Categories: ಮಂಗಳೂರು

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ,10 ಕೆಜಿ ಗಾಂಜಾ ವಶ

ಮಂಗಳೂರು: ನಗರದ ಹೊರವಲಯದಲ್ಲಿರುವ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಡ್ಯಾಂನ ಫಲ್ಗುಣಿ ನದಿ ತೀರದ ಬಳಿ ಬೃಹತ್ ಪ್ರಮಾಣದ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕರಿಬ್ಬರನ್ನು ಕಾವೂರು ಪೊಲೀಸರು ದಸ್ತಗಿರಿ ಮಾಡಿ 10 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಲಕ್ಕನಪಳ್ಳಿ‌‌ ನಿವಾಸಿ ಸಾಹೀಲ್(19), ಮಂಗಳೂರಿನ ಸೊಮೇಶ್ವರದ ಸಂಕೋಲಿಗೆ ನೇತಾಜಿ ರೋಡ್ ನಿವಾಸಿ ಪಿ. ಮನ್ಸೂ‌ರ್ (21) ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ನೇತೃತ್ವದಲ್ಲಿ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಡ್ಯಾಂನ ಫಲ್ಗುಣಿ ನದಿ ತೀರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ವಶದಲ್ಲಿದ್ದ 10.125 ಕೆಜಿ ಗಾಂಜಾ ಸ್ವಾಧಿನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gayathri SG

Recent Posts

ಚಲಿಸುತ್ತಿದ್ದ ಬಸ್‌ನಿಂದ ಕಳಚಿಕೊಂಡ ಚಕ್ರಗಳು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಚಲಿಸುತ್ತಿದ್ದ ಸಾರಿಗೆ ಬಸ್‌ನ ಚಕ್ರ ಕಳಚಿಕೊಂಡು ಬಸ್‌ನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ…

8 mins ago

ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ಹಣ ಕಳ್ಳತನ: ಆರೋಪಿ ವಶಕ್ಕೆ

ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ಹಣ ಕಳ್ಳತನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಡೋಲು ಪಟ್ಟಣದ ಟೂಟೌನ್ ಪೊಲೀಸ್ ಠಾಣಾ…

33 mins ago

ಕುಕ್ಕೆ ದೇವಳಕ್ಕೆ ಯೇಸುರಾಜ್ ನೂತನ ಎಇಒ; ಶರಣ್ ಪಂಪ್ವೆಲ್ ಅಪಸ್ವರ, ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಎಸ್ .ಜೆ ಯೇಸುರಾಜ್ ಎ.30 ರಂದು ಅಧಿಕಾರ ಸ್ವೀಕರಿಸಿದರು. ರಾಮನಗರ…

36 mins ago

ಕಾಂಗ್ರೆಸ್ ನಾಯಕ ಎಂ.ಸಿ ವೇಣುಗೋಪಾಲ್ ಮನೆ ಮೇಲೆ ಐಟಿ ದಾಳಿ

ಕಾಂಗ್ರೆಸ್ ನಾಯಕರೂ ಆಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಸಿ ವೇಣುಗೋಪಾಲ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ…

58 mins ago

ವೇಷ ಕಳಚುವ ವೇಳೆ ಹೃದಯಾಘಾತ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ…

1 hour ago

ಸೈಂಟ್ ಜೋಸೆಫ್ ವಿವಿಯಲ್ಲಿ ʼಟೆಕ್ಎಕ್ಸ್ 2.0ʼ  ರಾಷ್ಟ್ರೀಯ ಟೆಕ್ ಶೃಂಗಸಭೆ

ಸೈಂಟ್ ಜೋಸೆಫ್ ವಿವಿಯಲ್ಲಿ ಏಪ್ರಿಲ್ 29 ರಂದು  ಟೆಕ್ಎಕ್ಸ್ 2.0’  ನಡೆಯಿತು. ಈ ಕಾರ್ಯಕ್ರಮದಲ್ಲಿ ಐಟಿ ಉದ್ಯಮದ ನಾಲ್ಕು ಗಮನಾರ್ಹ…

1 hour ago