Categories: ಮಂಗಳೂರು

ಮೇ 29: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ  ಮೇ ೨೯ ರಂದು ಸೋಮವಾರ ಸಂಜೆ ೩.೦೦ ಗಂಟೆಗೆ  ಮುಲ್ಕಿ ಬಳಿಯ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ,  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರು ವಹಿಸಲಿದ್ದಾರೆ.
ಒಕ್ಕೂಟದ ಮಹಾದಾನಿ  ಕನ್ಯಾನ ಸದಾಶಿವ ಶೆಟ್ಟಿಯವರು ದೀಪ ಪ್ರಜ್ವಲನೆಗೈಯಲಿದ್ದಾರೆ.  ಸಮಾಜ ಕಲ್ಯಾಣ ಕಾರ್ಯಕ್ರಮದ ಉದ್ಘಾಟನೆಯನ್ನು  ಎಂಆರ್ ಜಿ ಗ್ರೂಪ್ ನ ಚೇಯರ್ ಮೆನ್ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲ್‌ದೀಪ್ ಕುಮಾರ್ ಆರ್. ಜೈನ್ ಐಪಿಎಸ್ ಭಾಗವಹಿಸಲಿದ್ದಾರೆ.

ಒಕ್ಕೂಟದ ಪೋಷಕರಾದ ಆನಂದ ಶೆಟ್ಟಿ ತೋನ್ಸೆ,  ಪ್ರವೀಣ್ ಭೋಜ ಶೆಟ್ಟಿ,  ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ರವಿನಾಥ್ ಶೆಟ್ಟಿ ಅಂಕಲೇಶ್ವರ್,  ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ ಎಂ ಕರುಣಾಕರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಉಡುಪಿ, ಡಾ ನಿರಂಜನ್ ಶೆಟ್ಟಿ ಕೆದೂರು, ದಯಾಮಣಿ ಶೆಟ್ಟಿ ಎಕ್ಕಾರ್, ನೀತಾ ರಾಜೇಶ್ ಶೆಟ್ಟಿ ಹಿರಿಯಡ್ಕ, ಅರ್ಪಿತಾ ಶೆಟ್ಟಿ ಕಟಪಾಡಿ, ಹಿರಿಯ ಪತ್ರಕರ್ತರಾದ ಆರ್ ರಾಮಕೃಷ್ಣ, ಮಹಮ್ಮದ್ ಆರೀಫ್ ಪಡುಬಿದ್ರೆ, ನಿತಿನ್ ಸಾಲ್ಯಾನ್ ಅವರನ್ನು ಗೌರವಿಸಲಾಗುವುದು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತರಿರುವರು.

Sneha Gowda

Recent Posts

ಹಾಸನ ವಿಡಿಯೋ ಕೇಸ್ ಪ್ರಕರಣ: ಅನ್ಯಾಯ ಯಾರಿಗೆ ಆದರೂ ಅದು ಅನ್ಯಾಯವೇ ಎಂದ ಎಸ್. ನಾರಾಯಣ್

ಹಾಸನದ ವಿಡಿಯೋ ಕೇಸ್ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ‌. ಅದರ ಬಗ್ಗೆ ನಾವು ಮಾತನಾಡದೇ…

11 mins ago

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 19 ರೂ. ಇಳಿಕೆ

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ 19 ರೂ. ಇಳಿಕೆ ಮಾಡಲಾಗಿದೆ.

39 mins ago

ಮುಸ್ಲಿಮರಿಗೆ ಮೀಸಲಾತಿ: ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದ ಮಾವಳ್ಳಿ ಶಂಕರ್‌

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂದು ಆರ್‌ಎಸ್‌ಎಸ್‌, ಬಿಜೆಪಿ ಅಪಪ್ರಚಾರ…

60 mins ago

ರಾಜ್ಯದಲ್ಲಿ 20 ಲಕ್ಷ ಜನರಿಗೆ ಉದ್ಯೋಗ ನೀಡುವಂತೆ ಭರವಸೆ ನೀಡಿದ ಎನ್‌ಡಿಎ ಗ್ಯಾರಂಟಿ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳೂ ಜನರನ್ನು ತಮ್ಮ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ…

1 hour ago

ಕೃಷಿ ಸ್ವಾವಲಂಬನೆ ಪ್ರತೀಕ : ಡಾ.ರಾಮಕೃಷ್ಣ ಆಚಾರ್

ಕೃಷಿ ಸ್ವಾವಲಂಬನೆ ಪ್ರತೀಕ ಕೃಷಿ ಮೂಲಕ ಜೀವನ ನಡೆಸಲು ಸೂಕ್ತ ಅವಕಾಶ ಇದೆ ಕೃಷಿ ಮನುಷ್ಯನ ಆರೋಗ್ಯ, ಆಯುಷ್ಯ, ಸಂಪತ್ತನ್ನು…

2 hours ago

ಚಿನ್ನ, ಬೆಳ್ಳಿ ಬೆಲೆ ಕೊಂಚ ಇಳಿಕೆ: ಇಂದಿನ ದರ ಹೀಗಿದೆ!

ಎರಡು ಮೂರು ವಾರಗಳ ಹಿಂದೆ ಅಸ್ವಾಭಾವಿಕವಾಗಿ ಏರಿದ್ದ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕ್ರಮೇಣ ಇಳಿಕೆ ಕಾಣುವ ನಿರೀಕ್ಷೆ ಇದೆ.…

2 hours ago