಹಿಂದಿನ ಹಾಗೆ ಜೈನರ ಶಾಶ್ವತ ಕ್ಷೇತ್ರವಾಗಿ ಮುಂದಕ್ಕೂ ಅವಕಾಶ ಮಾಡಿಕೊಡುವಂತೆ ಮತ್ತು ಈಗಾಗಲೇ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಭಾರತದ ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಗಳಿಗೆ ಹಾಗೂ ಜಾರ್ಖಂಡ್‌ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುವರೇ ಮೌನಮೆರವಣಿಗೆಯನ್ನು ಆಯೋಜಿಸಲಾಗಿದೆ.

ಜೈನಕಾಶಿ ಮಾಡಬಿದಿರೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಶ್ರಾವಕ-ಶ್ರಾವಿಕೆಯರು ಒಟ್ಟು ಸೇರಿ ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮತ್ತು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ತಾಲೂಕು ಆಡಳಿತದ ಮುಖ್ಯಸ್ಥರ ಮೂಲಕ ನಮ್ಮ ಹಕ್ಕೊತ್ತಾಯನ್ನು ಸಲ್ಲಿಸುವರೇ ದಿನಾಂಕ 28-12-20225 ಬುಧವಾರ ಬೆಳಿಗ್ಗೆ ವಿಶ್ವಪ್ರಸಿದ್ಧ ತಿಭುವನತಿಲಕ ಚೂಡಾಮಣಿ ಬಸದಿಯಿಂದ(ಸಾವಿರಕಂಬದ ಬಸದಿ) ಮೌನ ಮೆರವಣಿಗೆಯನ್ನು ಮೂಡುಬಿದಿರೆ ಸ್ವರಾಜ್ಯ ಮೈದಾನದ ತನಕ ಹಮ್ಮಿಕೊಳ್ಳಲಾಗಿದೆ.

“ಸಮ್ಮೇದ ಶಿಖರ್ಜಿ ಬಚಾವೋ” ಎಂಬ ಶೀರ್ಷಿಕೆಯೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೧ ಎಲ್ಲಾ ಧರ್ಮಬಂಧುಗಳು ಸೇರಿ ಪವಿತ್ರ ತೀರ್ಥಕ್ಷೇತ್ರಗಳನ್ನು ಮೋಜು-ಮಸ್ತಿ ಕೇಂದ್ರಗಳನ್ನಾಗಿ ಪರಿವರ್ತಿಸದಂತೆ ಒತ್ತಾಯಿಸಿ ಭಾರತದ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ ಎಂದು ಕೆ.ಅಭಯಯಚಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪುಷ್ಪರಾಜ ಜೈನ್, ಪ್ರವೀಣ್‌ಚಂದ್ರ ಜೈನ್, ಸುದರ್ಶನ ಜೈನ್, ಯುವರಾಜ ಜೈನ್, ಪದ್ಮಪ್ರಸಾದ ಜೈನ್, ಕೆ.ಕೃಷ್ಣಪ್ರಸಾದ ಹೆಗ್ಡೆ, ಎಂ.ಆದರ್ಶ ಜೈನ್ ಉಪಸ್ಥಿತರಿದ್ದರು.

 

Sneha Gowda

Recent Posts

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

6 mins ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

26 mins ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

48 mins ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

55 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

1 hour ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

1 hour ago