Categories: ಮಂಗಳೂರು

ಮೂಡುಬಿದಿರೆ: ಮೂಡುಬಿದಿರೆಗೆ ಸರಕಾರಿ ಬಸ್ – ಜವನೆರ್ ಬೆದ್ರ ಆಗ್ರಹ

ಮೂಡುಬಿದಿರೆ: ಮೂಡುಬಿದಿರೆ ಹಾಗೂ ಆಸುಪಾಸಿನ ಪ್ರದೇಶಗಳಿಗೆ ಸುಗಮ ಸಂಚಾರಕ್ಕಾಗಿ ಸರಕಾರಬಸ್ಸುಗಳನ್ನು ನಿಯೋಜಿಸುವಂತೆ ಜವನೆರ್ ಬೆದ್ರ ಯುವ ಸಂಘಟನೆ ಆಗ್ರಹಿಸಿದೆ.

ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್‌ಕೋಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡುಬಿದಿರೆ ಕೇಂದ್ರಿತವಾಗಿ ಸುತ್ತಮುತ್ತಲ ಪ್ರದೇಶಗಳಿಗೆ ಖಾಸಗಿ ವಾಹನಗಳನ್ನೇ ಅವಲಂಬಿಸಿ ಸಂಚಾರ ನಡೆಸಬೇಕಾಗಿದೆ.ಮೂಡುಬಿದಿರೆಯಿಂದ ಮಂಗಳೂರು, ಮೂಡುಬಿದಿರೆ-ಕಾರ್ಕಳ, ಮೂಡುಬಿದಿರೆ-ಬೆಳ್ತಂಗಡಿ, ಕಿನ್ನಿಗೋಳಿ, ಕಟೀಲು, ಶಿರ್ತಾಡಿ, ನಾರಾವಿ, ಬೆಳ್ಮಣ್ ಇರುವೈಲು, ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಪ್ರವಾಸೋದ್ಯಮ ನಿಮಿತ್ತ ಹಲವಾರು ಮಂದಿ ಸಂಚಾರ ನಡೆಸುತ್ತಿದ್ದು, ಸರಕಾರ ಬಸ್ಸುಗಳನ್ನು ಬಂದರೆ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.

ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ದೊರಕಬೇಕಾದರೆ ಮೂಡುಬಿದಿರೆಯಲ್ಲಿ ಸರಕಾರ ಬಸ್ಸುಗಳು ಅತೀ ಅವಶ್ಯಕ. ಹಾಗೇಯೇ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ಸಂಚಾರದ ಪ್ರಯೋಜನ ದೊರಕುವಂತಾಗಲು ಸರ್ಕಾರ ಗಮನ ಹರಿಸಬೇಕು ಎಂದರು.

ಈ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವರು, ವಿಧಾನಸಭಾ ಸ್ವೀಕರ್, ಕ್ಷೇತ್ರದ ಶಾಸಕರು, ಸಂಸದರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿಯೂ ತಿಳಿಸಿದರು. ಖಾಸಗಿ ಬಸ್ಸುಗಳ ವೇಗದ ಆಟಾಟೋಪಕ್ಕೂ ಪೂರ್ಣವಿರಾಮ ನೀಡಲು ಸಾಧ್ಯವಿರುವುದಾಗಿ ತಿಳಿಸಿದರು.
ಸರ್ಕಾರ 3 ತಿಂಗಳೊಳಗೆ ಈ ಬೇಡಿಕೆಯನ್ನು ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜವನೆರ್ ಬೆದ್ರ ಗೌರವ ಸಲಹೆಗಾರ ರಾಜೇಂದ್ರ ಜಿ., ಕ್ರೀಡಾ ಸಂಚಾಲಕ ನಾರಾಯಣ ಪಡುಮಲೆ, ರಕ್ತನಿಧಿ ಪ್ರಮುಖ್ ಮನೋಹರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Ashika S

Recent Posts

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

21 mins ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

44 mins ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

48 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

54 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

1 hour ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

1 hour ago